Advertisement

ಆಗ್ರೋ ಕೇಂದ್ರ ಮೇಲೆ ಕೃಷಿ ಅಧಿಕಾರಿಗಳ ದಾಳಿ

05:39 PM Nov 22, 2020 | Suhan S |

ಶಹಾಪುರ: ಅನಧಿಕೃತ ಕೀಟನಾಶಕ ಔಷಧ ಗಳನ್ನು ಮಾರಾಟ ಮಾಡುತ್ತಿರುವ ಆರೋಪ ಹಿನ್ನೆಲೆ ನಗರದ ಎರಡು ಆಗ್ರೋಗಳ ಕೇಂದ್ರಗಳ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿದ್ದು, ಎರಡು ಅಂಗಡಿಗಳ ಪರವಾನಗಿ ರದ್ದತಿಗೆ ಶಿಫಾರಸ್ಸು ಮಾಡಿದ ಘಟನೆ ನಗರದಲ್ಲಿ ನಡೆದಿದೆ.

Advertisement

ಕೃಷಿ ಜಂಟಿ ನಿರ್ದೇಶಕಿ ಆರ್‌.ದೇವಿಕಾ ಮತ್ತು ಉಪಕೃಷಿ ನಿರ್ದೇಶಕ ಹಾಗೂ ಶಹಾಪುರ ಸಹಾಯಕ ಕೃಷಿ ನಿರ್ದೇಶಕ ಗೌತಮ್‌ ವಾಗ್ಮೋರೆ ಅವರ ತಂಡ ದಾಳಿ ಮಾಡಿದ್ದು, ಔಷಧಿ ಅಂಗಡಿಗಳನ್ನು ಪರಿಶೀಲಿಸಿದರು. ಆಗ ಎರಡು ರಸಗೊಬ್ಬರ ಮಾರಾಟ ಅಂಗಡಿಗಳ ಪರವಾನಗಿ ರದ್ದುಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ನಗರದ ಪಾಟೀಲ್‌ ಆಗ್ರೋ ಕೇಂದ್ರ ಹಾಗೂ ಹಾಲಭಾವಿ ರಸ್ತೆಯಲ್ಲಿರುವ ಸಂಗಮೇಶ್ವರ ಆಗ್ರೋ ಕೇಂದ್ರಗಳ ಮೇಲೆ ದಾಳಿ ನಡೆಸಿದ ಕೃಷಿ ಅಧಿಕಾರಿಗಳು ಪರವಾನಗಿ ರದ್ದುಪಡಿಸಿ ಆದೇಶಿಸಿದೆ ಎನ್ನಲಾಗಿದೆ.

ಪದವಿ ವಿದ್ಯಾರ್ಥಿಗಳ ಬಸ್‌ಪಾಸ್‌ ವಿತರಣೆ ಶುರು :

ಯಾದಗಿರಿ: ಪ್ರತಿ ವರ್ಷದಂತೆ ಈ ವರ್ಷವೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 2020-21ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ಗಳನ್ನು ವಿತರಿಸಲಿದೆ.

Advertisement

ಪದವಿ ವಿಭಾಗದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು 10 ತಿಂಗಳ ಅವಧಿಯ ಬಸ್‌ ಪಾಸ್‌ಗೆ 1050 ರೂ.ಗಳು ಹಾಗೂಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಲಾಗುವುದು.

ಪ್ರಸ್ತಕ್ತ ಸಾಲಿನಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಸರ್ಕಾರ ನಿಗದಿ ಪಡಿಸಿರುವ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಸಲ್ಲಿಸಿರುವ ಅರ್ಜಿಗೆ ಶಾಲಾ- ಕಾಲೇಜುಗಳ ಮುಖ್ಯಸ್ಥರಿಂದ ರುಜುಹಾಕಿಸಿ, ನೇರವಾಗಿ ಬಸ್‌ ನಿಲ್ದಾಣದ ಪಾಸ್‌ ಕೌಂಟರ್‌ನಲ್ಲಿ ಹಣ ಪಾವತಿಸಿ ಪಡೆಯಬಹುದು.

ಮ್ಯಾನ್ಯುಯಲ್‌ ಅರ್ಜಿಗಳನ್ನು ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಯಾದಗಿರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next