ಕಾಸರಗೋಡು: ತೆಂಗಿನ ಕೀಟ ರೋಗ ನಿಯಂತ್ರಣ ಮತ್ತು ಆರೋಗ್ಯ ರಕ್ಷಣೆ ಕುರಿತಾಗಿ ಕಾರ್ಯಾಗಾರ ಕಾಸರಗೋಡಿನ ಕೇಂದ್ರ ತೋಟಗಾರಿಕಾ ಬೆಳೆ ಸಂಶೋಧನ ಕೇಂದ್ರ(ಸಿಪಿಸಿಆರ್‌ಐ)ದಲ್ಲಿ ನಡೆಯಿತು.
ಜಿಲ್ಲೆಯ ಪಂಚಾಯತ್‌ಗಳಿಂದ ಆಯ್ಕೆಯಾದ ತೆಂಗು ಕೃಷಿಕರು ಮತ್ತು ಕೃಷಿ ಇಲಾಖೆಯ ಸಿಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಪ್ರಿನ್ಸಿಪಲ್ ಕೃಷಿ ಅಧಿಕಾರಿ ಟಿಸಮ್ಮ ಥೋಮಸ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಸಿಪಿಸಿಆರ್‌ಐ ನಿರ್ದೇಶಕ ಡಾ|ಕೆ.ಬಿ.ಹೆಬ್ಟಾರ್ ಅಧ್ಯಕ್ಷತೆ ವಹಿಸಿದರು. ತೆಂಗಿಗೆ ಕೀಟ ರೋಗ ಮತ್ತು ಬೆಳೆ ನಷ್ಟದ ಕುರಿತಾಗಿ ಸಿದ್ಧಪಡಿಸಿದ ಕೃತಿಯನ್ನು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಎ. ಜಲೀಲ್ ಬಿಡುಗಡೆಗೊಳಿಸಿದರು.
ಕಾಸರಗೋಡು ಆತ್ಮಾ ಪ್ರೊಜೆಕ್ಟ್ ನಿರ್ದೇಶಕಿ ಸ್ಟೆಲ್ಲಾ ಜೇಕಬ್ ಮುಖ್ಯ ಭಾಷಣ ಮಾಡಿದರು. ಸೇವೆಯಿಂದ ನಿವೃತ್ತರಾಗುವ ಕೃಷಿ ವಿಜ್ಞಾನ ಕೇಂದ್ರದ ಚೀಫ್ ಟೆಕ್ನಿಕಲ್ ಆಫೀಸರ್ ಡಾ| ಎಸ್. ಲೀನಾ, ಪ್ರಿನ್ಸಿಪಲ್ ಕೃಷಿ ಅಧಿಕಾರಿ ಟೀಸಮ್ಮ ಥೋಮಸ್ ಅವರನ್ನು ಗೌರವಿಸಲಾಯಿತು. ಪ್ರಿನ್ಸಿಪಲ್ ಸೈಂಟಿಸ್ಟ್ ಡಾ| ಸಿ. ತಂಬಾನ್, ಸೈಂಟಿಸ್ಟ್ ಡಾ| ಪಿ.ಎಸ್. ಪ್ರತಿಭಾ ಮೊದಲಾದವರು ಮಾತನಾಡಿದರು.
ಪ್ರಿನ್ಸಿಪಲ್ ಸೈಂಟಿಸ್ಟ್ ಡಾ| ಸಿ. ತಂಬಾನ್ ಸ್ವಾಗತಿಸಿದರು. ಪ್ರಿನ್ಸಿಪಲ್ ಸೈಂಟಿಸ್ಟ್ ಡಾ| ಕೆ.ಪಿ. ಚಂದ್ರನ್ ವಂದಿಸಿದರು.