Advertisement

ಮತ್ತೆ ಎರಡು ಸಾವಿರ ಚೈಲ್ಡ್‌ ಲಾಕ್‌ ತೆರವು

06:39 AM Jan 15, 2019 | Team Udayavani |

ಬೆಂಗಳೂರು: ಕ್ಯಾಬ್‌ಗಳಲ್ಲಿರುವ ಚೈಲ್ಡ್‌ ಲಾಕ್‌ ತೆರವು ಕಾರ್ಯಾಚರಣೆ ಮುಂದುವರಿಸಿರುವ ಸಾರಿಗೆ ಇಲಾಖೆ ಸಿಬ್ಬಂದಿ, ಸೋಮವಾರ ಎರಡು ಸಾವಿರ ವಾಹನಗಳ ಚೈಲ್ಡ್‌ಲಾಕ್‌ ವ್ಯವಸ್ಥೆ ನಿಷ್ಕ್ರಿಯಗೊಳಿಸಿದ್ದಾರೆ.

Advertisement

ಚೈಲ್ಡ್‌ ಲಾಕ್‌ ತೆರವುಗೊಳಿಸಲಾದ ಎರಡು ಸಾವಿರ ಕ್ಯಾಬ್‌ಗಳ ಪೈಕಿ ನಗರದಲ್ಲೇ 1,500 ಕ್ಯಾಬ್‌ಗಳಿವೆ. ಜ್ಞಾನಭಾರತಿ, ಯಶವಂತಪುರ, ದೇವನಹಳ್ಳಿ ಸುತ್ತಲಿನ ಪ್ರದೇಶಗಳಲ್ಲಿ ಸೂಚನೆ ನೀಡಿದ ನಂತರವೂ ಈ ವ್ಯವಸ್ಥೆ ಅಳವಡಿಸಿಕೊಂಡಿದ್ದ ಕ್ಯಾಬ್‌ಗಳನ್ನು ತಡೆದು, ಯಂತ್ರವನ್ನು ನಿಷ್ಕ್ರಿಯಗೊಳಿಸಲಾಯಿತು.

ಈಗಾಗಲೇ ರಾಜ್ಯಾದ್ಯಂತ ಎಲ್ಲ ಸಾರಿಗೆ ಪ್ರಾದೇಶಿಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ. ಚೈಲ್ಡ್‌ಲಾಕ್‌ ತೆರವುಗೊಳಿಸಲು ಇಲಾಖೆಯು ಜ.16ರ ಗಡುವು ವಿಧಿಸಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಕರ್ನಾಟಕ ಮೋಟಾರು ವಾಹನ ನಿಯಮ 1988ರ ಕಲಂ 2 (25)ರ ಪ್ರಕಾರ ಸಾರಿಗೆ ವಾಹನಗಳಲ್ಲಿ (ಕ್ಯಾಬ್‌ಗಳು) ಚೈಲ್ಡ್‌ ಲಾಕ್‌ ಸಿಸ್ಟ್‌ಂ ಅಳವಡಿಸುವಂತಿಲ್ಲ.

ಅಂತಹ ವಾಹನಗಳಿಗೆ ರಹದಾರಿ ಕೂಡ ನೀಡುವಂತಿಲ್ಲ. ಹೈಕೋರ್ಟ್‌ ಕೂಡ ಈಚೆಗೆ ಟೂರಿಸ್ಟ್‌ ಟ್ಯಾಕ್ಸಿ ಮತ್ತು ಆ್ಯಪ್‌ ಆಧಾರಿತ ಟ್ಯಾಕ್ಸಿಗಳಲ್ಲಿರುವ ಚೈಲ್ಡ್‌ ಲಾಕ್‌ ನಿಷ್ಕ್ರಿàಯಗೊಳಿಸಬೇಕು. ದೃಢೀಕರಣ ಇಲ್ಲದ ಯಾವುದೇ ವಾಹನಗಳಿಗೆ ಕಾರ್ಯಾಚರಣೆಗೆ ಅವಕಾಶ ನೀಡಬಾರದು ಎಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next