Advertisement
ಹಳೆಶಹಾಬಾದನ ವಿವಾದಿತ ಕೋಟೆಯಲ್ಲಿ ಕಳೆದ ಅಕ್ಟೋಬರ್ 20 ರಂದು ಈ ವಿವಾದಿತ ಸ್ಥಳದಲ್ಲಿ ಮೂರ್ತಿ ಕಟ್ಟೆ ಕಟ್ಟಿ ಅದರ ಮೇಲೆ ಕಿಡಿಗೇಡಿಗಳು ಈಶ್ವರ ಲಿಂಗ ಹಾಗೂ ನಂದಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಬಾಳೆದಿಂಡು, ಹೂಗಳಿಂದ ಪೂಜೆ ಸಲ್ಲಿಸಿದ್ದರು. ಇದರಿಂದ ಹಳೆಶಹಾಬಾದನಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಇದನ್ನು ಅರಿತ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿತ್ತು.
ಧಾಮಾ, ಡಿವೈಎಸ್‌ಪಿ ಕೆ.ಬಸವರಾಜ, ಸಿಪಿಐ ಅಸ್ಲಾಂ ಭಾಷಾ, ಉಪತಹಶೀಲ್ದಾರ ಮಲ್ಲಿಕಾರ್ಜುನ ಶಿವಪುರೆ, ಕಂದಾಯ ಅಧಿಕಾರಿ ಮೋತಿಲಾಲ ಚವ್ಹಾಣ ಹಾಗೂ ಇತರ ಅಧಿಕಾರಿಗಳು ವಿವಾದಿತ ಸ್ಥಳಕ್ಕೆ ಭೇಟಿ ನೀಡಿ, ಕಟ್ಟೆಯನ್ನು
ತೆರವುಗೊಳಿಸಿದ್ದಾರೆ. ಪೊಲೀಸ್ ಕಾವಲು: ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಳೆಶಹಾಬಾದನ ಕೋಟೆಯ
ಸುತ್ತಮುತ್ತ, ಜಾಕೀರ್ ಹುಸೇನ್ ವೃತ್ತದಲ್ಲಿ ಪೊಲೀಸ್‌ರನ್ನು ಕಾವಲಿಗೆ ಹಾಕಲಾಗಿದೆ.