ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು, ಮೇಲ್ಮನೆ ಸದಸ್ಯರು, ಸಂಸದರಿಗೆ ಖರ್ಗೆ ಅವರ ನಿವಾಸದಲ್ಲಿ ಭೋಜನ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರು ಉಪಸ್ಥಿತರಿರುವುದರಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆಗಳು ಸೇರಿ ರಾಜ್ಯದ ರಾಜಕೀಯ ವಿದ್ಯಮಾನಗಳು ಚರ್ಚೆಯಾಗಲಿವೆ.
Advertisement
ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ (ಫೆ. 23) ಲೋಕಸಮರದ ಅಭ್ಯರ್ಥಿಗಳ ಆಯ್ಕೆಗೆ ಬಹುತೇಕ ಅಂತಿಮ ಸುತ್ತಿನ ಸಭೆಗಳು ನಡೆಯಲಿವೆ. ಮಾರ್ಚ್ ಮೊದಲ ಇಲ್ಲವೇ 2ನೇ ವಾರದ ವೇಳೆಗೆ 15 ರಿಂದ 20 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬೇಕೆಂದು ಗಡುವು ಹಾಕಿಕೊಂಡಿರುವ ರಾಜ್ಯದ ನಾಯಕರು ಇದಕ್ಕೆ ಪೂರಕವಾಗಿ ದಿಲ್ಲಿಯಲ್ಲಿ ಬುಧವಾರ ಎಐಸಿಸಿ ಮಟ್ಟದಲ್ಲಿ ಸಭೆ ನಡೆಸಲಿದ್ದಾರೆ.