Advertisement

ಮಹಿಳಾ ಪ್ರಧಾನ ಅಗ್ನಿಪ್ರವ

02:43 PM Nov 27, 2020 | Suhan S |

ಲಾಕ್‌ಡೌನ್‌ ತೆರವಾದ ಬಳಿಕ ನಿಧಾನವಾಗಿ ಒಂದರ ಹಿಂದೊಂದು ಚಿತ್ರಗಳು ಸೆಟ್ಟೇರುತ್ತಿವೆ. ಈ ವಾರ ಕನ್ನಡದಲ್ಲಿ ಮಹಿಳಾ ಪ್ರಧಾನ ಚಿತ್ರವೊಂದು ಮುಹೂರ್ತವನ್ನು ಆಚರಿಸಿಕೊಂಡಿದೆ. ಆ ಚಿತ್ರದ ಹೆಸರು “ಅಗ್ನಿಪ್ರವ’. ಸಂಸ್ಕೃತ ಭಾಷೆಯ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರಕ್ಕೆ ತೆಲುಗಿನಲ್ಲಿ ಈಗಾಗಲೇ ಹಲವು ಸಿನಿಮಾಗಳಿಗೆ ಆ್ಯಕ್ಷನ್‌-ಕಟ್‌ ಹೇಳಿರುವ ಸುರೇಶ್‌ ಆರ್ಯ ನಿರ್ದೇಶನ ಮಾಡುತ್ತಿದ್ದಾರೆ.

Advertisement

“ಅಗ್ನಿಪ್ರವ’ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದ “ಬಾಹುಬಲಿ’ ಖ್ಯಾತಿಯಕಥೆಗಾರ ವಿಜಯೇಂದ್ರ ಪ್ರಸಾದ್‌ ಕ್ಯಾಮರಾಕ್ಕೆ ಸ್ವಿಚ್‌ ಆನ್‌ ಮಾಡಿದ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಹಿರಿಯ ನಿರ್ಮಾಪಕ ಎಸ್‌.ಎ ಗೋವಿಂದರಾಜ್‌, ಪತ್ನಿ ಲಕ್ಷ್ಮೀ ಚಿತ್ರದ ಮೊದಲ ದೃಶ್ಯಕ್ಕೆಕ್ಲಾಪ್‌ ಮಾಡಿದರು. “ನವರತ್ನ ಪಿಕ್ಚರ್’ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಅಗ್ನಿಪ್ರವ’ ಚಿತ್ರಕ್ಕೆ ವರ್ಷಾ ತಮ್ಮಯ್ಯ ನಾಯಕಿಯಾಗಿ ನಟಿಸುವುದರ ಜತೆಗೆ ನಿರ್ಮಾಪಕಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ 5 ಸಿನಿಮಾ ಮಾಡಿರುವ ವರ್ಷಾ,ಕಥೆಯ ಒಂದೆಳೆ ಕೇಳಿ ಇಷ್ಟಪಟ್ಟು ಈ ಚಿತ್ರದಲ್ಲಿಬಂಡವಾಳ ಹೂಡಿ ನಟಿಸಲು ಮುಂದೆ ಬಂದಿದ್ದಾರೆ.

ಚಿತ್ರದ ಮುಹೂರ್ತದ ಬಳಿಕ ಮಾತನಾಡಿದ ವಿಜಯೇಂದ್ರ ಪ್ರಸಾದ್‌, “ಕಥೆ ಕೇಳಿದಾಗಲೇ ಒಂದು ಕುತೂಹಲವಿತ್ತು. ಸೊಗಸಾದ ಕಥೆ ಮಾಡಿಕೊಂಡಿದ್ದಾರೆ. ಎಳೆ ಕೇಳಿ ನನಗೇ ಆಶ್ಚರ್ಯವಾಯಿತು. ತಂಡಕ್ಕೆ ಒಳ್ಳೆಯದಾಗಲಿ’ ಎಂದರು.

“ಅಗ್ನಿಪ್ರವ’ ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಸುರೇಶ್‌ ಆರ್ಯ, “ಇದೊಂದು ಮಹಿಳಾ ಪ್ರಧಾನ ಸಿನಿಮಾ. “ಅಗ್ನಿಪ್ರವ’ ಎಂದರೆ ಬೆಳಕು ಪ್ರವಹಿಸುವುದು ಎಂದರ್ಥ. ಇಡೀ ಸಿನಿಮಾ ನಾಯಕಿ ಸುತ್ತಲೇ ಸಾಗುವುದರಿಂದಕಮರ್ಷಿಯಲ್‌ ಅಂಶಗಳ ಜತೆಗೆ ಒಂದಷ್ಟು ಮಿಸ್ಟರಿ ಥ್ರಿಲ್ಲರ್‌ ಅಂಶಗಳನ್ನು ಸೇರಿಸಿದ್ದೇವೆ. ಸಿನಿಮಾ ನೋಡುತ್ತಿದ್ದರೆ, ನಾಯಕಿ ವಿಲನ್‌ ಥರಕಾಣಿಸುತ್ತಾಳೆ. ಆದರೆ, ಚಿತ್ರದ ಹೀರೋಯಿನ್‌ ಅವಳೇ ಆಗಿರುತ್ತಾಳೆ. ಅದರ ವಿಶೇಷತೆಯನ್ನು ಸಿನಿಮಾದಲ್ಲಿಯೇ ನೋಡಬೇಕು’ ಎಂದರು.

ಇದನ್ನೂ ಓದಿ: ತಲ್ವಾರ್ ‌ಪೇಟೆಗೆ ಬಂದ ರವಿಶಂಕರ್‌

Advertisement

“ಅಗ್ನಿಪ್ರವ’ ಚಿತ್ರದಲ್ಲಿ ವರ್ಷಾತಮ್ಮಯ್ಯ ಅವರೊಂದಿಗೆ ಜೋ ಸೈಮನ್‌, ನಾರಾಯಣ ಸ್ವಾಮಿ, ಜ್ಯೋತಿ ರೈ, ವೆಂಕಟೇಶ್‌ ಪ್ರಸಾದ್‌ ಮೊದಲಾದವರುಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಲವಿತ್‌ ಛಾಯಾಗ್ರಹಣವಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರ ಮುಂದಿನ ವರ್ಷದ ಮಧ್ಯ ಭಾಗದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next