Advertisement

ಕೂಲಿ ಕೆಲಸಕ್ಕೆ ಆಗ್ರಹಿಸಿ ಕೃಷಿ ಕಾರ್ಮಿಕರ ಪ್ರತಿಭಟನೆ

11:51 AM Jun 28, 2019 | Suhan S |

ಗಂಗಾವತಿ: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೂಲಿ ಕೆಲಸ ನೀಡಲು ಆಗ್ರಹಿಸಿ ತಾಲೂಕಿನ ಚಿಕ್ಕಜಂತಗಲ್ ಗ್ರಾಪಂ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕೃಷಿ ಕೂಲಿಕಾರರು ಪ್ರತಿಭಟನೆ ನಡೆಸಿದರು.

Advertisement

ಸಂಘದ ಅಧ್ಯಕ್ಷ ಶಿವಣ್ಣ ಬೆಣಕಲ್ ಮಾತನಾಡಿ, ಸಕಾಲಕ್ಕೆ ಮುಂಗಾರು ಮಳೆ ಆಗದಿರುವುದರಿಂದ ಕೃಷಿ ಕಾರ್ಯಗಳು ನಿಂತಿವೆ. ಕೃಷಿ ಕೂಲಿಕಾರರಿಗೆ ಕೆಲಸವಿಲ್ಲದಂತಾಗಿದೆ. ಕೂಡಲೇ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ನೀಡಬೇಕು. ಈಗಾಗಲೇ ಮಳೆ ಕೊರತೆಯಾಗಿದ್ದು ಜನರು ಗುಳೆ ಹೋಗುವ ಸ್ಥಿತಿ ಇದೆ. ಗುಳೆ ತಪ್ಪಿಸಲು ಕೂಡಲೇ ಕೆಲಸ ನೀಡುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶ್ರೀನಿವಾಸ ಹೊಸಳ್ಳಿ, ಕನಕಪ್ಪ, ಮರಿಯಪ್ಪ, ದುರುಗಪ್ಪ, ದುರುಗಮ್ಮ, ಈರಮ್ಮ, ಮಂಜಮ್ಮ, ರಾಯಣ್ಣ, ವೆಂಕಟೇಶ ಹಳ್ಳಿ, ಹುಲಿಗೆಮ್ಮ ಸೇರಿ ನೂರಾರು ಕೂಲಿಕೆಲಸಗಾರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next