Advertisement

ಕೃಷಿಗೆ ಅಪಾರ ಕೊಡುಗೆ ನೀಡಿದ ಬಾಬುರಾಂ

01:09 PM Apr 11, 2017 | |

ಹುಣಸೂರು: ತಾಲೂಕಿನ ಬನ್ನಿಕುಪ್ಪೆ ಗ್ರಾಪಂ ಕೇಂದ್ರದಲ್ಲಿ ಮಾಜಿ ಉಪಪ್ರಧಾನಿ ಬಾಬು ಜಗಜೀವನ್‌ರಾಂ ಅವರ 109ನೇ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಚಿಕ್ಕಸುಜಾತ ಉದ್ಘಾಟಿಸಿ ಮಾತನಾಡಿ, ದಾರ್ಶನಿಕರ, ಮಹಾನ್‌ ವ್ಯಕ್ತಿಗಳ ಜಯಂತಿ ಗಳಿಂದು ಆಚರಣೆಗೆ ಮಾತ್ರ ಸೀಮಿತ ವಾಗುತ್ತಿದ್ದು, ಜಾತಿರಹಿತವಾಗಿ ಆಚರಣೆ ಮಾಡಿದಲ್ಲಿ ಮಾತ್ರ ಮಹಾನ್‌ ವ್ಯಕ್ತಿಗಳ ಜಯಂತಿಗೆ ನಿಜವಾದ ಅರ್ಥ ಸಿಗಲಿದೆ. ಇಂತಹ ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆ, ಸಾಧನೆ, ಕೊಡುಗೆಗಳ ಬಗೆಗಿನ ಪುಸ್ತಕಗಳನ್ನು ಯುವ ಪೀಳಿಗೆ ಓದಬೇಕು ಎಂದರು.

ಪಿಡಿಒ ಸೋಮಯ್ಯ ಮಾತನಾಡಿ, ಬಾಬುಜಿ, ಅಂಬೇಡ್ಕರ್‌, ಸ್ವಾಮಿ ವಿವೇಕಾ ನಂದ, ಕನಕದಾಸರು ಹಾಗೂ ಬಸವಣ್ಣ ಅವರನ್ನು ಜಯಂತಿಗಳಲ್ಲಿ ಮಾತ್ರ ನೆನೆಸಿ ಕೊಂಡು ಅವರ ತತ್ವಸಿದ್ದಾಂತಗಳನ್ನು ಅಳೆಯಬೇಡಿ, ರಾಷ್ಟ್ರ ನಾಯಕರಾದ ಬಾಬುಜಿ ಆಹಾರ ಭದ್ರತೆಯಲ್ಲಿ, ಕೃಷಿ, ರೈಲ್ವೆ ಹಾಗೂ ರಕ್ಷಣ ಸಚಿವರಾಗಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಗ್ರಾಪಂ ಸದ್ಯಸರಾದ ಎಂ.ಎಸ್‌.ರಮೇಶ್‌, ಮಹದೇವಸ್ವಾಮಿ, ಲಕ್ಷ್ಮೀ, ಕಾರ್ಯದರ್ಶಿ ಸಂತೋಷ್‌, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮದ ಬಾಬು ಜಗಜೀವನ್‌ ರಾಂ ಸಂಘದ ಪದಾಧಿಕಾರಿಗಳು, ಮುಖಂಡರಾದ ಚಂದ್ರು, ಸಣ್ಣಸ್ವಾಮಿ, ಮಹದೇವ, ಅಮವಾಸೆ, ಶಿವಣ್ಣ, ಶಿವಮಲ್ಲು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next