ಬೆಂಗಳೂರು: ಚುನಾವಣ ನೀತಿ ಸಂಹಿತೆ ಜಾರಿ ತಂಡಗಳು ಕಳೆದ 24 ಗಂಟೆಗಳಲ್ಲಿ 4.07 ಕೋಟಿ ರೂ. ಮೌಲ್ಯದ ಚುನಾವಣ ಅಕ್ರಮವನ್ನು ಪತ್ತೆ ಹಚ್ಚಿವೆ. ನೀತಿ ಸಂಹಿತೆ ಜಾರಿಯಾದಾಗಿಂದಿನಿಂದ ಈವರೆಗೆ ಒಟ್ಟು 76.92 ಕೋಟಿ ರೂ. ಮೌಲ್ಯದ ಅಕ್ರಮವನ್ನು ಪತ್ತೆ ಮಾಡಲಾಗಿದೆ.
ಕಳೆದ 24 ಗಂಟೆಗಳಲ್ಲಿ 38.06 ಲಕ್ಷ ರೂ., 3.15 ಕೋ. ರೂ. ಮೌಲ್ಯದ ಇತರ ಸೊತ್ತು, 32.66 ಲಕ್ಷ ರೂ. ಮೌಲ್ಯದ 10,024 ಲೀಟರ್ ಮದ್ಯ, 21.20 ಲಕ್ಷ ರೂ. ಮೌಲ್ಯದ 26.52 ಕೆಜಿ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. ಉಚಿತ ಉಡುಗೊರೆ, ಚಿನ್ನ, ಬೆಳ್ಳಿಯಾಗಲಿ ಜಪ್ತಿಯಾಗಿಲ್ಲ.
ಈವರೆಗೆ 23.57 ಕೋಟಿ ರೂ., 1.73 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆ, 10.87 ಕೋ. ರೂ. ಮೌಲ್ಯದ ಇತರ ಸೊತ್ತು, 29.34 ಕೋ. ರೂ. ಮೌಲ್ಯದ 9.16 ಲಕ್ಷ ಲೀ. ಮದ್ಯ, 1.85 ಕೋ. ರೂ. ಮೌಲ್ಯದ 265 ಕೆಜಿ ಮಾದಕ ವಸ್ತು, 9.18 ಕೋ. ರೂ. ಮೌಲ್ಯದ 15.38 ಕೆಜಿ ಚಿನ್ನ, 27.23 ಲಕ್ಷ ರೂ. ಮೌಲ್ಯದ 59.04 ಕೆಜಿ ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ.
ಈವರೆಗೆ ನಗದು, ಮದ್ಯ, ಚಿನ್ನಾಭರಣ, ಬೆಳ್ಳಿ, ಉಚಿತ ಉಡುಗೊರೆ ಪ್ರಕರಣಗಳಲ್ಲಿ 1,030 ಎಫ್ಐಆರ್ ದಾಖಲಿಸಲಾಗಿದೆ. ಅಬಕಾರಿ ಇಲಾಖೆಯ ಘೋರ ಅಪರಾಧ ಪ್ರಕರಣದಡಿ 1,102 ಎಫ್ಐಆರ್ ದಾಖಲಿಸಲಾಗಿದೆ.
ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯವರು 2.80 ಕೋ. ರೂ. ಮೌಲ್ಯದ ದಿನಸಿ ವಸ್ತುಗಳಾದ 19,625 ಅಕ್ಕಿ ಚೀಲ, 102 ಉಪ್ಪಿನ ಚೀಲ, 118 ರಾಗಿ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ. ವಿನೋಬಗರ ಪೊಲೀಸ್ ಠಾಣೆಯವರು 31.08 ಲಕ್ಷ ರೂ. ಮೌಲ್ಯದ 2,750 ಅಕ್ಕಿ ಚೀಲ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಟಿಎಂ ಲೇ ಔಟ್‌ನಲ್ಲಿ 16.59 ಲಕ್ಷ ರೂ., ಹೆಬ್ಬಗೋಡಿ ಪೊಲೀಸರು 20 ಲಕ್ಷ ರೂ. ಮೌಲ್ಯದ 20 ಕೆಜಿ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.