Advertisement

“ಆ”ಘಟನೆ ನಂತರ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗಿಲ್ಲ!

09:17 AM Jul 18, 2021 | Team Udayavani |
ಮುಂದಿನ ಸಿನಿಮಾದ ದಿನಾಂಕ ಮತ್ತು ಕಾಲ್ ಶೀಟ್ ಪಡೆಯುವ ಮಾತುಕತೆ ನಡೆಯುತ್ತಿದ್ದ ವೇಳೆ ಅಂದಿನ ಖ್ಯಾತ ವಿಲನ್ ನಟ ಎನ್ನಿಸಿಕೊಂಡಿದ್ದ ಎಂಆರ್ ದಿಢೀರನೆ ಎದ್ದುನಿಂತು ಎಂಜಿಆರ್ ಅವರತ್ತ ಎರಡು ಬಾರಿ ಗುಂಡು ಹೊಡೆದುಬಿಟ್ಟಿದ್ದರು! ಒಂದು ಕಿವಿ ಭಾಗಕ್ಕೆ, ಮತ್ತೊಂದು ಕುತ್ತಿಗೆಗೆ ಗುಂಡು ಹೊಕ್ಕು ಬಿಟ್ಟಿದ್ದವು. ಏನಾಗುತ್ತಿದೆ ಎಂದು ಎಂಜಿಆರ್ ಮತ್ತು ವಾಸು ಅವರು ನೋಡುವಷ್ಟರಲ್ಲಿಯೇ ಎಂಆರ್ ತನಗೆ ತಾನೇ ಗುಂಡು ಹೊಡೆದುಕೊಂಡು ಬಿಟ್ಟಿದ್ದರು! ಕೂಡಲೇ ಇಬ್ಬರನ್ನೂ ಚೆನ್ನೈಯ ಒಂದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಇಬ್ಬರನ್ನೂ ರಾಯಪೆಟ್ಟಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
Now pay only for what you want!
This is Premium Content
Click to unlock
Pay with

ಪುಟ್ಟ ಹುಡುಗ ರಾಜಗೋಪಾಲನ್ ಊಟ ಮಾಡುತ್ತಿದ್ದ ವೇಳೆ ತನಗೆ ಮತ್ತೊಂದು ತುಂಡು ಮೀನು ಬೇಕು ಎಂದು ಅಮ್ಮನ ಬಳಿ ಕೇಳಿದ್ದ..ಆದರೆ ತಾಯಿ ಇದ್ದಿದ್ದೆ ಇಷ್ಟು..ಮತ್ತೆ ಮೀನು ಬೇಕು ಎಂದರೆ ಎಲ್ಲಿಂದ ತರಲಿ ಎಂದು ದಬಾಯಿಸಿದ್ದರಂತೆ. ಈ ವಿಚಾರದಲ್ಲಿಯೇ ಅಮ್ಮನ ಜತೆ ಜಗಳವಾಡಿ ರಾಜಗೋಪಾಲನ್ ಮನೆ ತೊರೆದು ಹೊರಟು ಬಿಟ್ಟಿದ್ದ! ಚಿಕ್ಕ ವಯಸ್ಸಿನಲ್ಲಿ ಮನೆಬಿಟ್ಟ ರಾಜಗೋಪಾಲ ತನ್ನ 10ನೇ ವಯಸ್ಸಿಗೆ ನಾಟಕರಂಗದಲ್ಲಿ ಸಣ್ಣ, ಪುಟ್ಟ ಪಾತ್ರ ಮಾಡತೊಡಗಿದ್ದ. ನಂತರ ರಂಗಭೂಮಿಯಲ್ಲಿ ಎಂಆರ್ ಎಂದೇ ಹೆಸರು ಪಡೆದ ಈ ನಟ ಸುಮಾರು 5ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದರು. 1930ರಲ್ಲಿ ಸಿನಿಮಾರಂಗಕ್ಕೂ ಕಾಲಿಟ್ಟಿದ್ದರು.

Advertisement

1954ರ ರಕ್ತ ಕಣ್ಣೀರು ತಮಿಳು ಸಿನಿಮಾ ಅವರಿಗೆ ಅಪಾರ ಜನಪ್ರಿಯತೆ, ಆರ್ಥಿಕ ಬಲವನ್ನು ತಂದುಕೊಟ್ಟಿತ್ತು. ಹೀಗೆ 1978ರವರೆಗೆ ಎಂಆರ್ ವಿಲನ್ ಹಾಗೂ ಹಾಸ್ಯ ಪಾತ್ರದ ಬೇಡಿಕೆಯ ನಟ ಎನಿಸಿಕೊಂಡಿದ್ದರು.ರಕ್ತ ಕಣ್ಣೀರು ಸಿನಿಮಾವನ್ನು ವೀಕ್ಷಿಸದವರ ಸಂಖ್ಯೆ ಬಹಳ ವಿರಳ ಇರಬಹುದು. 2003ರಲ್ಲಿ ಸಾಧು ಕೋಕಿಲ ನಿರ್ದೇಶನದಲ್ಲಿ ತೆರೆಕಂಡಿದ್ದ ಚಿತ್ರದಲ್ಲಿ ಉಪ್ಪಿ ಹಾಗೂ ರಮ್ಯಾ ಕೃಷ್ಣ ಮುಖ್ಯಭೂಮಿಕೆಯಲ್ಲಿದ್ದರು. ಚಿತ್ರದ ಡೈಲಾಗ್ ಗಳು ಭರ್ಜರಿ ಫೇಮಸ್ ಆಗಿದ್ದವು. ಆದರೆ ಈ ರಕ್ತ ಕಣ್ಣೀರು ಸಿನಿಮಾ 1954ರಲ್ಲಿಯೇ ತಮಿಳು ಭಾಷೆಯಲ್ಲಿ ತೆರೆಕಂಡಿತ್ತು. ಎಂಆರ್ ರಾಧಾ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ 50ರ ದಶಕದಲ್ಲಿ ಎಂಆರ್ ಜನಪ್ರಿಯ ಹಾಸ್ಯ ನಟರಾಗಲು ಕಾರಣವಾಗಿತ್ತು. ಎಂಆರ್ ಅವರ ಅದ್ಭುತ ನಟನೆಯೇ ಹೇಗಿದೆ ಎಂಬುದಕ್ಕೆ ಆ ಸಿನಿಮಾವೇ ಸಾಕ್ಷಿಯಾಗಿದೆ….

ಮದ್ರಾಸ್ ರಾಜಗೋಪಾಲನ್ ರಾಧಾಕೃಷ್ಣನ್ ಎಂದು ಇವರ ಪೂರ್ಣ ಹೆಸರು. ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಇವರು ಎಂಆರ್ ರಾಧಾ ಎಂದೇ ಹೆಸರುವಾಸಿಯಾಗಿದ್ದರು. ಹೀಗೆ ರಂಗಭೂಮಿಯಿಂದ 1930ರ ಹೊತ್ತಿಗೆ ಸಿನಿಮಾಲೋಕಕ್ಕೆ ಎಂಆರ್ ಪ್ರವೇಶಿಸಿದ್ದರು.

ಪುಟ್ಟ ಹುಡುಗ ರಾಜಗೋಪಾಲನ್ ಊಟ ಮಾಡುತ್ತಿದ್ದ ವೇಳೆ ತನಗೆ ಮತ್ತೊಂದು ತುಂಡು ಮೀನು ಬೇಕು ಎಂದು ಅಮ್ಮನ ಬಳಿ ಕೇಳಿದ್ದ..ಆದರೆ ತಾಯಿ ಇದ್ದಿದ್ದೆ ಇಷ್ಟು..ಮತ್ತೆ ಮೀನು ಬೇಕು ಎಂದರೆ ಎಲ್ಲಿಂದ ತರಲಿ ಎಂದು ದಬಾಯಿಸಿದ್ದರಂತೆ. ಈ ವಿಚಾರದಲ್ಲಿಯೇ ಅಮ್ಮನ ಜತೆ ಜಗಳವಾಡಿ ರಾಜಗೋಪಾಲನ್ ಮನೆ ತೊರೆದು ಹೊರಟು ಬಿಟ್ಟಿದ್ದ! ಚಿಕ್ಕ ವಯಸ್ಸಿನಲ್ಲಿ ಮನೆಬಿಟ್ಟ ರಾಜಗೋಪಾಲ ತನ್ನ 10ನೇ ವಯಸ್ಸಿಗೆ ನಾಟಕರಂಗದಲ್ಲಿ ಸಣ್ಣ, ಪುಟ್ಟ ಪಾತ್ರ ಮಾಡತೊಡಗಿದ್ದ. ನಂತರ ರಂಗಭೂಮಿಯಲ್ಲಿ ಎಂಆರ್ ಎಂದೇ ಹೆಸರು ಪಡೆದ ಈ ನಟ ಸುಮಾರು 5ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದರು. 1930ರಲ್ಲಿ ಸಿನಿಮಾರಂಗಕ್ಕೂ ಕಾಲಿಟ್ಟಿದ್ದರು. 1954ರ ರಕ್ತ ಕಣ್ಣೀರು ತಮಿಳು ಸಿನಿಮಾ ಅವರಿಗೆ ಅಪಾರ ಜನಪ್ರಿಯತೆ, ಆರ್ಥಿಕ ಬಲವನ್ನು ತಂದುಕೊಟ್ಟಿತ್ತು. ಹೀಗೆ 1978ರವರೆಗೆ ಎಂಆರ್ ವಿಲನ್ ಹಾಗೂ ಹಾಸ್ಯ ಪಾತ್ರದ ಬೇಡಿಕೆಯ ನಟ ಎನಿಸಿಕೊಂಡಿದ್ದರು.

ನಿಜಕ್ಕೂ ನಡೆದಾದ್ದರೂ ಏನು?

Advertisement

1967ರ ಜನವರಿ 12ರಂದು ತಲೈವರ್ ಹೊಸ ಸಿನಿಮಾ ಥಾಯಿಕ್ಕೂ ಥಲೈಮಗನ್ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. 1966ರಲ್ಲಿ ಎಂಜಿಆರ್ ಹೀರೋ ಆಗಿ ನಟಿಸಿದ್ದ ಅನ್ಬೆ ವಾ ಸೇರಿದಂತೆ 9 ಚಿತ್ರಗಳು ಬಿಡುಗಡೆಯಾಗಿದ್ದವು.ಅದೂ ಸಾಲದೆಂಬಂತೆ 67ರ ಜನವರಿಯಲ್ಲಿ ತಮಿಳುನಾಡು ಪೊಂಗಲ್ ಸಂಭ್ರಮದಲ್ಲಿ ಇತ್ತು. ಫೆಬ್ರವರಿಯಲ್ಲಿ ವಿಧಾನಸಭಾ ಚುನಾವಣೆಯಾಗಿದ್ದರಿಂದ ಅದರ ಅಬ್ಬರವೂ ಜೋರಾಗಿಯೇ ನಡೆಯುತ್ತಿತ್ತಂತೆ! ಈ ಎಲ್ಲಾ ಸಂಭ್ರಮ, ಗೋಜಲು, ಜಟಾಪಟಿಯ ನಡುವೆಯೇ ಸೂಪರ್ ಸ್ಟಾರ್ ಎಂಜಿಆರ್ ಗೆ ನಟ ಎಂಆರ್ ರಾಧಾ ಗುಂಡು ಹೊಡೆದು ಬಿಟ್ಟಿದ್ದಾರೆ ಎಂಬ ಸುದ್ದಿ ಹರದಾಡತೊಡಗಿತ್ತು…ಈ ಸುದ್ದಿಯನ್ನು ಹಲವರು ನಂಬಲೂ ಕೂಡಾ ಸಿದ್ದರಿಲ್ಲವಾಗಿತ್ತು!

ಈ ಸುದ್ದಿ ತಿಳಿಯುತ್ತಿದ್ದಂತೆಯೇ ರಾಯಪೆಟ್ಟಾ ಆಸ್ಪತ್ರೆಯತ್ತ ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ರಸ್ತೆಗಳಲ್ಲಿ ಜನ ಬಿದ್ದು, ಬಿದ್ದು ಹೊರಳಾಡಿ ಅಳತೊಡಗಿದ್ದರು. ಅಂಗಡಿ, ಮುಂಗಟ್ಟು ಮುಚ್ಚಿಬಿಟ್ಟಿದ್ದರಂತೆ. ಎಂಜಿಆರ್ ಅಭಿಮಾನಿಗಳ ಕಲ್ಲುತೂರಾಟಕ್ಕೆ ನೂರಾರು ಜನರ ವಾಹನಗಳು ಜಖಂಗೊಂಡಿದ್ದವು..ಜೊತೆಗೆ ನಟ ಎಂಆರ್ ಮನೆಯನ್ನು ಧ್ವಂಸಮಾಡಿಬಿಟ್ಟಿದ್ದರು!

1967ರ ಜನವರಿ 12ರಂದೇ ಎಂಆರ್ ರಾಧಾ ಅವರು ನಿರ್ಮಾಪಕ ಕೆಎನ್ ವಾಸು ಅವರ ಜೊತೆ ಎಂಜಿಆರ್ ಮನೆಗೆ ತೆರಳಿದ್ದರು. ಮುಂದಿನ ಸಿನಿಮಾದ ದಿನಾಂಕ ಮತ್ತು ಕಾಲ್ ಶೀಟ್ ಪಡೆಯುವ ಮಾತುಕತೆ ನಡೆಯುತ್ತಿದ್ದ ವೇಳೆ ಅಂದಿನ ಖ್ಯಾತ ವಿಲನ್ ನಟ ಎನ್ನಿಸಿಕೊಂಡಿದ್ದ ಎಂಆರ್ ದಿಢೀರನೆ ಎದ್ದುನಿಂತು ಎಂಜಿಆರ್ ಅವರತ್ತ ಎರಡು ಬಾರಿ ಗುಂಡು ಹೊಡೆದುಬಿಟ್ಟಿದ್ದರು! ಒಂದು ಕಿವಿ ಭಾಗಕ್ಕೆ, ಮತ್ತೊಂದು ಕುತ್ತಿಗೆಗೆ ಗುಂಡು ಹೊಕ್ಕು ಬಿಟ್ಟಿದ್ದವು. ಏನಾಗುತ್ತಿದೆ ಎಂದು ಎಂಜಿಆರ್ ಮತ್ತು ವಾಸು ಅವರು ನೋಡುವಷ್ಟರಲ್ಲಿಯೇ ಎಂಆರ್ ತನಗೆ ತಾನೇ ಗುಂಡು ಹೊಡೆದುಕೊಂಡು ಬಿಟ್ಟಿದ್ದರು! ಕೂಡಲೇ ಇಬ್ಬರನ್ನೂ ಚೆನ್ನೈಯ ಒಂದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಇಬ್ಬರನ್ನೂ ರಾಯಪೆಟ್ಟಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೊರಬಂದಾಗ ಎಂಜಿಆರ್ ಗೆ ಆಶ್ಚರ್ಯವಾಗುವಂತಹ ಅಚ್ಚರಿಯ ಸುದ್ದಿಯೊಂದು ಕಾದು ಕುಳಿತಿತ್ತು! ಫೆಬ್ರುವರಿ 23ರಂದು ಘೋಷಿಸಿದ್ದ ಚುನಾವಣಾ ಫಲಿತಾಂಶದಲ್ಲಿ, ಯಾವುದೇ ಪ್ರಚಾರಕ್ಕೆ ಹೋಗದೆ ಸ್ಪರ್ಧಿಸಿದ್ದ ಎಂಜಿಆರ್ 27ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಆ ಟರ್ನಿಂಗ್ ಪಾಯಿಂಟ್ ಗೆ ಕಾರಣವಾಗಿದ್ದು ಎಂಆರ್ ಗುಂಡೇಟಿನ ಪ್ರಕರಣ!

ಎಂಆರ್ ಗುಂಡು ಹೊಡೆದ ಘಟನೆಯಿಂದಾಗಿ ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಎರಡು ಪ್ರಮುಖ ಘಟನೆ ನಡೆಯಲು ನಾಂದಿಯಾಗಿತ್ತು. ಅದು ಯಾವುದೆಂದರೆ ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ನಟರೊಬ್ಬರು(ಎಂಜಿಆರ್) ಮೊತ್ತ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಮತ್ತೊಂದು ಕಾಮರಾಜ್ ನೇತೃತ್ವದ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿ ಡಿಎಂಕೆ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿ, ಅಣ್ಣಾದೊರೈ ಮುಖ್ಯಮಂತ್ರಿ ಗದ್ದುಗೆ ಏರಿದ್ದು. ಎಂಜಿಆರ್ ಕೂಡಾ ಡಿಎಂಕೆ ಶಾಸಕರಾಗಿ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲ ಈ ಚುನಾವಣೆ ನಂತರ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗಿಲ್ಲ!

ಜೈಲುಪಾಲಾದ ಎಂಆರ್…

ಗುಂಡೇಟಿನ ಪ್ರಕರಣ ನಡೆದು ಆರು ವಾರಗಳ ಬಳಿಕ ಎಂಆರ್ ಮೇಲೆ ಹತ್ಯಾ ಪ್ರಯತ್ನ ನಡೆಸಿರುವುದಕ್ಕೆ ಮತ್ತು ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಕ್ಕೆ ಸೇರಿದಂತೆ ಎರಡು ಪ್ರಕರಣಗಳು ದಾಖಲಾಗಿದ್ದವು. ಚೆಂಗಲ್ ಪಟ್ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆದು 1967ರ ನವೆಂಬರ್ 4ರಂದು ಎಂಆರ್ ರಾಧಾಗೆ 7 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿರುವುದಾಗಿ ತೀರ್ಪು ನೀಡಿತ್ತು. ಆದರೆ ಮಾನವೀಯತೆ ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಶಿಕ್ಷೆಯನ್ನು 5 ವರ್ಷಕ್ಕೆ ಇಳಿಸಿ ಆದೇಶ ನೀಡಿತ್ತು.

ಜೈಲಿನಿಂದ ಬಿಡುಗಡೆಗೊಂಡ ನಂತರ 1979ರಲ್ಲಿ ಎಂಆರ್ ರಾಧಾ ಇಹಲೋಕ ತ್ಯಜಿಸಿದ್ದರು. ಆಗ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು ಎಂಜಿಆರ್! ಖ್ಯಾತ ನಟ ಎಂಆರ್ ಗೆ ಸರ್ಕಾರಿ ಗೌರವ ನೀಡಿ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ಕೊಡಬೇಕೆಂದು ಎಂಜಿಆರ್ ಮಾಡಿಕೊಂಡ ಮನವಿಯನ್ನು ರಾಧಾ ಕುಟುಂಬ ವರ್ಗ ತಿರಸ್ಕರಿಸಿತ್ತು. ಎಂಆರ್ ಅವರ ಪಾರ್ಥಿವ ಶರೀರ ಮೆರವಣಿಗೆಯಲ್ಲಿ ಆ ಕಾಲಕ್ಕೆ ಲಕ್ಷಾಂತರ ಮಂದಿ ಸೇರಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಆದರೂ ಕೂಡಾ ಅಂದು ನಟ ಎಂಆರ್ ರಾಧಾ ಅವರು ಎಂಜಿಆರ್ ಮೇಲೆ ಯಾವ ಕಾರಣಕ್ಕೆ ಗುಂಡು ಹೊಡೆದರು ಎಂಬುದು ಇಂದಿಗೂ ನಿಗೂಢವಾಗಿ ಉಳಿದಿದೆ!

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.