Advertisement
ಸುರತ್ಕಲ್‌ನಲ್ಲಿ ನಡೆಯುತ್ತಿರುವ ಟೋಲ್‌ಗೇಟ್ ವಿರೋಧಿ ಹೋರಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಲ್ಲಿನ ಹೆದ್ದಾರಿ, ಮೇಲ್ಸೇತುವೆ, ಕೆಳ ರಸ್ತೆಗಳು ಕಳಪೆಯಾಗಿದೆ. ಬಿಕರ್ನಕಟ್ಟೆ ಹೆದ್ದಾರಿಯ ಮೇಲ್ಸೇತುವೆ ಸಮೀಪ ಮೂಡಬಿದಿರೆಗೆ ಸಾಗುವ ರಸ್ತೆ ಗ್ರಾಮೀಣ ರಸ್ತೆಗಿಂತಲೂ ಕೆಟ್ಟದಾಗಿದೆ. ಇಡೀ ದೇಶದಲ್ಲಿ ಏಕಮುಖ ಮೇಲ್ಸೇತುವೆ ಇದ್ದರೆ ಬಹುಶಃ ಅದು ಜಿಲ್ಲೆಯಲ್ಲಿ ಮಾತ್ರ. ಗುತ್ತಿಗೆದಾರರ ಹೊಟ್ಟೆ ತುಂಬಿಸಲು ಟೋಲ್‌ಗಳು ಬೇಕಾಗಿಲ್ಲ ಎಂದರು.
Related Articles
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತ ನಾಡಿ, ಸಂಸದರು ಅಸಹಾಯಕತೆ ವ್ಯಕ್ತ ಪಡಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ. ಇದೇ ಸಂದರ್ಭ ಇತ್ತ ಕಡೆ ಗುತ್ತಿಗೆ ನೀಡಲು ಮೌನ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಇದು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿದ್ದಾರೆ. ಭಾಷಾ ಜ್ಞಾನದ ಕೊರತೆಯಿಂದ ಯಾವ ಭಾಷೆಯಲ್ಲಿ ಪತ್ರ ಬರೆದಿದ್ದಾರೆ ಎಂಬುದು ತಿಳಿದಿಲ್ಲ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಕನ್ನಡ ಓದಲು ತಿಳಿದಿಲ್ಲ. ಹೀಗಾಗಿ ನೇರವಾಗಿ ಮಾಡುವ ಕೆಲಸವನ್ನು ಪತ್ರ ಬರೆದು ವಿಳಂಬಿಸುತ್ತಿದ್ದಾರೆ. ಇದು ಒಂದು ನಾಟಕ ಎಂದು ಆರೋಪಿಸಿದರು.
Advertisement