Advertisement

Agriculture: ಮನೆಯ ತಾರಸಿನಲ್ಲಿ 200ಕ್ಕೂ ಹೆಚ್ಚು ಬೆಳೆ: ಜೋಸೆಫ್ ಲೋಬೋ ಸಾಧನೆ

03:56 PM Nov 29, 2023 | Team Udayavani |

ಕಟಪಾಡಿ: ಮನೆಯ ತಾರಸಿಯನ್ನೇ ಕೃಷಿಯ ತೋಟವಾಗಿಸಿ ಹಣ್ಣು ಹಂಪಲು, ಮಲ್ಲಿಗೆ ಸಹಿತ ಹೂವು, ಔಷಧೀಯ ಸಸ್ಯಗಳು, ತರಕಾರಿಗಳನ್ನು ಬೆಳೆಯುವ ಮೂಲಕ ಉಡುಪಿ ಜಿಲ್ಲೆಯ ಶಂಕರಪುರ ಕಂಚಿನಕೆರೆ ಬಿಜಿಕ್ರೆಕಾಡು ನಿವಾಸಿ ಜೋಸೆಫ್‌ ಲೋಬೋ ಅವರು ತನ್ನ ಆಹಾರದಲ್ಲಿ ಬಹುತೇಕ ಸ್ವಾವಲಂಬಿಯಾಗಿದ್ದಾರೆ.

Advertisement

ತನ್ನ ವಾಸದ ಮನೆಯ ಸುಮಾರು 1200 ಚದರ ಅಡಿ ತಾರಸಿಯಲ್ಲಿ ಕಾಸರಗೋಡು-7 ತಳಿಯ ಗೇರು, ಆಲ್‌ ಸೀಸನ್‌ ಮಾವು, ಚಿಕ್ಕು, ಪೀನಟ್‌ ಬಟರ್‌, 7 ವಿವಿಧ ಬಗೆಯ ಚೆರಿ ಹಣ್ಣುಗಳು, ಬಿಳಿ ನೇರಳೆ, ಬೀಜ ರಹಿತ ಲಿಂಬೆ, ಮಿರಾಕಲ್‌ ಫ್ರುಟ್‌, ಔಷಧೀಯ ಸಸ್ಯಗಳು, ಜೇನು ಸಾಕಣೆ, ವಿವಿಧ ರೀತಿಯ ತರಕಾರಿಗಳನ್ನು ಬೆಳೆಸುತ್ತಿದ್ದು, ಸುಮಾರು 200ಕ್ಕೂ ವಿವಿಧ ತಳಿಯ ಗಿಡಗಳು ಇವರ ತಾರಸಿಯಲ್ಲಿ ಬೆಳೆಯುತ್ತಿದ್ದು ತನ್ನ ಆಹಾರದಲ್ಲಿ ತಾನು ಸ್ವಾವಲಂಬಿಯಾಗಿದ್ದು ಮಾತ್ರವಲ್ಲದೇ ಜೇನು ಸಾಕಣೆ, ಹೈನುಗಾರಿಕೆಯನ್ನು ನಡೆಸುವ ಮೂಲಕ ಗಿಡಗಳಿಗೆ ಜೈವಿಕ ಗೊಬ್ಬರ, ನೈಸರ್ಗಿಕ ಜೇನು ಉತ್ಪಾದನೆಯನ್ನೂ ನಡೆಸುತ್ತಿದ್ದಾರೆ.

ಸರ್ವ ಸಾಂಬಾರ್‌ ಗಿಡ, ಮಸಾಲ ಸೊಪ್ಪು, ರುದ್ರಾಕ್ಷಿ ಗಿಡ, ಕರ್ಪೂರ ಗಿಡ, ಹಿರೇಹಳ್ಳಿ ಡಾರ್ಫ್‌, ಖರ್ಜೂದ ಗಿಡ, ಪಾಟ್‌ ಬನಾನ, ಕರಿಮೆಣಸು ಕೂಡಾ, ಅಡಕೆ ಗಿಡ ಇವರ ತಾರಸಿಯಲ್ಲಿ ಬೆಳೆಯುತ್ತಿದ್ದಾರೆ.

ರಾಜ್ಯದಲ್ಲಿ  ಪ್ರಥಮ ಜಲಕೃಷಿ  ಕೃಷಿಕ:

Advertisement

ಪಟ್ಟಣಗಳಲ್ಲಿನ ಮನೆ ಮಂದಿಗೆ ತಮ್ಮ ಬಿಡುವಿಲ್ಲದ ಜೀವನದ ನಡುವೆಯೂ ಮನೆಯ ತಾರಸಿಯಲ್ಲಿ, ಲಭ್ಯ ಸ್ಥಳಾವಕಾಶದಲ್ಲಿ  ಜಲಕೃಷಿ ವಿಧಾನದ ಮೂಲಕ ತರಕಾರಿ, ಹಣ್ಣು ಹಂಪಲು, ಹೂವಿನ ಗಿಡಗಳನ್ನು ಬೆಳೆಯಲು ಸಾಧ್ಯವಿದೆ ಎಂಬ ನಿಟ್ಟಿನಲ್ಲಿ ಪ್ರಥಮವಾಗಿ ಜಲಕೃಷಿ ವಿಧಾನದ ಮಲ್ಲಿಗೆಯನ್ನು ಬೆಳೆಸಲು ಆರಂಭಿಸಿದ ರಾಜ್ಯದ ಪ್ರಥಮ ಪ್ರಯೋಗ ಶೀಲ ಕೃಷಿಕರಾಗಿ ಗುರುತಿಸಿಕೊಂಡು ಸಮ್ಮಾನಗಳಿಗೂ ಪಾತ್ರರಾಗಿರುವ ಜೋಸೆಫ್‌ ಲೋಬೋ ತಿಳಿಸುತ್ತಿದ್ದು, ಪತ್ನಿ ನೀಮಾ ಲೋಬೋ, ಕರಾಟೆಯಲ್ಲಿ ಅಂತಾರಾಷ್ಟ್ರೀಯ ಚಿನ್ನದ ಪದಕ ವಿಜೇತ ಪುತ್ರಿ ಜೆನಿಶಾ ಲೋಬೋ (ವಿದ್ಯಾರ್ಥಿನಿ)ಅವರ ಸಹಕಾರವನ್ನು ಸ್ಮರಿಸುತ್ತಾರೆ.

ನೆರಳು, ಮರದ ಬೇರುಗಳ ಹಾವಳಿ -ಮಲ್ಲಿಗೆ ಕೃಷಿ ವೈಫಲ್ಯವೇ ಪ್ರೇರಣೆ:

ತನ್ನ 18 ಸೆಂಟ್ಸ್‌ ಸ್ಥಳದಲ್ಲಿ ನೆರಳು, ಮರದ ಬೇರುಗಳ ಹಾವಳಿಯಿಂದ ಮಲ್ಲಿಗೆ ಬೆಳೆಯುವಲ್ಲಿ ಕಂಡಂತಹ ವೈಫಲ್ಯವು ತಾರಸಿ ಕೃಷಿಗೆ ಪ್ರೇರಣೆಯಾಗಿದ್ದು ಯಶಸ್ವಿಯಾಗಿದ್ದೇನೆ ಎನ್ನುವ ಜೋಸೆಫ್‌ ಲೋಬೋ ಅವರು ರಾಜ್ಯಾದ್ಯಂತ ನಡೆಯುವ ಕೃಷಿ ಮೇಳಗಳಿಗೆ ತೆರಳಿ ಅಲ್ಲಿ ಕಂಡು ಬರುವ ವಿಶೇಷ ತಳಿಗಳ ಗಿಡಗಳನ್ನು (ವಿದೇಶೀ ತಳಿ)ಬೆಳೆಸುವ ಪ್ರಯೋಗ ಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದು, ಅವಶ್ಯಕ ಇದ್ದವರಿಗೆ ತೋಟ ಸಿದ್ಧಪಡಿಸಿಕೊಡುವ ಕಾಯಕ ನಿರತರಾಗಿದ್ದಾರೆ. ಇವರ ಈ ಸಾಧನೆಗೆ ಮನ್ನಣೆ ಲಬಿಸುತ್ತಿದ್ದು, ವಿವಿಧ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು ಸಂಪನ್ಮೂಲ ವ್ಯಕ್ತಿಯಾಗಿ ಅವರ ಯಶೋಗಾಥೆಯನ್ನು ಬಳಸಿಕೊಳ್ಳುತ್ತಿದ್ದು, ಯುವಜನಾಂಗವು ಹಸುರು ಪ್ರಕೃತಿ ಬೆಳೆಸುವಲ್ಲಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಪ್ರಯೋಗ ಶೀಲ ಥಾರಸಿ ಕೃಷಿಕ ಜೋಸೆಫ್‌ ಲೋಬೋ ಮನದ ಮಾತಿನಂತೆ ತನ್ನ  ತಾರಸಿ ಕೃಷಿಯಲ್ಲಿ ಜೈವಿಕ-ನಿಸರ್ಗದತ್ತ ಲಭ್ಯ ಹಣ್ಣು ಹಂಪಲು, ತರಕಾರಿ ಮನೆಬಳಕೆಗೆ ಮತ್ತು ನೆಂಟರಿಷ್ಟರು ಆಪೆ¤àಷ್ಟರಿಗೆ ಕೊಡಲು ಬಳಸುತ್ತೇನೆ. ಮಿಕ್ಕುಳಿದವು ಬಾನಾಡಿಗಳಿಗೆ, ಪ್ರಾಣಿಗಳಿಗೆ ಆಹಾರವಾಗುತ್ತದೆ. ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ. ಮನೆಯ ಥಾರಸಿ ಕೃಷಿ ತೋಟವಾಗಿದ್ದು, ಮನೆಯೊಳಗೆ ತಂಪಾದ ವಾತಾವರಣವು ಆರೋಗ್ಯಕ್ಕೆ ಪೂರಕ- ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದೇನೆ.

ನೀಮಾ ಲೋಬೋ ತಿಳಿಸುವಂತೆ  ಇನ್ನೊಬ್ಬರ ಕೈ ಕೆಳಗೆ ದುಡಿಯುವ ಬದಲು ನಮ್ಮ ನೈಸರ್ಗಿಕ ಆಹಾರದಲ್ಲಿ ಸ್ವಾವಲಂಬಿಗಳಾಗಿ ನಮ್ಮ ಆರೋಗ್ಯ-ನೆಮ್ಮದಿ ತಾರಸಿ ಕೃಷಿಯಲ್ಲಿ ಲಭಿಸುತ್ತಿದೆ. ಹಾಗಾಗಿ ಪತಿಯೊಂದಿಗೆ ಕೈ ಜೋಡಿಸುತ್ತಿದ್ದೇನೆ.

-ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next