Advertisement

ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿ; ಮತ್ತೆ 170 ಡಿಎಲ್‌ ಅಮಾನತಿಗೆ ಪ್ರಸ್ತಾವನೆ

03:52 PM Aug 08, 2023 | Team Udayavani |

ಮಂಗಳೂರು: ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಜು. 27 ರಿಂದ ಆ. 6ರ ವರೆಗೆ ಮೋಟಾರು ವಾಹನ ಕಾಯಿದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಒಟ್ಟು 170 ವಾಹನ ಸವಾರ/ಚಾಲಕರ ಅನುಜ್ಞಾ ಪತ್ರ (ಡಿಎಲ್‌) ಅಮಾನತುಪಡಿಸುವ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement

ಅಪಘಾತಕ್ಕೆ ಸಂಬಂಧಿಸಿ 24, ಅತೀವೇಗ, ನಿರ್ಲಕ್ಷ್ಯದ ಚಾಲನೆಗೆ 12, ಸರಕು ಸಾಗಾಟದ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟಕ್ಕೆ 11, ಚಾಲನೆ ವೇಳೆ ಮೊಬೈಲ್‌ ಬಳಕೆಗೆ 5, ರೆಡ್‌ ಸಿಗ್ನಲ್‌ ಜಂಪ್‌ ಮಾಡಿದ್ದಕ್ಕೆ 7, ಟ್ರಿಪಲ್‌ ರೈಡಿಂಗ್‌ಗೆ 3, ಹೆಲ್ಮೆಟ್‌ ಇಲ್ಲದ ಚಾಲನೆಗೆ 95 ಮತ್ತು ಸೀಟ್‌ ಬೆಲ್ಟ್ ಹಾಕದಿರುವುದಕ್ಕೆ 13 ಲೈಸನ್ಸ್‌ಗಳನ್ನು ಅಮಾನತುಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಜು. 13ರಿಂದ ಜು. 26ರ ವರೆಗೆ ಒಟ್ಟು 222 ವಾಹನಗಳ ಸವಾರರು, ಚಾಲಕರ ಡಿಎಲ್‌ ಅಮಾನತಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದ್ದಾರೆ.

ಪ್ರಕರಣ ದಾಖಲು ವಾಹನಗಳಲ್ಲಿ ಮಿತಿಮೀರಿ ಪ್ರಯಾಣಿಕರನ್ನು ಸಾಗಿಸಿರುವ ಕುರಿತು ಕಳೆದ 11 ದಿನಗಳಲ್ಲಿ 89 ಪ್ರಕರಣಗಳನ್ನು ಹಾಗೂ ಏಕಮುಖ ಸಂಚಾರಕ್ಕೆ ವಿರುದ್ಧವಾಗಿ ವಾಹನ ಚಲಾಯಿಸಿರುವ ಬಗ್ಗೆ 6 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next