Advertisement

ಚಾ.ನಗರ ಜಿಲ್ಲೆ: ಕೋವಿಡ್‌ನಿಂದ ವೃದ್ಧ ಸಾವು ; ಇಂದು 49 ಹೊಸ ಕೋವಿಡ್ ಪ್ರಕರಣಗಳು

08:37 PM Jul 20, 2020 | Hari Prasad |

ಚಾಮರಾಜನಗರ: ಕೋವಿಡ್‌ 19 ಸೋಂಕಿನಿಂದ ಜಿಲ್ಲೆಯಲ್ಲಿ ಇಂದು ಓರ್ವ ವೃದ್ಧ ಮೃತಪಟ್ಟಿದ್ದಾರೆ.

Advertisement

ಇಬ್ಬರು ಪೊಲೀಸರು, ಅರಣ್ಯ ಇಲಾಖೆ ವಾಚರ್ ಸೇರಿದಂತೆ ಜಿಲ್ಲೆಯಲ್ಲಿ ಇಂದು 49 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ.

ಇದರಿಂದ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 346ಕ್ಕೇರಿದ್ದು, 143 ಸಕ್ರಿಯ ಪ್ರಕರಣಗಳಿವೆ.

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ 78 ವರ್ಷದ ವೃದ್ಧ ಮೃತಪಟ್ಟವರು. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತರಾದವರ ಸಂಖ್ಯೆ 4ಕ್ಕೇರಿದೆ. ಇವರು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದರು ಹಾಗಾಗಿ ಇವರಿಗೆ ಉಸಿರಾಟದ ತೊಂದರೆ ಇತ್ತು.

ಈ ಬಾರಿಯೂ ಇವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಚಿಕಿತ್ಸೆಗೆಂದು ಮೈಸೂರಿಗೆ ಹೋಗಿ ಬಳಿಕ ತಮ್ಮ ಮನೆಗೆ ಮರಳಿದ್ದರು. ಈ ಸಂದರ್ಭದಲ್ಲಿ ಇವರಿಗೆ ಸೋಂಕು ತಗುಲಿರಬಹುದೆಂದು ಅಂದಾಜಿಸಲಾಗಿದೆ.

Advertisement

ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಜು.19ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದಾಗ ಕೋವಿಡ್ 19 ಪಾಸಿಟಿವ್ ಬಂದಿತ್ತು. ವೈದ್ಯರು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ  ತಡ ರಾತ್ರಿ ಮೃತಪಟ್ಟಿದ್ದಾರೆ.

ಪುತ್ರಿಯಿಂದ ಪೂಜೆ: ಮೃತರ ಅಂತ್ಯಕ್ರಿಯೆಯನ್ನು ಜಿಲ್ಲಾ ಕೇಂದ್ರದ ಎಡಬೆಟ್ಟದ ತಪ್ಪಲಿನಲ್ಲಿ, ಜಿಲ್ಲಾಡಳಿತದ ಮಾರ್ಗಸೂಚಿಯನ್ವಯ ಪಿಎಫ್‌ಐ ಕಾರ್ಯಕರ್ತರು ನಡೆಸಿದರು. ಅಂತ್ಯಕ್ರಿಯೆಗೂ ಮೊದಲು ಮೃತರ ಮಗಳು ಸ್ಥಳದಲ್ಲಿ ಸರಳವಾದ ಪೂಜೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದ್ದು ಮನ ಕಲಕುವಂತಿತ್ತು. ಈ ಭಾವುಕ ಸನ್ನಿವೇಶದ ಮಾಹಿತಿಯನ್ನು ಪಿಎಫ್‌ಐ ಕಾರ್ಯಕರ್ತರೊಬ್ಬರು ನೀಡಿದ್ದಾರೆ.

ಗುಂಡ್ಲುಪೇಟೆ ತಾಲೂಕಿನಲ್ಲಿ ಇಂದು ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ. ಒಟ್ಟು 19 ಪ್ರಕರಣಗಳು ಅದೊಂದೇ ತಾಲೂಕಿನಿಂದ ವರದಿಯಾಗಿವೆ. ಕೊಳ್ಳೇಗಾಲ ತಾಲೂಕಿನಿಂದ 18, ಚಾಮರಾಜನಗರ ತಾಲೂಕಿನ 5, ಯಳಂದೂರು ತಾಲೂಕಿನ 4 ಹಾಗೂ ಹನೂರು ತಾಲೂಕಿನ 3 ಪ್ರಕರಣಗಳು ವರದಿಯಾಗಿವೆ.

ಹನೂರು ಪೊಲೀಸ್ ಠಾಣೆಯ ಇಬ್ಬರು ಪೊಲೀಸರಿಗೆ, ಚಾಮರಾಜನಗರ ಪಟ್ಟಣದ  ಹೌಸಿಂಗ್ ಬೋರ್ಡ್ ಕಾಲೋನಿಯ ಅರಣ್ಯ ನರ್ಸರಿಯ ವಾಚರ್ ಓರ್ವರಿಗೆ ಸೋಂಕು ತಗುಲಿದೆ.

Advertisement

Udayavani is now on Telegram. Click here to join our channel and stay updated with the latest news.

Next