Advertisement

ಬಳಸದೇ ತುಕ್ಕು ಹಿಡಿಯುತ್ತಿವೆ ಕೃಷಿ ಯಂತ್ರಗಳು

01:24 PM Sep 05, 2022 | Team Udayavani |

ಗುಂಡ್ಲುಪೇಟೆ: ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಸಮೀಪವಿರುವ ಕೃಷಿ ಯಂತ್ರಧಾರೆ ಕೇಂದ್ರದಲ್ಲಿಬೇಸಾಯಕ್ಕೆ ಬೇಕಾದ ಸಲಕರಣೆಗಳು,ವಾಹನಗಳು ಬಳಕೆಗೆ ಬಾರದೆ ನಿರುಪಯುಕ್ತವಾಗಿದ್ದು, ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.

Advertisement

ಕೃಷಿ ಇಲಾಖೆಯಿಂದ ರೈತರಿಗೆ ನೆರವಾಗಲಿ ಎಂಬ ಉದ್ದೇಶದಿಂದ  ಟ್ರ್ಯಾಕ್ಟರ್‌, ಪವರ್‌ ಟಿಲ್ಲರ್‌ಗಳು, ಜೋಳದ ಯಂತ್ರ, ರೋಟವೇಟರ್‌, ಮಣ್ಣು ಹದಮಾಡುವ ಯಂತ್ರ ಸೇರಿ ಇನ್ನಿತರ ಕೃಷಿ ಯಂತ್ರಗಳನ್ನು ರಿಯಾಯ್ತಿ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ. ಆದರೆ, ಈ ಯೋಜನೆಯಏಜೆನ್ಸಿ ಪಡೆದ ವರ್ಷ ಎಂಬ ಖಾಸಗಿ ಕಂಪನಿಯುರೈತರಿಗೆ ಕೃಷಿ ಯಂತ್ರೋಪಕರಣ ನೀಡದೆನಿರ್ಲಕ್ಷ್ಯ ಧೋರಣೆ ತಾಳಿದೆ. ಇದರಿಂದ ವಿಧಿಯಿಲ್ಲದೆ ರೈತರು ಖಾಸಗಿ ಯಂತ್ರೋಪಕರಣಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತುಕ್ಕು ಹಿಡಿಯುತ್ತಿರುವ ಕೃಷಿ ಸಲಕರಣೆಗಳು: ಕೃಷಿ ಯಂತ್ರಧಾರೆ ಯೋಜನೆಯಡಿ ಇಲಾಖೆನೀಡಿರುವ ಕೃಷಿ ಯಂತ್ರೋಪಕರಣಗಳುನಿರ್ವಹಣೆ ಕೊರತೆಯಿಂದ ಬಿಸಿಲು, ಗಾಳಿ,ಮಳೆಗೆ ಸಿಲುಕಿ ತುಕ್ಕು ಹಿಡಿಯುತ್ತಿವೆ. ಇದರಿಂದಲಕ್ಷಾಂತರ ರೂ. ಹಣ ವ್ಯಯ ಮಾಡಿಖರೀದಿಸಿರುವ ಸಲಕರಣೆಗಳು ರೈತರ ಬಳಕೆಗೆ ಸಿಗದಂತಾಗಿದೆ.

ಕೃಷಿ ಅಧಿಕಾರಿಗಳ ನಿರ್ಲಕ್ಷ್ಯ: ಹಲವು ತಿಂಗಳಿಂದ ಕೃಷಿ ಯಂತ್ರಧಾರಣೆ ಕೇಂದ್ರದಲ್ಲಿಕೃಷಿ ಸಲಕರಣೆಗಳು ರೈತರಿಗೆ ಸಿಗದೆ ನಿರುಪಯುಕ್ತವಾಗಿ ಬಿದ್ದಿದೆ. ಹೀಗಿದ್ದರೂ, ಕೃಷಿ ಇಲಾಖೆ ಅಧಿಕಾರಿಗಳು ಖಾಸಗಿ ಏಜೆನ್ಸಿಯವರ ಮೇಲೆಕ್ರಮ ವಹಿಸದೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ.

ಸದಾಕಾಲ ಬಾಗಿಲು ಮುಚ್ಚಿರುವ ಕೇಂದ್ರ: ರೈತರ ಜಮೀನಿನಲ್ಲಿ ಕೃಷಿ ಚಟುವಟಿಕೆ ಆರಂಭವಾಗಿದೆ. ಈ ಹಿನ್ನೆಲೆ ಕೃಷಿಸಲಕರಣೆಗಳನ್ನು ಬಾಡಿಗೆ ಪಡೆಯಲು ರೈತರುಕೇಂದ್ರದ ಮುಂದೆ ಧಾವಿಸಿದರೆ ಸದಾಕಾಲಬಾಗಿಲು ಮುಚ್ಚಿರುತ್ತದೆ. ಇದರಿಂದ ಕೃಷಿ ಯಂತ್ರೋಪಕರಣ ಕೇಂದ್ರ ಇದ್ದು ಇಲ್ಲದಂತಾಗಿದೆ.

Advertisement

ಕೃಷಿ ಯಂತ್ರಗಳನ್ನು ಖಾಸಗಿಯಾಗಿ ತಂದು ಜಮೀನಿನಲ್ಲಿ ಕೆಲಸ ಮಾಡುವುದರಿಂದ ಹೆಚ್ಚಿನ ಹೊರೆ ಬೀಳುತ್ತದೆ.ಆದರೆ, ಸರ್ಕಾರ ರಿಯಾಯ್ತಿ ದರದಲ್ಲಿ ನೀಡುವ ಕೃಷಿಸಲಕರಣೆಗಳನ್ನು ಬಳಕೆ ಮಾಡಿಕೊಳ್ಳೋಣ ಎಂದರೆ ಈ ಕೇಂದ್ರ ಬಾಗಿಲು ಮುಚ್ಚಿದೆ. ಆದ್ದರಿಂದ ಪ್ರಸ್ತುತ ಇರುವ ಏಜೆನ್ಸಿಬದಲಾಯಿಸಿ, ಬೇರೆ ಏಜೆನ್ಸಿಗೆ ನೀಡಿ ಕೃಷಿ ಸಲಕರಣೆಗಳು ರೈತರ ಕೈಗೆ ಸಿಗುವಂತೆ ಮಾಡಬೇಕು. ಮಹೇಂದ್ರ, ವೀರನಪುರ

ಪ್ರಸ್ತುತ ಇರುವ ಖಾಸಗಿ ಕಂಪನಿ ಬದಲಾಯಿಸಿ, ಹೊಸ ಏಜೆನ್ಸಿಗೆ ಕೃಷಿ ಯಂತ್ರೋಪಕರಣ ನೀಡಲು ಹೊಣೆನೀಡಲಾಗಿದೆ. ಶೀಘ್ರದಲ್ಲೇ ರೈತರು ಯಂತ್ರಗಳ ಉಪಯೋಗ ಪಡೆಯಬಹುದು. ಪ್ರವೀಣ್‌, ಕೃಷಿ ಇಲಾಖೆ ಸಹಾಯ ನಿರ್ದೇಶಕ, ಗುಂಡ್ಲುಪೇಟೆ

 

ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next