Advertisement
ಒಡಿಶಾದ ವ್ಹೀಲರ್ ದ್ವೀಪದಲ್ಲಿ ಈ ಪರೀಕ್ಷೆಗಾಗಿ ಸಿದ್ಧತೆಗಳು ನಡೆಯುತ್ತಿವೆ. ಕಳೆದ ವರ್ಷವೇ ಈ ಪರೀಕ್ಷೆ ನಡೆಸಬೇಕಿತ್ತಾದರೂ ಸೋಂಕಿನ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು.
Related Articles
Advertisement
ಚೀನಕ್ಕೆ ಕಿರಿಕಿರಿ :
ಭಾರತದ ವಿರುದ್ಧ ಸದಾ ಕಿಡಿಗೇಡಿತನ ಮೆರೆ ಯುತ್ತಿರುವ ಚೀನ ಅಗ್ನಿ5 ಅನ್ನು ಸೇನೆಗೆ ಸೇರ್ಪಡೆಗೊಳಿಸಿ ಪರೀಕ್ಷೆಗೆ ಒಡ್ಡುವ ವಿಚಾರ ಕೇಳಿ ಸಿಡಿಮಿಡಿಯಾಗಿದೆ. ಅದಕ್ಕಾಗಿಯೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 1172ನ್ನು ಮುಂದಿಟ್ಟುಕೊಂಡು ಅಕ್ಷೇಪ ವ್ಯಕ್ತಪಡಿಸಿದೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ಭಾರತದ ಅಗ್ನಿ5 ಕ್ಷಿಪಣಿ ಧಕ್ಕೆ ಉಂಟು ಮಾ ಡ ಲಿದೆ ಎಂದು ಹೇಳಿದೆ. ಈ ನಿರ್ಣಯವನ್ನು ಕೇಂದ್ರ ಸರಕಾರ ಪೋಖ್ರಾನ್‌ನಲ್ಲಿ ಅಣು ಪರೀಕ್ಷೆ ನಡೆಸಿದಾಗ
ಕೈಗೊಳ್ಳಲಾಗಿತ್ತು.
ಯಾವ ರಾಷ್ಟ್ರಗಳ ಬಳಿ ಇದೆ?:
ಅಗ್ನಿ ಮಾದರಿಯ ಕ್ಷಿಪಣಿಗಳು ಅಮೆರಿಕ, ರಷ್ಯಾ, ಚೀನ, ಫ್ರಾನ್ಸ್, ಬ್ರಿಟನ್ ಬಳಿಯಿ ವೆ.
ಕ್ಷಿಪಣಿ ವೈಶಿಷ್ಟ್ಯಗಳೇ ನು?:
5,000 ಕಿ.ಮೀ.: ಇಷ್ಟು ದೂರದ ನೆಲೆ ಛೇದನ ಸಾಮರ್ಥ್ಯ
07 ಬಾರಿ ಪರೀಕ್ಷೆ: (2012 ಎ.19, 2013 ಸೆ.5, 2015 ಜ.31, 2016 ಡಿ.26, 2018 ಜ.18, 2018 ಜೂ.3, 2018 ಡಿ.10)
50,000 ಕೆ.ಜಿ ತೂಕ
1.5 ಟನ್: ಇಷ್ಟು ತೂಕದ ಪರಮಾಣು ಶಸ್ತ್ರಾಸ್ತ್ರ ಸಾಗಿಸುವ ಸಾಮರ್ಥ್ಯ
17 ಮೀಟರ್ ಉದ್ದ
2 ಮೀಟರ್ ಅಗಲ