Advertisement
ಹಕ್ಲಾಡಿ ಗ್ರಾಮದ ಹಕ್ಲಾಡಿಗುಡ್ಡೆಯ ಚಂದ್ರಶೇಖರ ಮೊಗವೀರ ಅವರು ಕಸದಲ್ಲಿ ಬಾವಿ ಮಣ್ಣೆತ್ತುವ ಯಂತ್ರ ಸಿದ್ಧಪಡಿಸಿದ ಸಾಹಸಿ. ಕೇವಲ ಒಂದೇ ತಿಂಗಳಲ್ಲಿ ಬಾವಿ ಮಣ್ಣೆತ್ತುವ ಯಂತ್ರ (ವೆಲ್ ಲಿಫ್ಟರ್) ಸಿದ್ಧಪಡಿಸಿದ್ದಲ್ಲದೆ, ಅದರ ಸಹಾಯದಿಂದಲೇ 24 ಅಡಿ ಬಾವಿ ತೋಡಿ, ನೀರು ಪಡೆದ ಪರಿಶ್ರಮಿ.
ಗುಜರಿ ಅಂಗಡಿಯಿಂದ ಯಂತ್ರಕ್ಕೆ ಬೇಕಾದ ಕಬ್ಬಿಣಿದ ಪಟ್ಟಿ, ರಾಡ್, ಮೋಟಾರ್ ಆಟೋರಿûಾದ ಹಳೇ ಚಕ್ರತಂದು ಮಣ್ಣೆತ್ತುವ ಯಂತ್ರಕ್ಕೆ ನಿರ್ಮಾಣಕ್ಕೆ ಮುಂದಾದರು. 3 ಅಡಿ ಉದ್ದದ ಕಬ್ಬಿಣದ ಪಟ್ಟಿಗೆ ಸಾಗಾಟಕ್ಕೆ ಅನುಕೂಲ ಆಗುವಂತೆ ಚಕ್ರ ಅಳವಡಿಸಿದರು. ಹಿಂದೆ ಡೀಸೆಲ್ ನೀರೆತ್ತುವ ಯಂತ್ರ ಕೂರಿಸಿ, ನೀರೆತ್ತುವ ವ್ಯವಸ್ಥೆ ಮಾಡಿಕೊಂಡರು. ಹೀಗೆ ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಬಾವಿ ಮಣ್ಣೆತ್ತುವ ಯಂತ್ರವನ್ನು ತಯಾರಿಸಿದರು. ಈ ವೆಲ್‌ಲಿಫ್ಟರ್‌ನಿಂದ ಬಾವಿ ಒಳಗಡೆ ಮಣ್ಣುತುಂಬಲು ಒಬ್ಬರಿದ್ದರೆ, ಯಂತ್ರದ ಆಪರೇಟ್ ಮಾಡಲು ಒಬ್ಬರು ಇದ್ದರೆ ಸಾಕು. ಇಬ್ಬರೇ ಎಷ್ಟು ಆಳದ ಬಾವಿ ತೋಡಲು ಸಾಧ್ಯ. ನಿಮಿಷಕ್ಕೆ 3 ರಿಂದ 4 ಬುಟ್ಟಿ ಮಣ್ಣೆತ್ತೆಲು ಸಾಧ್ಯವಿದ್ದು, 250 ಕೆ.ಜಿ. ಸಾಮರ್ಥ್ಯ ಹೊಂದಿದೆ. ವೆಲ್ ಲಿಫ್ಟರ್ ಸಿದ್ಧಪಡಿಸಲು ಚಂದ್ರಶೇಖರ ಅವರು ಖರ್ಚು ಮಾಡಿದ ಮೊತ್ತ 70 ಸಾವಿರ ರೂ.
Related Articles
ಬಾವಿ ತೋಡಲು ಈಗ ಜನ ಸಿಗದ ಕಾರಣಕ್ಕೆ ಈ ಯಂತ್ರ ತಯಾರಿಗೆ ಮುಂದಾದೆ. ಮಣ್ಣೆತ್ತುವ ಜತೆ ಬಾವಿ ತೋಡುವಾಗ ನೀರು ಬಂದರೆ ನೀರು ಖಾಲಿ ಮಾಡಲು ಮೋಟಾರ್ ಕೂಡ ಫಿಕ್ಸ್ ಮಾಡಲಾಗಿದೆ. ವೆಲ್‌ಲಿಫ್ಟ್ ಸಿದ್ದಪಡಿಸಲು ಕೇಬಲ್ ತಂತಿ ಒಂದು ಬಿಟ್ಟು ಮತ್ತೆಲ್ಲ ವಸ್ತುಗಳು ಗುಜರಿಯಿಂದಲೇ ತಂದಿದ್ದು. ಈಗಿನ ಯಂತ್ರ ಇನ್ನಷ್ಟು ನವೀಕರಿಸುವ ಯೋಚನೆಯಿದೆ.
– ಚಂದ್ರಶೇಖರ ಮೊಗವೀರ ಹಕ್ಲಾಡಿಗುಡ್ಡೆ , ಯಂತ್ರ ಅನ್ವೇಷಕ
Advertisement