Advertisement

ಕೃಷಿ ಪೂರಕ ಆವಿಷ್ಕಾರ: 30 ಮಾದರಿ ಆಯ್ಕೆ

11:47 PM Dec 04, 2019 | mahesh |

ತೆಂಕಿಲ: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಲಘು ಉದ್ಯೋಗ ಭಾರತಿ ಹಾಗೂ ಕ್ಯಾಂಪ್ಕೋ ಆಶ್ರಯದಲ್ಲಿ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ನ. 30 ಹಾಗೂ ಡಿ. 1ರಂದು ನಡೆದ ಅನ್ವೇಷಣ-2019 ರಾಜ್ಯಮಟ್ಟದ ಅಗ್ರಿ ಟಿಂಕರಿಂಗ್‌ ಫೆಸ್ಟ್‌ ನಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಕೃಷಿ ಪೂರಕ ಆವಿಷ್ಕಾರಗಳ ಮೇಳದಲ್ಲಿ 350 ಮಾದರಿಗಳು ಗಮನ ಸೆಳೆದಿವೆ.
ಅವುಗಳಲ್ಲಿ ಲಘು ಉದ್ಯೋಗ ಭಾರತಿಯಿಂದ ಆಯ್ದ 30ನ್ನು ಒಂದು ವರ್ಷದೊಳಗೆ ಅಭಿವೃದ್ಧಿಪಡಿಸುವ ಮಾದರಿಗಳ ಪಟ್ಟಿ ತಯಾರಿಸಲಾಗಿದೆ.

Advertisement

ರೈತರಿಗೆ ಉಪಯುಕ್ತ
ಗಾಯತ್ರಿ ಕೆ. ಭಟ್‌ ಬಡೆಕ್ಕಿಲ ಅವರ ಬೆಳೆ ಸಂರಕ್ಷಣ ಮಾದರಿ, ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಅನಘಾ ವಿಶ್ರಾಂತ ಅವರ ಅಡಿಕೆ ಒಣಗಿಸುವ ತಂತ್ರಜ್ಞಾನ, ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಅಮೃತಾ ಹಾಗೂ ಅನನ್ಯಾ ಅವರ ಪೋರ್ಟೆಬಲ್‌ ಟ್ರಾಲಿ ಮಾದರಿ, ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನ ಜಯಂತ ಹಾಗೂ ರಂಗರಾಜು ಅವರ ಕಳೆ ತೆಗೆಯುವ ಯಂತ್ರ, ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಮಿಥುನ್‌ ಹಾಗೂ ಕ್ಷಿತೀಶ್‌ ಅವರ ಸ್ಮಾರ್ಟ್‌ ಫಾರ್ಮಿಂಗ್‌ ಎಂಬ ಮಾದರಿ, ದೇವದತ್ತ ಭಟ್‌ ಧನುಷ್‌ ಘಾಟೆ ಅವರ ಕೀಟನಾಶಕ ಮಾದರಿ, ವಿಖೀಲ್‌ ಕೆ. ಹಾಗೂ ರವಿಶಂಕರ ಅವರ ಅಡಿಕೆ ಮರದ ಔಷಧ ಸಿಂಪಡಣೆ ಯಂತ್ರ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವೈಷ್ಣವಿ ಪಿ. ಹಾಗೂ ಜಾನ್ವಿ ಶೆಟ್ಟಿ ಅವರ ಸೌರಶಕ್ತಿ ಆಧಾರಿತ ನೀರಾವರಿ ಮಾದರಿ, ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕದ ವಿಘ್ನೇಶ್‌ ಹಾಗೂ ಚರಿತ್‌ ಅವರ ಅಡಿಕೆ ಒಣಗಿಸುವ ತಂತ್ರಜ್ಞಾನ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹೃತಿಕ್‌ ಹಾಗೂ ರಿಹಾನ್‌ ಅವರ ಚಾಲಕ ರಹಿತ ಉಳುಮೆ ಯಂತ್ರ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಿಂಧೂರಾ ಪಿ. ಶೆಟ್ಟಿ ಅವರ ಪರಿಸರ ಸ್ನೇಹಿ ಉಪಕರಣಗಳು, ಚರಣ್‌ ಅವರ ಆಟೋ ಆರ್ಮ್, ವೈಭವ ಹಾಗೂ ಶ್ರೀಯಸ್‌ ಅವರ ಕಡಿಮೆ ಖರ್ಚಿನ ಹೈಡ್ರೋಫೋನಿಕ್ಸ್‌, ಎಸ್‌.ಡಿ.ಎಂ. ಸಿಬಿಎಸ್ಸಿ ಶಾಲೆಯ ಶರಧಿ ಬಿ.ಎಸ್‌. ಹಾಗೂ ಲಕ್ಷ್ಮೀ ಅವರ ತಂಬಾಕು ಆಧಾರಿತ ಕೀಟನಾಶಕ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರೇಕ್ಷಣ್‌ ಹಾಗೂ ತಮನ್‌ ಅವರ ಅಡಿಕೆ ಸಂರಕ್ಷಣ ಮಾದರಿ, ಸೈಂಟ್‌ ಫಿಲೋಮಿನಾ ಪ್ರೌಢ ಶಾಲೆಯ ಆಶ್ಮೀ ಅವರ ಸ್ನೇಕ್‌ ಗಾರ್ಡ್‌, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸನಿ¾ತ್‌ ಹಾಗೂ ಪ್ರತೀಕ್‌ ಅವರ ಬಯೋಮ್ಯಾಟ್‌, ನೇಹಾ ಭಟ್‌ ಹಾಗೂ ಆಶ್ರಯ ಭಟ್‌ ಅವರ ಪರಿಸರ ಸ್ನೇಹಿ ಕೀಟನಾಶಕ ಸಿಂಪಡಣೆಯ ಯಂತ್ರ, ರಾಕೇಶ್‌ ಕೃಷ್ಣ ಅವರ ಬೀಜ ಬಿತ್ತುವ ಯಂತ್ರ, ಕೃಷ್ಣಪ್ರಸಾದ್‌ ಅವರ ಅರೇಕಾ ಸ್ಪ್ರೆàಯರ್‌, ನರೇಂದ್ರ ಪದವಿ ಪೂರ್ವ ಕಾಲೇಜಿನ ಹೃದಯ್‌ ಅವರ ಪ್ರಾಣಿಗಳ ದೇಹದ ಕೀಟಗಳನ್ನು ತಡೆಯುವ ಮಾದರಿ, ಸೈಂಟ್‌ ಫಿಲೋಮಿನಾ ಪ್ರೌಢಶಾಲೆಯ ಸುಹಾನ್‌ ಬೈಲಾಡಿ ಅವರ ರೋಬೋ ಆರ್ಮ್ ಎಂಬ ಮಾದರಿ, ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಶ್ರೇಯಸ್‌ ಹಾಗೂ ಪ್ರಖ್ಯಾತ್‌ ತಂಡದ ಬಹೂಪಯೋಗಿ ನೀರಾವರಿ ಮಾದರಿ, ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಪ್ರಜ್ವಲ್‌ ಹಾಗೂ ಅಭಿಷೇಕ್‌ ರೂಪಿಸಿದ ಅಡಿಕೆ ಸಂರಕ್ಷಕ ಮಾದರಿ ಆಯ್ಕೆ ಮಾಡಲಾಗಿದೆ.

ದನ ಮೇಲೆತ್ತುವ ಯಂತ್ರ
ಈ ಮೇಳದಲ್ಲಿ ಹೈನುಗಾರರಿಗೆ ಸಹಕಾರಿಯಾಗುವಂತಹ ಯಂತ್ರವನ್ನು ಪುತ್ತೂರಿನ ರಮೇಶ್‌ ಅಡ್ಯಾಲು ಅವರ ದನ ಮೇಲೆತ್ತುವ ಯಂತ್ರವನ್ನು ವಿವೇಕಾನಂದ ಪಾಲಿಟೆಕ್ನಿಕ್‌ ಸಂಸ್ಥೆಯು ಅಭಿವೃದ್ಧಿಪಡಿಸಲು ಆಯ್ಕೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next