Advertisement

Agreement: ಸೇನಾ ಪರಿಕರಗಳ ಖರೀದಿಗೆ ಬೆಮೆಲ್‌, ಜ್ಯುಪಿಟರ್‌ ವೇಗನ್ಸ್‌ ಜತೆ ಒಪ್ಪಂದ

10:02 PM Jan 04, 2024 | Team Udayavani |

ನವದೆಹಲಿ: 697 ಬೋಗಿ ಓಪನ್‌ ಮಿಲಿಟರಿ(ಬಿಒಎಂ) ವ್ಯಾಗನ್‌ಗಳು ಹಾಗೂ 56 ಮೆಕ್ಯಾನಿಕಲ್‌ ಮೈನ್‌ಫೀಲ್ಡ್‌ ಮಾರ್ಕಿಂಗ್‌ ಎಕ್ಯೂಪೆ¾ಂಟ್‌(ಎಂಎಂಎಂಇ) ಮಾರ್ಕ್‌ 2 ಖರೀದಿಗೆ ರಕ್ಷಣಾ ಸಚಿವಾಲಯ ಮುಂದಾಗಿದೆ.

Advertisement

473 ಕೋಟಿ ರೂ. ವೆಚ್ಚದಲ್ಲಿ 697 ಬಿಒಎಂ ವ್ಯಾಗನ್‌ಗಳ ಖರೀದಿಗೆ ಜುಪಿಟರ್‌ ವ್ಯಾಗನ್ಸ್‌ ಲಿಮಿಟೆಡ್‌ನೊಂದಿಗೆ ಹಾಗೂ 56 ಎಂಎಂಎಂಇ ಮಾರ್ಕ್‌ 2 ಖರೀದಿಗೆ ಬೆಮೆಲ್‌ನೊಂದಿಗೆ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಗುರುವಾರ ಸಹಿ ಹಾಕಿದೆ. ಈ ಒಪ್ಪಂದವು ರಕ್ಷಣಾ ಕ್ಷೇತ್ರದಲ್ಲಿ ದೇಶೀಯ ಉತ್ಪಾದನೆಗೆ ಒತ್ತು ನೀಡುತ್ತಿದೆ. ಜತಗೆ ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ಪಾಲುದಾರಿಕೆಗೆ ಉತ್ತೇಜನ ನೀಡಲಿದೆ.

ಸಂಶೋಧನಾ ವಿನ್ಯಾಸ ಮತ್ತು ಪ್ರಮಾಣಿತ ಸಂಸ್ಥೆ(ಆರ್‌ಡಿಎಸ್‌ಒ) ಬಿಒಎಂ ವ್ಯಾಗನ್‌ಗಳನ್ನು ವಿನ್ಯಾಸಗೊಳಿಸಿದೆ. ಈ ವಿಶೇಷ ವ್ಯಾಗನ್‌ಗಳು ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದೆ. ಲಘು ವಾಹನಗಳು, ಶಸ್ತ್ರಾಸ್ತ್ರಗಳು ಹಾಗೂ ಇತರೆ ರಕ್ಷಣಾ ಸಲಕರಣೆಗಳನ್ನು ಮಿಲಿಟರಿ ಕಾರ್ಯಾಚರಣೆ ಪ್ರದೇಶಕ್ಕೆ ಸ್ಥಳಾಂತರಿಸಲು ಇವುಗಳನ್ನು ಬಳಸಲಾಗುತ್ತದೆ.

ಇನ್ನೊಂದೆಡೆ, ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಮೈನ್‌ಫೀಲ್ಡ್‌ ಮಾರ್ಕಿಂಗ್‌ಗೆ ತಗಲುವ ಸಮಯ ಮತ್ತು ಮಾನವ ಸಂಪನ್ಮೂಲವನ್ನು ಎಂಎಂಎಂಇ ತಗ್ಗಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next