Advertisement

ಟಿಕ್‌ ಟಾಕ್‌, ಹಲೋ ಆ್ಯಪ್ ಗಳ ಮೇಲೂ ಕೇಂದ್ರದ ನಿಗಾ

02:19 AM Apr 20, 2020 | Hari Prasad |

ನವದೆಹಲಿ: ವೀಡಿಯೋ ಕಾಲ್‌ಗಾಗಿ ಬಳಸುವ ಝೂಮ್‌ ಆ್ಯಪ್‌ ಸುರಕ್ಷಿತವಲ್ಲ ಎಂದು ಕೇಂದ್ರ ಸರಕಾರ ಈಗಾಗಲೇ ಎಚ್ಚರಿಕೆ ನೀಡಿದ್ದು, ಇದೀಗ ಚೀನ ಮೂಲದ ಆ್ಯಪ್‌ ಗಳಾಗಿರುವ ಟಿಕ್‌ ಟಾಕ್‌, ಹಲೋ, ಶೇರ್‌ಇಟ್‌ ಮೇಲೆ ತೀವ್ರ ನಿಗಾವಹಿಸಿದೆ.

Advertisement

ದೇಶದಲ್ಲಿ ಲಾಕ್‌ ಡೌನ್‌ ಅವಧಿಯಲ್ಲಿ ಬಹುತೇಕ ಮೊಬೈಲ್‌ ಆ್ಯಪ್‌ ಬಳಕೆದಾರರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇಂತಹ ಸಂದರ್ಭದಲ್ಲಿ ಆ್ಯಪ್‌ನಿಂದ ಭಾರತೀಯ ನಾಗರಿಕರ ದತ್ತಾಂಶಗಳು ಸೋರಿಕೆಯಾಗುವ ಸಾಧ್ಯತೆ ಇದೆ ಎನ್ನುವ ಅತಂಕವೂ ಇದೀಗ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next