Advertisement

UK: ಬೋರಿಸ್‌ ರಾಜೀನಾಮೆ ಬಳಿಕ ಸುನಕ್‌ಗೆ ಹೊಸ ಸವಾಲು

08:31 PM Jun 11, 2023 | Team Udayavani |

ಲಂಡನ್‌: ಪಾರ್ಟಿಗೇಟ್‌ ಹಗರಣದ ಕೇಂದ್ರಬಿಂದುವಾಗಿದ್ದ ಯುಕೆ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಪ್ರಧಾನಮಂತ್ರಿ ರಿಷಿ ಸುನಕ್‌ ಅವರಿಗೆ ಹೊಸ ಸವಾಲು ಎದುರಾಗಿದೆ.

Advertisement

ಬೋರಿಸ್‌ ಅವರೊಂದಿಗೆ ಇನ್ನಿಬ್ಬರು ಸಂಸದರು ಕೂಡ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಕೂಡಲೇ ಒಟ್ಟು 3 ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಬೇಕಿದೆ.

ಈಗಾಗಲೇ ಕನ್ಸರ್ವೇಟಿವ್‌ ಪಕ್ಷದ ಬಗ್ಗೆ ಬ್ರಿಟನ್‌ ಜನರಲ್ಲಿ ಅಸಮಾಧಾನ ಎದ್ದಿದೆ. ಹೀಗಿರುವಾಗ ಉಪಚುನಾವಣೆಗಳಲ್ಲಿ ಮೂರೂ ಸೀಟುಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಪ್ರಧಾನಿ ಸುನಕ್‌ಗೆ ಎದುರಾಗಿದೆ. ಈ ಪೈಕಿ ಅಕ್ಸ್‌ಬ್ರಿಡ್ಜ್ ಮತ್ತು ಸೌತ್‌ ರೂಸ್ಲಿಪ್‌ನಲ್ಲಿ 2019ರಲ್ಲಿ ಅತಿ ಕಡಿಮೆ ಅಂತರದಿಂದ ಕನ್ಸರ್ವೇಟಿವ್‌ ಪಕ್ಷ ಗೆಲುವು ಸಾಧಿಸಿತ್ತು. ಈ ಬಾರಿಯ ಉಪಚುನಾವಣೆಯಲ್ಲಿ ಲೇಬರ್‌ ಪಕ್ಷವನ್ನು ಸೋಲಿಸಿ, ಕನ್ಸರ್ವೇಟಿವ್‌ ಪಕ್ಷದ ಅಭ್ಯರ್ಥಿಗಳಿಗೆ ಗೆಲುವು ಸಿಗುವಂತೆ ಮಾಡುವ ಮೂಲಕ ತಮ್ಮ ಪ್ರಭಾವವನ್ನು ಸುನಕ್‌ ತೋರಿಸಬೇಕಾಗುತ್ತದೆ. 2025ರ ಜನವರಿಯಲ್ಲಿ ಯುಕೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next