Advertisement

Women’s Bill Passes… ಪ್ರಧಾನಿ ಮೋದಿಗೆ ‘ನಾರಿ ಶಕ್ತಿ’ಯಿಂದ ಅಭಿನಂದನೆಗಳ ಮಹಾಪೂರ

08:35 AM Sep 22, 2023 | Team Udayavani |

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮಹತ್ವದ ಮಸೂದೆಗೆ ರಾಜ್ಯಸಭೆ ಗುರುವಾರ ಅನುಮೋದನೆ ನೀಡಿದೆ. 128ನೇ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಬುಧವಾರ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸಲಾಯಿತು. ರಾಜ್ಯಸಭೆಯ ಒಪ್ಪಿಗೆಯೊಂದಿಗೆ, ಐತಿಹಾಸಿಕ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ.

Advertisement

ಮಹಿಳಾ ಕೋಟಾ ಮಸೂದೆಯ ಅಂಗೀಕಾರವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಇದು ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕ ಪಯಣದಲ್ಲಿ ನಿರ್ಣಾಯಕ ಕ್ಷಣ ಎಂದು ಬಣ್ಣಿಸಿದರು. ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ಮತ ಹಾಕಿದ ಎಲ್ಲ ರಾಜ್ಯಸಭಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ನಾರಿ ಶಕ್ತಿ’ಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಗುರುವಾರ ರಾತ್ರಿ ರಾಜ್ಯಸಭೆಯಲ್ಲಿ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹಿಳಾ ಸಂಸದರು ಪಕ್ಷ ಬೇಧ ಮರೆತು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಸಂಸತ್ ಭವನದ ಹೊರಗೆ ಮಹಿಳಾ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೋಟೋ ತೆಗಿಸಿಕೊಂಡಿದ್ದು ಅದನ್ನು ಟ್ವಿಟರ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.

 

Advertisement

“ನಾರಿ ಶಕ್ತಿ ವಂದನ್ ಅಧಿನಿಯಮ್ ಅನ್ನು ಸಂಸತ್ತಿನಲ್ಲಿ ಅಂಗೀಕರಿಸುವುದರೊಂದಿಗೆ, ನಾವು ಭಾರತದ ಮಹಿಳೆಯರಿಗೆ ಬಲವಾದ ಪ್ರಾತಿನಿಧ್ಯ ಮತ್ತು ಸಬಲೀಕರಣದ ಯುಗವನ್ನು ಪ್ರಾರಂಭಿಸುತ್ತೇವೆ. ಇದು ಕೇವಲ ಶಾಸನವಲ್ಲ; ಇದು ನಮ್ಮ ರಾಷ್ಟ್ರವನ್ನು ನಿರ್ಮಿಸಿದ ಅಸಂಖ್ಯಾತ ಮಹಿಳೆಯರಿಗೆ ಗೌರವವಾಗಿದೆ. ಅವರ ಸ್ಥಿತಿಸ್ಥಾಪಕತ್ವ ಮತ್ತು ಕೊಡುಗೆಗಳಿಂದ ಭಾರತವನ್ನು ಶ್ರೀಮಂತಗೊಳಿಸಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: China ; ಒಲಿಂಪಿಕ್ಸ್‌ ಗಿಂತಲೂ ಮಿಗಿಲಾದ ಬೃಹತ್‌ ಕ್ರೀಡೋತ್ಸವ

Advertisement

Udayavani is now on Telegram. Click here to join our channel and stay updated with the latest news.

Next