Advertisement

ಜಿಲ್ಲಾದ್ಯಾಂತ ಗರಿಗೆದರಿತು ಕೃಷಿ ಚಟುವಟಿಕ

12:52 PM May 17, 2018 | |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಾಂತ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ ಕೀಯ ಪಕ್ಷಗಳ ಅಭ್ಯರ್ಥಿಗಳ ಪರ
ಚುನಾವಣಾ ಪ್ರಚಾರದ ಭರಾಟೆಯಲ್ಲಿ ಹಲವು ತಿಂಗಳಿಂದ ತೊಡಗಿದ್ದ ಜಿಲ್ಲೆಯ ರೈತಾಪಿ ಜನ ಹಾಗೂ ಕೂಲಿ ಕಾರ್ಮಿಕರು ಚುನಾವಣೆ ಫ‌ಲಿತಾಂಶ ಹೊರ ಬಿದ್ದ ಬಳಿಕ ಚುನಾವಣೆಯ ಗುಂಗಿನಿಂದ ನಿದಾನಕ್ಕೆ ಹೊರ ಬರುತ್ತಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

Advertisement

ಜಿಲ್ಲಾದ್ಯಾಂತ ಪ್ರಸ್ತಕ ವರ್ಷದ ಕೃಷಿ ಚಟುವಟಿಕೆಗಳು ಬಿರುಸುನಿಂದ ಆರಂಭ ಗೊಂಡಿದ್ದು ಕಳೆದ ಭಾನುವಾರ ಜಿಲ್ಲೆಯಲ್ಲಿ ಬಿದ್ದ ಮಳೆಗೆ ಕೃಷಿ ಭೂಮಿ ಹದ ಗೊಳಿಸುವ ಮೊದಲ ಹಂತದ ಕಾರ್ಯಕ್ಕೆ ರೈತರು ಮುಂದಾಗಿದ್ದಾರೆ. ಜಿಲ್ಲೆಯ ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ, ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಚುನಾವಣಾ ಕಾರ್ಯಗಳಿಂದ ಮುಕ್ತರಾಗಿ ಕೃಷಿ ಚಟುವಟಿಕೆಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಹೊರ ಬಿದಿದ್ದೇ ತಡೆ ಜಿಲ್ಲೆಯ ರೈತಾಪಿ ಕೂಲಿ ಕಾರ್ಮಿಕರು, ವಿಶೇಷವಾಗಿ ನಗರ, ಪಟ್ಟಣಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವ ಕಾರ್ಮಿಕರು ಕೆಲಸ ಕಾರ್ಯಗಳಿಗೆ ಬ್ರೇಕ್‌ ಹಾಕಿ ರಾಜಕೀಯ ಪಕ್ಷಗಳು ಕೈ ತುಂಬ ನೀಡುತ್ತಿದ್ದ ಹಣ ಪಡೆದು ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಇದರಿಂದ ನಗರ ಪಟ್ಟಣದಲ್ಲಿ ಕಾರ್ಮಿಕರ ಇಲ್ಲದೇ ಕಟ್ಟಡ ನಿರ್ಮಾಣ ಕಾರ್ಯ ಸಂಪೂರ್ಣ ಸ್ಥಗಿತ ಗೊಂಡರೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಯಗಳಿಗೂ ಕೂಲಿ ಕಾರ್ಮಿಕರ ಕೊರತೆ ಎದ್ದು ಕಾಣುತ್ತಿತ್ತು. ಈಗ ಯಥಾಸ್ಥಿತಿ ಕಡೆಗೆ ತಿರುಗುತ್ತಿದೆ.

ಮೋಡಕವಿದ ವಾತಾವರಣ ಸದ್ಯ ಜಿಲ್ಲೆಯಲ್ಲಿ ಭಾನುವಾರ ಮಳೆಯಾಗಿದ್ದು ಬಿಟ್ಟರೆ ಇದು ವರೆಗೂ ಮಳೆಯ ದರ್ಶನ
ವಾಗಿಲ್ಲ. ಆದರೆ ಕಳೆದ ಎರಡು, 3 ದಿನಗಳಿಂದ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಇದ್ದು ಬಿಸಿಲಿನ ಅರ್ಭಟ ತಗ್ಗಿ ಮಳೆ ಬರುವ ಮನ್ಸೂಚನೆ ಇದೆ. ಜೂನ್‌, ಜುಲೈ ವೇಳೆಗೆ ವಾಡಿಕೆಯಂತೆ ಜಿಲ್ಲಾ ದ್ಯಂತ ಬಿತ್ತನೆ ಕಾರ್ಯ ಮುಗಿಯಲಿದ್ದು, ಈಗಾಗಲೇ ಜಿಲ್ಲೆಯ ರೈತರು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುವ ಮೂಲಕ ಬಿತ್ತನೆ ಕಾರ್ಯಕ್ಕೆ ಸಜಾಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next