ಬೆಂಗಳೂರು: ಪತಿಯ ವಿರುದ್ಧವೇ ದಾಖಲಿಸಿದ್ದ ಅತ್ಯಾಚಾರ ಆರೋಪದ ದೂರನ್ನು ರದ್ದುಪಡಿಸಿರುವ ಹೈ ಕೋರ್ಟ್, ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದ ಮ್ಯಾಜಿಸ್ಟ್ರೇಟ್ ಕೋರ್ಟಿನ ಕ್ರಮವನ್ನು ಕಟುವಾಗಿ ಟೀಕಿಸಿದೆ.
ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಪತ್ನಿ ತನ್ನ ವಿರುದ್ಧ ದಾಖಲಿಸಿದ ದೂರು ಮತ್ತು ಅದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸಲ್ಲಿಸಿದ ದೋಷಾರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಗಿರಿನಗರ ನಿವಾಸಿ ಮಂಜುನಾಥ್ ಹೆಬ್ಟಾರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ದೂರು ದಾಖಲಿಸಲಾಗಿದೆ. ತನಿಖೆ ಮತ್ತು ಸಂತ್ರಸ್ತರು ಅಧೀನ ನ್ಯಾಯಾಲಯದಲ್ಲಿ ದಾಖಲಿಸಿರುವ ಹೇಳಿಕೆ ಗಳನ್ನು ಗಮನಿಸಿದರೆ ಅರ್ಜಿದಾರರು ಪತ್ನಿಯ ಮೇಲೆ ಅತ್ಯಾ ಚಾರ, ಹಲ್ಲೆ ಮತ್ತು ಕೌಟುಂಬಿಕ ದೌರ್ಜನ್ಯ ಅಪರಾಧ ಕೃತ್ಯ ಎಸಗಿ ರುವುದನ್ನು ಸಾಬೀತು ಪಡಿಸುವ ಅಂಶಗಳು ಎಲ್ಲಿಯೂ ಇಲ್ಲ.
ಹಣಕ್ಕೆ ಆಮಿಷ ವೊಡ್ಡಿದ ಬಗ್ಗೆ ದೂರು ಹಾಗೂ ದೋಷಾರೋಪ ಪಟ್ಟಿಯಲ್ಲಿ ಯಾವುದೇ ಆರೋಪವಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರಕರಣದ ವಿಚಾರಣೆ ಕಾಗ್ನಿಜೆನ್ಸ್ ತೆಗೆದುಕೊಳ್ಳುವಾಗ ವಿವೇಚನೆ ಬಳಸಬೇಕಿತ್ತು ಎಂದು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ:ಬಾಂಗ್ಲಾದಲ್ಲಿ ಕಾಳಿ ಮಂದಿರ ಉದ್ಘಾಟಿಸಿದ ರಾಷ್ಟ್ರಪತಿ ಕೋವಿಂದ್