Advertisement

ಕೃಷಿ ತಿದ್ದುಪಡಿ ಕಾನೂನು ರದ್ದತಿ ಖಚಿತ

07:16 PM Jul 22, 2021 | Team Udayavani |

ನರಗುಂದ: ಸಂಜೆ ಕಳೆದ ಮೇಲೆ ಬೆಳಕಾಗುವುದು ಎಷ್ಟು ನಿಶ್ಚಿತವೋ ಹಾಗೆಯೇ ರೈತ ವಿರೋ ಧಿ ಕೇಂದ್ರ ಸರ್ಕಾರದ ಕೃಷಿ ಕಾನೂನುಗಳು ರದ್ದಾಗುವುದು ಅಷ್ಟೇ ನಿಶ್ಚಿತ ಎಂದು ದೆಹಲಿ ರೈತ ಹೋರಾಟದ ಮಂಚೂಣಿ ನಾಯಕ, ಪಂಜಾಬ್‌ ರೈತ ಮುಖಂಡ ಹರಿಖೇತ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬುಧವಾರ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ರೈತ ನಾಯಕ ಬಾಬಾಗೌಡ ಪಾಟೀಲ ವೇದಿಕೆಯಲ್ಲಿ ವಿವಿಧ ರೈತಪರ, ಕನ್ನಡಪರ ಸಂಘಟನೆಗಳ ಸಹಯೋಗ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ನರಗುಂದ-ನವಲಗುಂದ ರೈತ ಬಂಡಾಯದ 41ನೇ ರೈತ ಹುತಾತ್ಮ ದಿನಾಚರಣೆಯ ಭವ್ಯ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕೃಷಿ ಕಾನೂನು ತಿದ್ದುಪಡಿ ವಿರೋ ಧಿಸಿ ದೆಹಲಿ ಗಡಿಯಲ್ಲಿ ಹೊತ್ತಿದ ಹೋರಾಟದ ಕಿಚ್ಚು ರೈತರು ಎದುರಿಸುವ ಬಹಳಷ್ಟು ಸಮಸ್ಯೆಗಳ ವಿರುದ್ಧವಾಗಿದೆ ಎಂದು ಹೇಳಿದರು.

ಹರಿಯಾಣ ರೈತ ಮುಖಂಡ ದೀಪಕ್‌ ಲಂಬಾ ಮಾತನಾಡಿ, ರೈತರ ವಿರುದ್ಧವಾಗಿ ಈ ಕಾನೂನುಗಳ ತಿದ್ದುಪಡಿ ತಂದಿದ್ದಾರೆ. ದೆಹಲಿ ಗಡಿಯಲ್ಲಿನ ಹೋರಾಟದಲ್ಲಿ ಸಾಕಷ್ಟು ಗೆಲುವು ಸಾ ಧಿಸಿದ್ದೇವೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಣೆಗಾಗಿ ನಡೆದ ಹೋರಾಟ ಐತಿಹಾಸಿಕ ದಾಖಲೆಯತ್ತ ಸಾಗುತ್ತಿದೆ ಎಂದು ಹೇಳಿದರು. ಹರಿಯಾಣ ರಾಜ್ಯದ 102 ರೈತರ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಲಾಗಿದೆ. ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದುಕೊಳ್ಳುವುದು ಸರ್ಕಾರಕ್ಕೆ ಒಳ್ಳೆಯದಾಗಿದೆ. ಇಲ್ಲವಾದಲ್ಲಿ ಹೋರಾಟದ ಕಾವು ಮುಂದುವರೆಯುತ್ತದೆ. ಪಂಜಾಬ್‌ ಮತ್ತು ಹರಿಯಾಣ ಮಾದರಿ ಹೋರಾಟ ಕರ್ನಾಟಕದಲ್ಲಿ ನಾಂದಿ ಹಾಡಬೇಕೆಂದು ದೀಪಕ್‌ ಲಂಬಾ ಕರೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಸಂಘ ನಾಯಕ ಚಾಮರಸ ಮಾಲೀಪಾಟೀಲ, ರೈತ ಬಂಡಾಯ ನೆಲದಲ್ಲಿ ಕುಡಿಯುವ ನೀರಿಗಾಗಿ ಏಳು ವರ್ಷಗಳಿಂದ ಮಹದಾಯಿ ಹೋರಾಟ ನಡೆದಿರುವುದು ವಿಪರ್ಯಾಸ. ರೈತರಿಂದ ಆರಿಸಿಹೋದ ಜನಪ್ರತಿನಿ ಧಿಗಳು ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ಪ್ರತಿಗಳನ್ನು ದಹಿಸುವ ಮೂಲಕ ಭವ್ಯ ಸಮಾವೇಶ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಎರಡು ಕಿರು ಪುಸ್ತಗಳನ್ನು ಬಿಡುಗಡೆ ಮಾಡಲಾಯಿತು. ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಎಸ್‌.ಆರ್‌ .ಹಿರೇಮಠ, ಬಡಗಲಪುರ ನಾಗೇಂದ್ರ ಮುಂತಾದವರು ಮಾತನಾಡಿದರು.

ವೇದಿಕೆಯಲ್ಲಿ ಬಡಗಲಪುರ ನಾಗೇಂದ್ರ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ, ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ಶಂಕರಪ್ಪ ಅಂಬಲಿ, ಮಧುಸೂಧನ ತಿವಾರಿ, ಶಂಕರಗೌಡ ಪಾಟೀಲ, ಸಿ.ಎಸ್‌.ಪಾಟೀಲ, ಮಾಜಿ ಶಾಸಕ ಬಿ.ಆರ್‌.ಪಾಟೀಲ ಮತ್ತು ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಸಮಾವೇಶದಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next