Advertisement

Haryana-JK Election: ಎರಡೂ ರಾಜ್ಯಗಳಲ್ಲಿ ಎಕ್ಸಿಟ್‌ ಪೋಲ್‌ ಫೇಲ್‌!

11:01 PM Oct 08, 2024 | Team Udayavani |

ಹೊಸದಿಲ್ಲಿ: ಹರ್ಯಾಣ ಹಾಗೂ ಜಮ್ಮು- ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಸಮೀಕ್ಷೆಗಳು ಮತ್ತೂಮ್ಮೆ ವೈಫ‌ಲ್ಯ ಕಂಡಿವೆ. ಹರ್ಯಾಣದಲ್ಲಿ ಕಾಂಗ್ರೆಸ್‌ ಪೂರ್ಣ ಬಹುಮತದೊಂದಿಗೆ ಜಯಭೇರಿ ಬಾರಿಸುವುದಾಗಿ ಮತಗಟ್ಟೆ ಸಮೀಕ್ಷೆಗಳು ಷರಾ ಬರೆದಿದ್ದರೂ ಮತದಾರ ವ್ಯತಿರಿಕ್ತ ಫ‌ಲಿತಾಂಶ ನೀಡಿದ್ದು, ಬಿಜೆಪಿ ಪೂರ್ಣ ಬಹುಮತದೊಂದಿಗೆ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು 2 ಸಮೀಕ್ಷೆಗಳು ಹೇಳಿದ್ದರೂ, ಅಲ್ಲೀಗ ಕಾಂಗ್ರೆಸ್‌ ಮೈತ್ರಿಕೂಟ ಆಡಳಿತ ಚುಕ್ಕಾಣಿ ಹಿಡಿಯಲಿದೆ.

Advertisement

ಈ ಮೊದಲು ಲೋಕಸಭಾ ಚುನಾವಣೆ ವೇಳೆಯೂ ಮತಗಟ್ಟೆ ಸಮೀಕ್ಷೆಗಳು ಉಲ್ಟಾ ಆಗಿದ್ದವು. ಆಗ ಎನ್‌ಡಿಎ ಮೈತ್ರಿಕೂಟಕ್ಕೆ 543 ಸೀಟುಗಳಲ್ಲಿ 350 ಸೀಟುಗಳು ಒಲಿಯಲಿವೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ಬಂದಿದ್ದು 240 ಸೀಟುಗಳು. ಇದೀಗ ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಮತ್ತೂಮ್ಮೆ ಪುನರಾವರ್ತನೆಯಾಗಿದೆ.

ಬಹುತೇಕ ಸಮೀಕ್ಷೆಗಳು ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಸುಮಾರು 54, ಬಿಜೆಪಿಗೆ 26 ಸೀಟುಗಳು ಬರಲಿವೆ ಎಂದು ವರದಿ ಮಾಡಿದ್ದವು. ಆದರೆ, ಈಗ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟ ಜಯ ಸಾಧಿಸುವುದಾಗಿ 3 ಸಮೀಕ್ಷೆಗಳು ಹೇಳಿದ್ದು ನಿಜವಾಗಿದೆ. ಉಳಿದೆರಡು ಸಮೀಕ್ಷೆ ಸೋತಿವೆ.

Advertisement

Udayavani is now on Telegram. Click here to join our channel and stay updated with the latest news.

Next