Advertisement
ರಾಜ್ಯದಲ್ಲಿ 267 ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿ ಈಗಾಗಲೇ ರಾಷ್ಟ್ರೀಯ ವೃತ್ತಿ ಶಿಕ್ಷಣ ಕೌಶಲ ಚೌಕಟ್ಟು (ಎನ್‌ಎಸ್‌ಕ್ಯುಎಫ್) ಪಠ್ಯ ಅಳವಡಿಸಲಾಗಿದೆ. ಈ ಶಾಲೆಗಳಲ್ಲಿ 9ನೇ ತರಗತಿಯ ಬಳಿಕ ತೃತೀಯ ಭಾಷೆಯ ಬದಲು ಮಾಹಿತಿ ತಂತ್ರಜ್ಞಾನ, ಅಟೋಮೊಬೈಲ್, ಬ್ಯೂಟಿ ಮತ್ತು ವೆಲ್‌ನೆಸ್ ಇತ್ಯಾದಿ ಕಲಿಯಲು ಅವಕಾಶ ನೀಡಲಾಗಿದೆ. ಇನ್ನು ಕೃಷಿಯೂ ಸೇರ್ಪಡೆಯಾಗಲಿದೆ.ಕೃಷಿ ಕ್ಷೇತ್ರದಲ್ಲಿ ಕೌಶಲದ ಅಗತ್ಯ ಮತ್ತು ಈ ವಲಯ ದಲ್ಲಿ ಉದ್ಯೋಗ ಅವಕಾಶಗಳನ್ನು ಗಮನಿಸಿ ಕೃಷಿ ಸೇರ್ಪಡೆಗೆ ರಾಜ್ಯ ಸರಕಾರ ತೀರ್ಮಾನಿಸಿದೆ.
ಆರಂಭಿಕ ಹಂತದಲ್ಲಿ 29 ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿ ಕೃಷಿಯನ್ನು ಒಂದು ವಿಷಯವನ್ನಾಗಿ ಕಲಿಸಲು ತಯಾರಿ ನಡೆಸ ಲಾಗಿದೆ. 2024-25ರ ಸಾಲಿನಿಂದ ಕೃಷಿ ಚಟುವಟಿಕೆಯನ್ನು ಪಠ್ಯಕ್ಕೆ ಸೇರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಹೆಚ್ಚುತ್ತಿರುವ ಬೇಡಿಕೆಕೋರ್ಸ್ನಲ್ಲಿ 9ನೇ ತರಗತಿಯನ್ನು ಲೆವೆಲ್ 1 ಮತ್ತು 10ನೇ ತರಗತಿಯನ್ನು ಲೆವೆಲ್ 2, ಪಿಯು ಮೊದಲ ವರ್ಷ ಲೆವೆಲ್ 3 ಮತ್ತು 2ನೇ ವರ್ಷ ಲೆವಲ್ 4 ಎಂದು ಪರಿಗಣಿಸಲಾಗುತ್ತದೆ. ರಾಜ್ಯದಲ್ಲಿ ಎನ್‌ಎಸ್‌ಕ್ಯುಎಫ್ ಅಳವಡಿಸಿಕೊಳ್ಳು ತ್ತಿರುವ ಶಾಲೆಗಳ ಸಂಖ್ಯೆ ಮತ್ತು ವಿಷಯ ವನ್ನು ಆಯ್ದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. 2021-22ನೇ ಸಾಲಿನಲ್ಲಿ 16,743 ವಿದ್ಯಾರ್ಥಿ ಗಳು ನೋಂದಾಯಿಸಿಕೊಂಡಿ ದ್ದರು. 2022-23ರ ಸಾಲಿನಲ್ಲಿ 21,514 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿ ದ್ದಾರೆ. ನೋಂದಣಿ ಶೇ. 20ರಷ್ಟು ಏರಿದೆ. ಕೃಷಿಯನ್ನು ಒಂದು ವಿಷಯವನ್ನಾಗಿ ಪರಿಗಣಿಸಲು ನಾವು ಸಿದ್ಧ. ನಮ್ಮ ಎನ್‌ಎಸ್‌ಕ್ಯುಎಫ್ ಕೋರ್ಸ್‌ಗಳಿಗೆ ಉತ್ತಮ ಬೇಡಿಕೆಯಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಅಭ್ಯಾಸ ಮಾಡುತ್ತಿದ್ದಾರೆ.
– ಕೆ.ಎನ್. ರಮೇಶ್, ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ - ರಾಕೇಶ್ ಎನ್.ಎಸ್.