Advertisement

ಬೆಂಕಿ ವೀರರಲ್ಲಿ ವಿಶ್ವಕ್ಕೇ ವಿಶ್ವಗುರು ಬಿಜೆಪಿಯವರು: ದೊಡ್ಡೂರು

01:04 PM Jun 26, 2022 | Team Udayavani |

ಶಿರಸಿ: ಅಗ್ನಿ ಪಥದಲ್ಲಿ ಬೆಂಕಿವೀರರು ಕಾಂಗ್ರೆಸ್ಸಿನವರು ಎಂದಿರುವ ಬಿಜೆಪಿ ವಕ್ತಾರ ನಾಗರಾಜ್ ನಾಯ್ಕ ಅವರಿಗೆ ಅವರ ಬುಡದಲ್ಲೇ ಬೆಂಕಿ‌ ಇಟ್ಟು ಮಾತಾಡಿಕೊಂಡಿದ್ದಾರೆ. ಬೆಂಕಿ ವೀರರಲ್ಲಿ ವಿಶ್ವಕ್ಕೇ ವಿಶ್ವಗುರು ಬಿಜೆಪಿಯವರು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ವಾಗ್ದಾಳಿ ನಡೆಸಿದರು.

Advertisement

ಅವರು ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ, ಪರೇಶ ಮೇಸ್ತಾ ಅವರ ಸಾವು ಆಗಬಾರದಿತ್ತು. ಆದರೆ ಕುಮಟಾ ಗಲಾಟೆ, ಶಿರಸಿ ಅನಾಹುತ ಬಿಜೆಪಿಯವರು ನೆನಪು ಮಾಡಿಕೊಳ್ಳಬೇಕಿತ್ತು ಎಂದರು.

ಕೇಂದ್ರ, ರಾಜ್ಯ ಸರಕಾರ ಅನುಷ್ಟಾನದಲ್ಲಿ‌ ಅನೇಕ ಯೋಜನೆ ವಿಫಲ ಆಗಿದೆ. ಬೆಳೆ ಸಾಲ, ಬೆಳೆ‌ ವಿಮೆ‌ ಸಮಸ್ಯೆ ಇದೆ. ಪಹಣಿ ಪತ್ರದಲ್ಲಿ‌ ಸರ್ವೆ ನಂಬರ್, ಹೆಸರು ತಪ್ಪಿದೆ. ಸರಿಪಡಿಸಲು ಬೆಂಗಳೂರಿಗೇ ಪೈಲ್ ಹೋಗಬೇಕು. ಬೆಳೆ ಸಾಲ, ಬೆಳೆ ವಿಮೆ ದಿನಾಂಕ ಕೂಡ ಮುಗಿಯುತ್ತಿದೆ. ಎಷ್ಟೋ ಮಂದಿಗೆ ಬೆಳೆ ಸಾಲ ಬೆಂಗಳೂರುಲ್ಲಿದೆ. ಬೆಳೆ‌ಸಾಲ ಯಾವಾಗ ಪಡೆಯಬೇಕು, ಅನೇಕ ಗೊಂದಲ ಘೋಷಣೆ ಯೋಜನೆ ನೀಡಬಾರದು. ಅನುಷ್ಠಾನ ಸಮಸ್ಯೆ‌ ನೋಡಬಾರದು. ಬೆಳೆ ವಿಮೆಗೂ ಬೆಳೆ‌ ಸಾಲಕ್ಕೂ ಹೊಂದಾಣಿಕೆ ಇದೆ. ಆದರೆ, ಅದರಿಂದಲೂ ರೈತರು ವಂಚಿತರಾಗುವ ಆತಂಕ‌ ಇದೆ ಎಂದರು.

ರಾಜ್ಯ,‌ ಕೇಂದ್ರ ಸರಕಾರಕ್ಕೆ ಯೋಜನೆಯ ಭದ್ರ ಬುನಾದಿ ಇದ್ದರೆ ಮಾತ್ರ ಯೋಜನೆ ತರಬೇಕಿದೆ. ಸದನದ ಒಳಗೂ, ಹೊರಗೂ ಚರ್ಚೆ ಆಗಬೇಕು ಎಂದರು.

ಕೇಂದ್ರ, ರಾಜ್ಯ ಅನೇಕ ಯೋಜನೆ ವಿಫಲ ಆಗಿದೆ. ಜನರಿಗೂ‌ ಸಮಸ್ಯೆ ಆಗುತ್ತಿದೆ. ಕೇಂದ್ರದ ಅಗ್ನಿಪಥ ಯೋಜನೆ ವಿಶೇಷವಾಗಿ ಯುವಕರಲ್ಲಿ ವಿರೋಧಾಭ್ಯಾಸ ಮಾಡುತ್ತಿದೆ. ಈ‌ ದೇಶದ ಯುವಕರಿಗೆ ಎಂಟು ವರ್ಷದಲ್ಲಿ ಬಿಜೆಪಿ ಉದ್ಯೋಗ ಸೃಷ್ಟಿ‌ ಮಾಡದೇ ಹೊಸತಾದ ಅಗ್ನಿಪಥ ಯೋಜನೆ ಮುಂದಿಟ್ಟಿದೆ. ರಾಷ್ಟ್ರದ ಸೇವೆ ಮಾಡುವುದು ಪ್ರಜೆಯ ಕರ್ತವ್ಯ. ಯೋಧರಿಗೆ ಪ್ರಾಧಾನ್ಯತೆ ನೀಡಬೇಕು. ಕೇಂದ್ರ ಸರಕಾರ ಯೋಜನೆ ತರುವಾಗ ವ್ಯಾಪಕ ಚರ್ಚೆ ಅಗತ್ಯವಿತ್ತು. ಕೇಂದ್ರ ಸರಕಾರ ಮೊಂಡತನ ಪ್ರದರ್ಶನ ಮಾಡುತ್ತಿದೆ ಎಂದರು.

Advertisement

ಸೈನ್ಯದಲ್ಲಿ ಕೆಲಸ‌ ಮಾಡಿ‌ದವರಿಗೆ ನಿವೃತ್ತ ಪಿಂಚಣಿ, ಕೃಷಿ ಭೂಮಿ‌ ಕೊಡಬೇಕಿದೆ. ಅದನ್ನು ಕೊಡಬೇಕು ಎಂದರು.  ಗೊಂದಲ‌ ಸೃಷ್ಟಿಸುವ ಯೋಜನೆಯಿಂದ‌ ಮುಂದೆ ಪರ್ವತದಂತಹ ಸಮಸ್ಯೆ ತರಬಾರದು. ಭದ್ರ ಬುನಾದಿ ಇಲ್ಲದೇ ಯೋಜನೆ ಎಳೆಯ‌ ಮನಸ್ಸಿನ ಯುವಕರನ್ನು ‌ಅಗ್ನಿ‌ಪಥದಲ್ಲಿ ಅಗ್ನಿಗೆ ಆಹುತಿ‌ ಮಾಡಬಾರದು ಎಂದೂ ಹೇಳಿದರು.

ಈ ವೇಳೆ ಬಸವರಾಜ್ ದೊಡ್ಮನಿ, ಗಣೇಶ ದಾವಣಗೆರೆ, ಪ್ರದೀಪ ಶೆಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next