Advertisement

ಮತ್ತೆ ಕಾನೂನು ಸಮರ: ಪೆಟಾ

03:45 AM Jul 05, 2017 | Team Udayavani |

ಮಂಗಳೂರು: ಕಂಬಳ ಆಯೋಜನೆಗೆ ಅವಕಾಶವಾಗುವಂತೆ ಕರ್ನಾಟಕ ಸರಕಾರ ಸಿದ್ಧಪಡಿಸಿರುವ ವಿಧೇಯಕದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಪ್ರಾಣಿ ದಯಾ ಸಂಘ (ಪೆಟಾ) ಹೇಳಿದೆ.

Advertisement

ಕೋಣಗಳಿಗೆ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡದ ಹೊರತು ಅವುಗಳು ಓಡಲಾರವು ಎಂಬುದಾಗಿ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲಿವ್ಬಿಐ) ನಡೆಸಿದ ಶೋಧನೆಯಲ್ಲಿ ಸಾಬೀತುಗೊಂಡಿದೆ. ಮಂಡಳಿ ಸಿದ್ಧಪಡಿಸಿರುವ ವರದಿಯಲ್ಲಿ ಕಂಬಳದ ಕೋಣಗಳಿಗೆ ಹಿಂಸೆಯ ವಿವಿಧ ಸ್ವರೂಪಗಳ ಛಾಯಾಚಿತ್ರಗಳಿವೆ. ಕೋಣಗಳು ರೇಸ್‌ಗಳಿಗೆ ಯೋಗ್ಯವಲ್ಲ ಎಂಬುದು ದೃಢಪಟ್ಟಿದ್ದು ಈ ವಾದವನ್ನು ಸರ್ವೋಚ್ಚ ನ್ಯಾಯಾಲಯ ಕೂಡ 2014ರ ತೀರ್ಪಿನಲ್ಲಿ ಮಾನ್ಯ ಮಾಡಿದೆ ಎಂದು ಪೆಟಾ ಸಿಇಒ ಡಾ| ಮಣಿಲಾಲ್‌ ವಲ್ಲಿಯಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next