Advertisement

ವಿಲೀನ ವಿರೋಧಿಸಿ ಕಾಂಗ್ರೆಸ್‌ನಿಂದ ವಿವಿಧೆಡೆ ಪ್ರತಿಭಟನೆ

05:34 AM Jan 11, 2019 | |

ಮೂಡುಬಿದಿರೆ: ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ವತಿಯಿಂದ ಕಾರ್ಯ ಕರ್ತರು ಕೈಗೆ ಕಪ್ಪು ಬಟ್ಟೆ ಕಟ್ಟಿ ಇಲ್ಲಿನ ವಿಜಯ ಬ್ಯಾಂಕ್‌ ಶಾಖೆ ಎದುರು ಪ್ರತಿಭಟನೆ ನಡೆಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಲೇರಿಯನ್‌ ಸಿಕ್ವೇರಾ ಮಾತನಾಡಿ, ‘ಕರಾವಳಿ ಜಿಲ್ಲೆಯ ಜನರ ಅನುಕೂಲಕ್ಕಾಗಿ ಸುಂದರ್‌ರಾಮ್‌ ಶೆಟ್ಟಿ ವಿಜಯ ಬ್ಯಾಂಕ್‌ ಸ್ಥಾಪಿಸಿದ್ದರು. ಲಾಭದಾಯಕವಾಗಿರುವ ಈ ಬ್ಯಾಂಕನ್ನು ಕೇಂದ್ರ ಸರಕಾರ ನಷ್ಟದಲ್ಲಿರುವ ಬ್ಯಾಂಕ್‌ ಆಪ್‌ ಬರೋಡಾ ಮತ್ತು ದೇನಾ ಬ್ಯಾಂಕ್‌ ಜತೆ ವಿಲೀನಗೊಳಿಸಿ ಕರಾವಳಿಯ ಜನತೆಗೆ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.

Advertisement

ಪಕ್ಷ ಪ್ರಮುಖರಾದ ರತ್ನಾಕರ ಸಿ.ಮೊಯಿಲಿ, ಪಿ.ಕೆ. ಥೋಮಸ್‌, ಸುರೇಶ್‌ ಕೋಟ್ಯಾನ್‌, ಪುರಸಭೆ ಉಪಾಧ್ಯಕ್ಷ ವಿನೋದ್‌ ಸೆರಾವೊ, ಮಾಜಿ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ರಾಘು ಪೂಜಾರಿ, ದಿಲೀಪ್‌ ಶೆಟ್ಟಿ, ವಿಜಯ ಬ್ಯಾಂಕ್‌ ನಿವೃತ್ತ ಸಿಬಂದಿ ಅರುಣ್‌ ಶೆಟ್ಟಿ, ಜೋಯ್ಸ ಪಾಲ್ಗೊಂಡಿದ್ದರು.

ಉಳ್ಳಾಲ ವರದಿ
ಉಳ್ಳಾಲ:
ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಕೊಣಾಜೆ ವಿಜಯ ಬ್ಯಾಂಕ್‌ ಮುಂಭಾಗದಲ್ಲಿ ನಡೆದ ಪ್ರತಿಭಟನ ಸಭೆ ನಡೆಯಿತು.

ಪ್ರಧಾನಿ ಮೋದಿ ದೇಶದ ದುರ್ಬಲ ಪ್ರಧಾನ ಮಂತ್ರಿ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಬಿಜೆಪಿ ಮುಖಂಡರೇ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುತ್ತಿದ್ದಾರೆ. ದೇಶದ ಸಮಸ್ಯೆ ಬಗೆಹರಿಸಬೇಕಿದ್ದ ಪ್ರಧಾನಿ ವಿದೇಶ ಸುತ್ತಿ ಖಜಾನೆ ಖಾಲಿ ಮಾಡಿದ್ದಾರೆ ಎಂದು ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌ ಅಭಿಪ್ರಾಯಪಟ್ಟರು. ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅಸೈಗೋಳಿ ಅಧ್ಯಕ್ಷತೆ ವಹಿಸಿದ್ದರು.

ತಾ.ಪಂ.ಅಧ್ಯಕ್ಷ ಮಹಮ್ಮದ್‌ ಮೋನು, ಕೊಣಾಜೆ ಗ್ರಾ.ಪಂ.ಅಧ್ಯಕ್ಷ ನಝರ್‌ ಷಾ ಪಟ್ಟೋರಿ, ಮಾಜಿ ಅಧ್ಯಕ್ಷರಾದ ಶೌಕತ್‌ ಆಲಿ, ಅಚ್ಯುತ ಗಟ್ಟಿ, ಮಾಜಿ ಉಪಾಧ್ಯಕ್ಷ ರಾಜಾರಾಮ ರೈ ಕಲ್ಲಿಮಾರು ಹೊಸಮನೆ,ತಾ.ಪಂ.ಸದಸ್ಯರಾದ ಪದ್ಮಾವತಿ ಪೂಜಾರಿ, ಜಬ್ಟಾರ್‌ ಬೋಳಿಯಾರ್‌, ಮಾಜಿ ಸದಸ್ಯ ಉಮರ್‌ ಫಜೀರು, ಪಜೀರು ಗ್ರಾ.ಪಂ.ಅಧ್ಯಕ್ಷ ಸೀತಾರಾಮ ಶೆಟ್ಟಿ, ಹರೇಕಳ ಗ್ರಾ.ಪಂ.ಅಧ್ಯಕ್ಷೆ ಅನಿತಾ ಡಿ’ಸೋಜಾ, ಮುಖಂಡರಾದ ಶ್ರೀನಿವಾಸ ಶೆಟ್ಟಿ ಪುಲ್ಲು ಅಸೈಗೋಳಿ, ಕಾಂಗ್ರೆಸ್‌ ಕೊಣಾಜೆ ಸಮಿತಿ ಅಧ್ಯಕ್ಷ ಪದ್ಮನಾಭ ಗಟ್ಟಿ ಕೆಳಗಿನ ಮನೆ, ಸಂಘಟನ ಕಾರ್ಯದರ್ಶಿಗಳಾದ ಸಲೀಂ ಮೆಗಾ, ಇಕ್ಬಾಲ್‌ ಸಾಮಾಣಿಗೆ, ಬದ್ರುದ್ದೀನ್‌ ಫರೀದ್‌ ನಗರ, ಬಶೀರ್‌ ಉಂಬುದ, ಸಲೀಂ ಪಜೀರ್‌ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ರಹ್ಮಾನ್‌ ಕೋಡಿಜಾಲ್‌ ಸ್ವಾಗತಿಸಿದರು. ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಮಹಮ್ಮದ್‌ ಮುಸ್ತಾಫ ನಿರ್ವಹಿಸಿ, ವಂದಿಸಿದರು.

Advertisement

ಕುಪ್ಪೆಪದವು ವರದಿ
ಎಡಪದವು:
ದಕ್ಷಿಣ ವಿಜಯ ಬ್ಯಾಂಕನ್ನು ಬ್ಯಾಂಕ್‌ ಆಫ್‌ ಬರೋಡ ಬ್ಯಾಂಕಿಗೆ ವಿಲೀನಗೊಳಿಸುವ ಮೂಲಕ ಕನ್ನಡದ ಹೆಮ್ಮೆಯ ಬ್ಯಾಂಕನ್ನು ಕೇಂದ್ರ ಸರಕಾರ ನಾಶ ಮಾಡಲು ಹೊರಟಿದೆ. ಯಾವುದೇ ಕಾರಣಕ್ಕೂ ಬ್ಯಾಂಕ್‌ ಹೆಸರು ಬದಲಾವಣೆ ಸಲ್ಲದು ಎಂದು ಕಾಂಗ್ರೆಸ್‌ ಮುಖಂಡ ನೀಲಯ್ಯ ಎಂ. ಅಗರಿ ಆರೋಪಿಸಿದರು. ಕುಪ್ಪೆಪದವು ವಲಯ ಕಾಂಗ್ರೆಸ್‌ ವತಿಯಿಂದ ಕುಪ್ಪೆಪದವು ವಿಜಯ ಬ್ಯಾಂಕ್‌ ಶಾಖೆಯ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾ.ಪಂ. ಸದಸ್ಯ ಬಿ.ಎ. ಅಬೂಬಕ್ಕರ್‌ ಮಾತನಾಡಿ, ಎ.ಬಿ. ಶೆಟ್ಟಿಯವರಿಂದ ಸ್ಥಾಪಿಸಲ್ಪಟ್ಟ ನಮ್ಮ ಹೆಮ್ಮೆಯ ವಿಜಯ ಬ್ಯಾಂಕನ್ನು ಯಾವುದೇ ಕಾರಣಕ್ಕೂ ವಿಲೀನಗೊಳಿಸುವುದನ್ನು ಕಾಂಗ್ರೆಸ್‌ ಖಂಡಿಸುತ್ತದೆ ಎಂದರು. ವಲಯ ಕಾಂಗ್ರೆಸ್‌ ಅಧ್ಯಕ್ಷ ರಾಮಚಂದ್ರ ಸಾಲ್ಯಾನ್‌ ತಾಳಿಪಾಡಿ, ಪಂ.ಅಧ್ಯಕ್ಷೆ ಲೀಲಾವತಿ, ಮುಖಂಡರಾದ ಚಂದ್ರಹಾಸ ಶೆಟ್ಟಿ ಮುತ್ತೂರು, ಉದಯ ಕುಮಾರ್‌, ಹಿರಣಾಕ್ಷ ಕೋಟ್ಯಾನ್‌, ಅಜಿತ್‌ ಕುಮಾರ್‌ ಜೈನ್‌, ಐ.ಕೆ. ಹಸನ್‌ ಕುಳವೂರು, ನಾಬರ್ಟ್‌ ಮಥಾಯಸ್‌ ಭಾಗವಹಿಸಿದ್ದರು.

ಕಿನ್ನಿಗೋಳಿ ವರದಿ
ಕಿನ್ನಿಗೋಳಿ:
ಇಲ್ಲಿನ ವಿಜಯ ಬ್ಯಾಂಕ್‌ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಕಾಂಗ್ರೆಸ್‌ ಮುಖಂಡ ರಾಜಶೇಖರ ಕೋಟ್ಯಾನ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್ ಪಿಂಟೋ, ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧನಂಜಯ ಮಟ್ಟು, ಕೆ.ಪಿ.ಸಿ.ಸಿ. ಸದಸ್ಯ ವಸಂತ ಬೆರ್ನಾಡ್‌, ಕಿನ್ನಿಗೋಳಿ ಪಂಚಾಯತ್‌ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಉಪಾಧ್ಯಕ್ಷೆ ಸುಜಾತಾ ಪೂಜಾರ್ತಿ, ಸದಸ್ಯ ಸಂತೋಷ್‌, ಅರುಣ್‌ ಕುಮಾರ್‌, ಕಿನ್ನಿಗೋಳಿ ವಲಯ ಕಾಂಗ್ರೆಸ್‌ ಅಧ್ಯಕ್ಷ ಜೊಸ್ಸಿ ಪಿಂಟೋ, ಬಾಲದಿತ್ಯ ಅಳ್ವ, ಕಿಶೋರ್‌ ಶೆಟ್ಟಿ ದೆಪ್ಪುಣಿಗುತ್ತು, ಪ್ರವೀಣ್‌ ಕುಮಾರ್‌ ಬೊಳ್ಳೂರು, ಪದ್ಮಾವತಿ ಶೆಟ್ಟಿ, ಸುನೀತಾ ಕಿನ್ನಿಗೋಳಿ, ಸಂತೋಷ್‌, ಅಬ್ದುಲ್‌ ಅಜೀಜ್‌, ಧರ್ಮಾನಂದ ತೋಕೂರು, ದಿನೇಶ್‌ ಸುವರ್ಣ, ಮೈಯದ್ದಿ ಪಕ್ಷಿಕೆರೆ, ಬಶೀರ್‌ ಕುಳಾಯಿ, ವಾಹಿದ್‌ ತೋಕೂರು, ಮನ್ಸೂರ್‌ ಸಾಗ್‌, ಸವಿತಾ ಬೆಳ್ಳಾಯರು, ಶರ್ಮಿಳಾ, ಟಿ.ಎ. ಹನೀಫ್‌ ಉಪಸ್ಥಿತರಿದ್ದರು.

ಗುರುಪುರ ವರದಿ
ಗುರುಪುರ:
ಇಲ್ಲಿನ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿರುವ ವಿಜಯ ಬ್ಯಾಂಕ್‌ ಶಾಖೆಯ ಎದುರು ಪ್ರತಿಭಟನೆ ನಡೆಯಿತು.

ಕೆಪಿಸಿಸಿ ಸದಸ್ಯ ಪೃಥ್ವಿರಾಜ್‌ ಆರ್‌.ಕೆ., ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸುರೇಂದ್ರ, ಜಿ.ಪಂ. ಸದಸ್ಯಯು.ಪಿ. ಇಬ್ರಾಹಿಂ, ಕಂದಾವರ ಗ್ರಾ.ಪಂ. ಅಧ್ಯಕ್ಷೆ ವಿಜಯಾ ಜಿ. ಸುವರ್ಣ, ಪಡುಪೆರಾರ ಗ್ರಾ.ಪಂ. ಉಪಾಧ್ಯಕ್ಷ ನೂರ್‌ ಮೊಹಮ್ಮದ್‌, ಗಂಜಿಮಠ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಜಾಕಿರ್‌, ಗುರುಪುರ ಗ್ರಾ.ಪಂ. ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ.ಎಂ. ಉದಯ ಭಟ್, ಕಂದಾವರ ಗ್ರಾ.ಪಂ. ಉಪಾಧ್ಯಕ್ಷ ದೇವೇಂದ್ರ, ಹರೀಶ್‌ ಬಂಗ್ಲೆಗುಡ್ಡೆ, ತಾ.ಪಂ. ಸದಸ್ಯ ಸಚಿನ್‌ ಅಡಪ, ಸುನಿಲ್‌ ಪೂಜಾರಿ ಗಂಜಿಮಠ, ಕೃಷ್ಣ ಅಮೀನ್‌, ಟಿ. ಅಹಮ್ಮದ್‌ ಬಾವಾ ಅಡ್ಡೂರು, ಜೆರಾಲ್ಡ್‌ ಸಿಕ್ವೇರ, ಬೂಬ, ಬಾಷಾ ಮಾಸ್ಟರ್‌, ಬಾಷಾ ಗುರುಪುರ ಮೊದಲಾದವರಿದ್ದರು.

ಬಜಪೆ ವರದಿ
ಬಜಪೆ:
ಇಲ್ಲಿನ ವಲಯ ಕಾಂಗ್ರೆಸ್‌ ವತಿಯಿಂದ ವಿಜಯ ಬ್ಯಾಂಕ್‌ ಶಾಖೆಯ ಎದುರು ಪ್ರತಿಭಟನೆ ನಡೆಯಿತು.
ಕಾಂಗ್ರೆಸ್‌ ಮುಖಂಡ ಮೋನಪ್ಪ ಶೆಟ್ಟಿ ಎಕ್ಕಾರು ಮಾತನಾಡಿ, ಲಾಭದಲ್ಲಿರುವ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ಬರೋಡಾ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ಜತೆ ವಿಲೀನಕ್ಕೆ ನಮ್ಮ ವಿರೋಧವಿದೆ. ಬ್ಯಾಂಕ್‌ನ್ನು ಉಳಿಸಲು ಸಂಸದ ನಳಿನ್‌ ಕುಮಾರ್‌ ಏನೂ ಮಾಡಿಲ್ಲ. ನಷ್ಟದಲ್ಲಿರುವ ಪ್ರಧಾನಿ ಮೋದಿಯವರ ಗುಜರಾತ್‌ನ ಬರೋಡಾ ಬ್ಯಾಂಕ್‌ಗೆ ವಿಲೀನ ಮಾಡಲಾಗುತ್ತದೆ. ಇದರಿಂದ ಬ್ಯಾಂಕ್‌ನ ವಿಶ್ವಾಸ ಕಡಿಮೆಯಾಗುತ್ತದೆ ಎಂದರು.

ಜಗನ್ನಾಥ್‌ ಸಾಲ್ಯಾನ್‌ ಕರಂಬಾರು, ಬಾಬು ಶೆಟ್ಟಿ ಮರವೂರು, ಮಹಮದ್‌ ಶರೀಫ್‌, ಡಾ| ಶೇಖರ್‌ ಪೂಜಾರಿ, ಬಿ.ಜೆ.ರಹೀಂ, ಸುರೇಂದ್ರ ಪೆರ್ಗಡೆ, ಸಾಹುಲ್‌ ಹಮೀದ್‌, ಸಿರಾಜ್‌ ಹುಸೇನ್‌, ಉದಯ ಪೂಜಾರಿ, ಜಾಕೋಬ್‌ ಪಿರೇರಾ, ನಾಗೇಶ್‌ ಸಫಲಿಗ, ಪದ್ಮನಾಭ, ಲಕ್ಷ್ಮಣ್‌ ಅಮೀನ್‌, ಚೆನ್ನಪ್ಪ ಉಪಸ್ಥಿತರಿದ್ದರು. ಮಹಮದ್‌ ಹನೀಫ್‌ ನಿರೂಪಿಸಿದರು.

ಮೂಲ್ಕಿ  ವರದಿ
ಮೂಲ್ಕಿ:
ಮೂಲ್ಕಿ ವಿಜಯ ಬ್ಯಾಂಕ್‌ ಕಚೇರಿಯ ಎದುರು ಮೂಲ್ಕಿ ಬ್ಲಾಕ್‌ ಕಾಂಗ್ರ್ರೆಸ್‌ ವತಿಯಿಂದ ಪ್ರತಿಭಟನೆ ನಡೆಯಿತು. ಬ್ಲಾಕ್‌ ಅಧ್ಯಕ್ಷ ಧನಂಜಯ ಕೋಟ್ಯಾನ್‌ ಮಟ್ಟು, ಕೆ.ಪಿ.ಸಿ.ಸಿ. ರಾಜ್ಯ ಕಾರ್ಯದರ್ಶಿ ಡಾ| ರಾಜಶೇಖರ್‌ ಕೋಟ್ಯಾನ್‌, ಕೆ.ಪಿ.ಸಿ.ಸಿ. ಸಮಿತಿಯ ಎಚ್. ವಸಂತ್‌ ಬೆರ್ನಾಡ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮಾಜಿ ಅಧ್ಯಕ್ಷರಾದ ಮನೋರಮಾ ಹೆನ್ರಿ, ವಿಮಲಾ ಪೂಜಾರಿ, ದೆಪ್ಪುಣಿ ಗುತ್ತು ಕಿಶೋರ್‌ ಶೆಟ್ಟಿ, ಪುತ್ತು ಬಾವಾ, ಅಶೋಕ್‌ ಪೂಜಾರಿ, ಮನ್ಸೂರ್‌ ಸಾಗು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next