Advertisement

ಅಗಲ್ಪಾಡಿ ಶಾಲೆಗೆ ಪ್ರಶಸ್ತಿಯ ಗರಿ 

01:00 AM Mar 20, 2019 | Harsha Rao |

ಬದಿಯಡ್ಕ : ಗಡಿನಾಡಿನ ಅತ್ಯುತ್ತಮ ಕನ್ನಡ ಮಾಧ್ಯಮ ಶಾಲೆ ಪ್ರಶಸ್ತಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಪ್ರೌಢಶಾಲೆಗೆ ಲಭಿಸಿದೆ. ನಿಟ್ಟೆ  ಎಜುಕೇಶನ್‌ ಟ್ರಸ್ಟ್‌  ಕೊಡಮಾಡುವ ಡಾ| ನಿಟ್ಟೆ  ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿ ವಿತರಣೆ ಸಮಾರಂಭ ನಿಟ್ಟೆ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನ ಕೆ.ಎಸ್‌. ಆಡಿಟೋರಿಯಂನಲ್ಲಿ ನಡೆಯಿತು. ಶಾಲಾ ಮುಖ್ಯಸ್ಥರು, ವಿದ್ಯಾರ್ಥಿಗಳೊಂದಿಗೆ ಮೂರು ಲಕ್ಷ ರೂ ನಗದು ಹಾಗೂ ವಿಶೇಷ ಪ್ರಶಸ್ತಿ ಪತ್ರವನ್ನು ಪಡೆದುಕೊಂಡರು. ನಿವೃತ್ತ ನ್ಯಾಯಮೂರ್ತಿ ಕರ್ನಾಟಕದ ಮಾಜಿ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಪ್ರಶಸ್ತಿ ವಿತರಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್‌. ವಿನಯ ಹೆಗ್ಡೆ  ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಾಲೆ ಆಯ್ಕೆ ಸಮಿತಿ ಸದಸ್ಯರಾದ ಕುದಿ ವಸಂತ ಶೆಟ್ಟಿ , ಪ್ರವೀಣ ಕುಮಾರಿ ಹಾಗೂ ಶಂಕರನಾರಾಯಣ ಅವರನ್ನು  ಗೌರವಿಸಲಾಯಿತು. ಸಹ ಕುಲಾಧಿಪತಿ ಪ್ರೊಫೆಸರ್‌ ಡಾ| ಎಂ. ಶಾಂತಾರಾಮ ಶೆಟ್ಟಿ , ವಿವಿಯ ಆರ್ಥಿಕ ಹಾಗೂ ಅಭಿವೃದ್ಧಿ ನಿರ್ದೇಶಕ ಡಾ. ರಾಜೇಂದ್ರ ಎಂ. ನಿಟ್ಟೆ ವಿಶ್ವವಿದ್ಯಾಲಯದ ಆಡಳಿತ ಸಹ ಕುಲಾಧಿಪತಿ ಎನ್‌ ವಿಶಾಲ್‌ ಹೆಗ್ಡೆ  ಸಮಾರಂಭದಲ್ಲಿ ಉಪಸ್ಥಿತರಿದ್ದರು.

Advertisement

ಗ್ರಾಮೀಣ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸುವ ನಿಟ್ಟಿನಲ್ಲಿ ನಿಟ್ಟೆ ವಿಶ್ವವಿದ್ಯಾಲಯ ಜಂಟಿಯಾಗಿ ದಕ್ಷಿಣ ಕನ್ನಡ ಕಾಸರಗೋಡು ಹಾಗೂ ಉಡುಪಿ ಜಿಲ್ಲೆಗಳ ಅರ್ಹ ಶಾಲೆಗಳನ್ನು  ಗುರುತಿಸಿ, ಗಡಿನಾಡಿನ ಅತ್ಯುತ್ತಮ ಕನ್ನಡ ಶಾಲೆಯಾಗಿ ಅಗಲ್ಪಾಡಿ ಶ್ರೀ ಅನ್ನಪುರ್ಣೇಶ್ವರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಆಯ್ಕೆಗೊಂಡಿತು. ಶಾಲಾ ವ್ಯವಸ್ಥಾಪಕ ನಾರಾಯಣ ಶರ್ಮ ಬಳ್ಳಪದವು, ಮುಖ್ಯೋಪಾಧ್ಯಾಯರಾದ ಗಿರೀಶ ಎನ್‌, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ಶ್ರೀಪತಿ ಎಂ., ಎಂಪಿಟಿಎ ಅಧ್ಯಕ್ಷೆ  ಜಯಂತಿ, ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಜತೆಗಿದ್ದು ಪ್ರಶಸ್ತಿಯನ್ನು  ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next