ಕುಷ್ಟಗಿ: ಸಾಮಾನ್ಯವಾಗಿ ಮೆಕ್ಕೆಜೋಳ ತಗುಲುವ ಹುಸಿ ಸೈನಿಕ ಹುಳು ಬಾಧೆ ಇದೀಗ ಬಿಳಿಜೋಳದಬೆಳೆಗೂ ವಕ್ಕರಿಸಿದ್ದು, ಅನ್ನದಾತರನ್ನು ಘಾಸಿಗೊಳಿಸಿದೆ. ಹಿಂಗಾರು ಹಂಗಾಮಿನ ಬಿಳಿ ಜೋಳಕ್ಕೆ ರೋಗ, ಕೀಟ ಬಾಧೆ ಕಡಿಮೆ. ಈ ಬಾರಿ ತಾಲೂಕಿನಲ್ಲಿ 8,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಕುಷ್ಟಗಿ, ತಾವರಗೇರಾ, ಹನುಮಸಾಗರ ಹೋಬಳಿ ವ್ಯಾಪ್ತಿಯಲ್ಲಿ ಬಿಳಿಜೋಳ ಭರ್ಜರಿ ಇಳುವರಿ ಕಾಣಬಹುದಾಗಿದೆ. 45 ದಿನಗಳ ಬಿಳಿ ಜೋಳದ ಬೆಳೆಗೆ ಹುಸಿ ಸೈನಿಕ ಹುಳು ಬಾಧೆ ಶುರುವಾಗಿದೆ.
ಬೆಳೆ ಭಕ್ಷಕ: ಬಿಳಿಜೋಳ ಮೇಲ್ನೋಟಕ್ಕೆ ಉತ್ತಮವಾಗಿ ಕಂಡರೂ ಎಲೆ(ರವದಿ) ಹರಿದಂತೆ ತೂತಾಗಿರುವುದು ತಿಳಿ ಹಳದಿ ವರ್ಣಕ್ಕೆ ತಿರುಗಿರುವುದು ಕಂಡು ಬರುವ ಈ ಲಕ್ಷಣ ಸುಳಿ ಭಾಗ ಕಿತ್ತು ನೋಡಿದರೆ ಅದರಲ್ಲಿ ಭಕ್ಷಕ ಕೀಟ ತಿಂದು, ಲದ್ದಿ ಹಾಕಿರುವುದು ಕಂಡು ಬರುತ್ತಿದೆ. ಏಕದಳ ಧಾನ್ಯದ ಬೆಳೆಗೆ ದಾಳಿ ಇಡುವ ಈ ಕೀಟ ಎಳೆಯ ಭಾಗವನ್ನು ದಿನ ಬೆಳಗಾಗುವುದರೊಳಗೆ ತಿಂದು ಹಾಕುತ್ತಿದೆ. ಆರಂಭದ ಹಂತದಲ್ಲಿ ಲಕ್ಷಣ ಗುರುತಿಸಿ ಕ್ರಮವಹಿಸದೇ ಇದ್ದರೆ ಹಾನಿಯ ಪ್ರಮಾಣ ಹೆಚ್ಚು, ಈ ಹುಳು ಸೂರ್ಯಕಾಂತಿ, ಕುಸುಬೆ, ಕಡಲೆ ಇತ್ಯಾದಿ ಬೆಳೆಗೆ ಹಾನಿ ಮಾಡುವುದಿಲ್ಲ. ಹುಲ್ಲು ಜಾತಿಯ ಸಸಿಗಳಾದ ಬಿಳಿಜೋಳ, ಗೋದಿ, ಸಜ್ಜೆಗೆ ಇದರ ಕಾಟ ತಪ್ಪಿದ್ದಲ್ಲ.
ಇದನ್ನೂ ಓದಿ:“ಭಾರತ ಬಂದ್’ಗೆ ರೈತ ಸಂಘಟನೆ ಬೆಂಬಲ
ಸಿಂಪರಣೆ ಕ್ರಮ: ಕೀಟಬಾಧೆ ನಿಯಂತ್ರಣಕ್ಕೆ ಪ್ರμàನೋಫಾಸ್ ಶೇ.50 ಇಸಿ 2ಮಿ.ಲೀ. ಅಥವಾ ಇಮಾಮೆಕ್ಟಿಮ್ ಬೆಂಜೋಯೆಟ್ ಶೇ. 5, ಎಸ್.ಜಿ 0.4 ಗ್ರಾಂ ಅಥವಾ ಸ್ಪೆ çನೋಸೈಡ್ ಶೇ. 17.5 ಎಸ್.ಸಿ., 0.5 ಮಿ.ಲೀ. ಅಥವಾ ಕ್ಲೋರಾಂತ್ರೊನಿಲ್ ಪ್ರೋಲ್ ಶೇ. 8.5 ಎಸ್.ಸಿ. 0.4 ಮಿ.ಲೀ. ಅಥವಾ ಬೇವಿನ ಎಣ್ಣೆ 1500 ಪಿಪಿಎಂ ಮಿ.ಲೀ, 10,000 ಪಿಪಿಎಂ 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಸಿಂಪಡಿಸಿ ನಿಯಂತ್ರಿಸಬೇಕು
-ಹುಸಿ ಸೈನಿಕ ಹುಳುವನ್ನು ಆರಂಭದಿಂದಲೇ ನಿಯಂತ್ರಿಸಲು ಬಿಳಿ ಜೋಳ ಬಿತ್ತನೆ ಪೂರ್ವದಲ್ಲಿ ಎರಡೂ¾ರು ಸಾಲು ಸುತ್ತಲೂ ಮೆಕ್ಕೆಜೋಳ ಬಿತ್ತನೆ ಮಾಡಬೇಕು. ಯಾಕೆಂದರೆ ಹುಸಿ ಸೈನಿಕ ಹುಳುವಿಗೆ ಮೆಕ್ಕೆಜೋಳ ಒಂದು ರೀತಿಯ ಮೃಷ್ಟಾನ್ನ ಇದ್ದಂತೆ. ಇದು ಮೆಕ್ಕೆಜೋಳ ತಿನ್ನುತ್ತಲೇ ಜೀವನ ಚಕ್ರ ಮುಗಿಸುತ್ತಿದ್ದು, ಬಿಳಿ ಜೋಳಕ್ಕೆ ಕಾಟ ತಪ್ಪಿಸಲು ಸಾಧ್ಯವಿದೆ. ಈ ಹೊಸ ಐಡಿಯಾವನ್ನು ರೈತರು ಕೈಗೊಂಡರೂ ಸಾಮೂಹಿಕವಾಗಿ ನಿಯಂತ್ರಣ ಸಾಧ್ಯವಿದ್ದು ಇದು ಒಂದು ರೀತಿಯ ಜೀವಂತ ಬೇಲಿ ಇದ್ದಂತೆ.
–
ರಾಘವೇಂದ್ರ ಕೊಂಡಗುರಿ, ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ