Advertisement

ಮುದ್ದೇಬಿಹಾಳ ಸಾವಯವ, ಸಮಗ್ರ ಕೃಷಿ ತರಬೇತಿ, ಸಂಶೋಧನೆ ಕೇಂದ್ರಕ್ಕೆ ಮನವಿ: ನಡಹಳ್ಳಿ

04:33 PM Feb 22, 2021 | Team Udayavani |

ವಿಜಯಪುರ: ಮುದ್ದೇಬಿಹಾಳದಲ್ಲಿ ಸಾವಯವ ಕೃಷಿ ತರಬೇತಿ ಕೇಂದ್ರ, ಸಮಗ್ರ ಕೃಷಿ ಸಂಶೋಧನೆ-ತರಬೇತಿ ಕೇಂದ್ರ ಸ್ಥಾಪಿಸಲು ಮಂಗಳವಾರ ಮುದ್ದೇಬಿಹಾಳ ತಾಲೂಕಿಗೆ ಆಗಮಿಸುತ್ತಿರುವ ಕೃಷಿ ಸಚಿವ ಬಿ.ಸಿ‌.ಪಾಟೀಲ ಅವರಿಗರ ಮನವಿ ಸಲ್ಲಿಸುವುದಾಗಿ ಶಾಸಕರಾದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.

Advertisement

ಸೋಮವಾರ ಮುದ್ದೇಬಿಹಾಳ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುದ್ದೇಬಿಹಾಳ ತಾಲೂಕು ಸಮಗ್ರ ನೀರಾವರಿಯಾಗುತ್ತಿದ್ದು, ಸಮಗ್ರ ಅಭಿವೃದ್ದಿಯತ್ತ ದಾಪುಗಾಲು ಹಾಕುತ್ತಿದೆ. ಸರ್ಕಾರಿ ಜಮೀನು ಲಭ್ಯವಿದ್ದು, ಸಾವಯವ ಕೃಷಿಗೆ ಪೂರಕ ವಾತಾವರಣ ಇದೆ. ಸಾವಯವ ಹಾಗೂ ಸಮಗ್ರ ಕೃಷಿ ತರಬೇತಿ ಹಾಗೂ ಸಂಶೋಧನೆ ಕೇಂದ್ರಗಳನ್ನು ತೆರೆಯುವ ಬೇಡಿಕೆ ಜೊತೆಗೆ ಮನವರಿಕೆ ಮಾಡಲಾಗುತ್ತದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದರು.

ಇದನ್ನೂ ಓದಿ:ಕುಡಿವ ನೀರು ಪೂರೈಸಲು ಖಾಸಗಿ ಬೋರ್‌ವೆಲ್‌ ಬಳಸಿಕೊಳ್ಳಿ

ಇನ್ನು ವಿಜಯಪುರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಮುದ್ದೇಬಿಹಾಳಕ್ಕೆ ಸ್ಥಳಾಂತರಿಸಿದರೆ ರೈತರೊಂದಿಗೆ ಹೋರಾಟ ನಡೆಸುವುದಾಗಿ ಶಾಸಕ ದೇವಾನಂದ ಚವ್ಹಾಣ ಹೇಳಿಕೆಗೆ ಪ್ರತಿಕ್ರಿಯಿಸಲಾರೆ.  ಸದರಿ ಕೇಂದ್ರ ಮುದ್ದೇಬಿಹಾಳಕ್ಕೆ ಸ್ಥಳಾಂತರಿಸಲು 4-5 ವರ್ಷಗಳ ಹಿಂದೆಯೇ ಆದೇಶವಾಗಿದ್ದು, ಸದರಿ ಆದೇಶ ಇನ್ನೂ ಜೀವಂತವಾಗಿದೆ. ಆದರೆ ಈ ಕೇಂದ್ರ ಸ್ಥಳಾಂತರದಿಂದ ನಮ್ಮ ಭಾಗದ ರೈತರಿಗೆ ಏನೂ ಪ್ರಯೋಜನ ಇಲ್ಲ. ಆದರೆ ನಮ್ಮ ರೈತರ ಕೋರಿಕೆಯಂತೆ ಬೇಡಿಕೆ ಇಡಲಿದ್ದು, ಮುದ್ದೇಬಿಹಾಳಕ್ಕೆ ಕೃಷಿ ವಿಸ್ತರಣಾ ಕೇಂದ್ರ ಸ್ಥಳಾಂತರದ ಸಗತ್ಯದ ಕುರಿತು ವಿಶ ಕೃಷಿ ಸಚಿವರ ಗಮನಕ್ಕೆ ತರುತ್ತೇನೆ. ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next