Advertisement

ಕೃಷಿ ಪರಿಕರ ಮಾರಾಟ ಲೋಪ; ನೋಟಿಸ್‌ ಜಾರಿ

11:42 AM May 17, 2020 | Suhan S |

ಗದಗ: ತಾಲೂಕಿನ ವಿವಿಧ ಕೃಷಿ ಪರಿಕರಗಳ ಮಾರಾಟಗಾರರ ಮಳಿಗೆಗಳಿಗೆ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಜಾರಿ ದಳ ತಂಡ ಅನೀರಿಕ್ಷಿತವಾಗಿ ಭೇಟಿದ್ದು, ಕೃಷಿ ಪರಿಕರ ಗುಣ ನಿಯಂತ್ರಣ ಕಾಯ್ದೆಯ ನಿಯಮಾವಳಿಯಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ತಾಲೂಕಿನ ನಾಲ್ವರು ಮಾರಾಟಗಾರರಿಗೆ ಇಲಾಖೆಯಿಂದ ನೋಟಿಸ್‌ ಜಾರಿಗೊಳಿಸಿದೆ.

Advertisement

ಜಾರಿ ದಳದ ಅಧಿಕಾರಿ ಸಂತೋಷ ಪಟ್ಟದಕಲ್ಲ, ಮಲ್ಲಯ್ಯ ಕೂರವನವರ, ಕೃಷಿ ಅಧಿಕಾರಿ ಪವನಕುಮಾರ ಖಮ್ಕಿತರ್‌ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಶುಕ್ರವಾರ ಗದಗ, ಬೆಟಗೇರಿ, ಲಕ್ಕುಂಡಿ ಸೇರಿದಂತೆ ನಾಲ್ಕು ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಕರ ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ನೋಟಿಸ್‌ ನೀಡಿದೆ.

ಜೊತೆಗೆ ರೈತರಿಗೆ ನೋಂದಾಯಿತ ಕಂಪನಿಯ ಪ್ರಮಾಣೀಕರಿಸಿದ ಬೀಜಗಳನ್ನು ಮಾರಾಟ ಮಾಡಬೇಕು. ನಿಗದಿತ ದರವನ್ನು ಸೂಚನಾ ಫಲಕದಲ್ಲಿ ನಮೂದಿಸಿ ಕಂಪನಿಯು ನಿರ್ದಿಷ್ಟಪಡಿಸಿದ ದರದಲ್ಲಿ ಕೃಷಿ ಪರಿಕರಗಳ ಮಾರಾಟ ಮಾಡಬೇಕು. ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಹಾಗೂ ಅವಧಿ ಮುಗಿದ ಬೀಜಗಳನ್ನು ಮಾರಾಟ ಮಾಡಬಾರದು. ಕಳಪೆ ಬೀಜಗಳ ಕಂಡು ಬಂದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದರು. ಕೋವಿಡ್‌-19 ಸೋಂಕು ನಿಯಂತ್ರಣಕ್ಕಾಗಿ ಮಾರಾಟ ಕೇಂದ್ರ, ಮಳಿಗೆಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದು ಗದಗ ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ವಿ.ಗಡಾದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next