Advertisement

ಮತ್ತೆ ಭಾರತ-ಆಸ್ಟ್ರೇಲಿಯ ಕ್ರಿಕೆಟ್‌ ಸರಣಿ 

01:25 AM Jan 11, 2019 | Team Udayavani |

ಹೊಸದಿಲ್ಲಿ: ಇನ್ನೂ ಭಾರತ ಕ್ರಿಕೆಟ್‌ ತಂಡದ ಆಸ್ಟ್ರೇಲಿಯ ಪ್ರವಾಸ ಮುಗಿದಿಲ್ಲ. ಅಷ್ಟರಲ್ಲೇ ಆಸ್ಟ್ರೇಲಿಯ ತಂಡದ ಭಾರತ ಪ್ರವಾಸದ ಕಾರ್ಯಕ್ರಮವೊಂದು ದಿಢೀರನೇ ನಿಗದಿಯಾಗಿದೆ. ಮುಂದಿನ ಫೆಬ್ರವರಿ 24ರಿಂದ ಮಾರ್ಚ್‌ 13ರ ತನಕ ಕಾಂಗರೂ ಪಡೆ ಸೀಮಿತ ಓವರ್‌ಗಳ ಸರಣಿಯನ್ನಾಡಲು ಭಾರತ ಪ್ರವಾಸ ಕೈಗೊಳ್ಳಲಿದೆ. ಬಿಸಿಸಿಐ ಗುರುವಾರ ಈ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

Advertisement

ಈ ಸರಣಿಯಲ್ಲಿ 2 ಟಿ20 ಹಾಗೂ 5 ಏಕದಿನ ಪಂದ್ಯಗಳನ್ನು ಆಡಲಾಗುವುದು. ಫೆ. 24ರಂದು ಬೆಂಗಳೂರಿನಲ್ಲಿ ನಡೆಯುವ ಟಿ20 ಪಂದ್ಯದೊಂದಿಗೆ ಭಾರತ-ಆಸ್ಟ್ರೇಲಿಯ ಮುಖಾಮುಖೀ ಆರಂಭವಾಗಲಿದ್ದು, ಮಾ. 13ರ ಹೊಸದಿಲ್ಲಿ ಏಕದಿನ ಪಂದ್ಯದೊಂದಿಗೆ ಸರಣಿ ಮುಗಿಯಲಿದೆ. ಮುಂಬರುವ ಏಕದಿನ ವಿಶ್ವಕಪ್‌ ಪಂದ್ಯಾವಳಿಗೆ ಹುರಿಗೊಳ್ಳಲು ಈ ಸರಣಿಯನ್ನು ಏರ್ಪಡಿಸಲಾಗಿದೆ. ಹೀಗಾಗಿ ಪೂರ್ಣ ಸಾಮರ್ಥ್ಯದ ತಂಡಗಳೇ ಇಲ್ಲಿ ಕಣಕ್ಕಿಳಿಯುವುದರಲ್ಲಿ ಅನುಮಾನವಿಲ್ಲ.

ಈ ಸರಣಿಯ ಬಳಿಕ ಆಸ್ಟ್ರೇಲಿಯ ತಂಡ ಪಾಕಿಸ್ಥಾನ ವಿರುದ್ಧ ಸರಣಿ ಆಡಲಿದೆ. ಭಾರತದ ಆಟಗಾರರಿಗೆ ಐಪಿಎಲ್‌ ಎದುರಾಗಲಿದೆ.

ಇವೆಲ್ಲವೂ ಹಗಲು-ರಾತ್ರಿ ಪಂದ್ಯಗಳಾಗಲಿವೆ. ಟಿ20 ಪಂದ್ಯಗಳು ಸಂಜೆ 7ರಿಂದ, ಏಕದಿನ ಪಂದ್ಯಗಳು ಅಪರಾಹ್ನ 1.30ರಿಂದ ಆರಂಭವಾಗಲಿವೆ.

ಭಾರತ-ಆಸ್ಟ್ರೇಲಿಯ ಸರಣಿ ವೇಳಾಪಟ್ಟಿ
ದಿನಾಂಕ    ಪಂದ್ಯ    ಸ್ಥಳ

ಫೆ. 24    1ನೇ ಟಿ20    ಬೆಂಗಳೂರು
ಫೆ. 27    2ನೇ ಟಿ20    ವಿಶಾಖಪಟ್ಟಣ
ಮಾ. 2    1ನೇ ಏಕದಿನ    ಹೈದರಾಬಾದ್‌
ಮಾ. 5    2ನೇ ಏಕದಿನ    ನಾಗ್ಪುರ
ಮಾ. 8    3ನೇ ಏಕದಿನ    ರಾಂಚಿ
ಮಾ. 10    4ನೇ ಏಕದಿನ    ಮೊಹಾಲಿ
ಮಾ. 13    5ನೇ ಏಕದಿನ    ಹೊಸದಿಲ್ಲಿ

Advertisement
Advertisement

Udayavani is now on Telegram. Click here to join our channel and stay updated with the latest news.

Next