Advertisement

ಹಲ್ಲು ತೆಗೆಸಿದ ಅನಂತರ…

10:57 PM Apr 08, 2019 | Team Udayavani |

ದಂತ ವೈದ್ಯರಲ್ಲಿಗೆ ಹೋಗಿ ಹಲ್ಲು ತೆಗೆಸಿದ ಅನಂತರ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದಂತ ವೈದ್ಯರು ಹಲ್ಲು ತೆಗೆದ ಅನಂತರ ಆ ಜಾಗದಲ್ಲಿ ಹತ್ತಿಯನ್ನು ಅರ್ಧಗಂಟೆ ಗಟ್ಟಿಯಾಗಿ ಕಚ್ಚಿ ಹಿಡಿಯಬೇಕು. ಇದರಿಂದ ರಕ್ತಸ್ರಾವ ನಿಲ್ಲುತ್ತದೆ.

Advertisement

ಹಲ್ಲು ಕಿತ್ತ ದಿನ ತುಂಬಾ ಬಿಸಿ ಅಥವಾ ಗಟ್ಟಿಯಾದ ಆಹಾರವನ್ನು ವರ್ಜಿಸಬೇಕು. ಆ ಜಾಗದಲ್ಲಿ ಗಟ್ಟಿಯಾಗಿ ಬ್ರೆಶ್‌ ಮಾಡಬಾರದು. ಪದೇ ಪದೇ ನಾಲಗೆಯಿಂದ ಆ ಜಾಗವನ್ನು ಮುಟ್ಟುತ್ತ ಇರಬಾರದು. ವೈದ್ಯರು ನೀಡಿದ ಔಷಧವನ್ನು ಸರಿಯಾಗಿ ಸೇವಿಸಬೇಕು. ಅದಷ್ಟು ಕಾಫಿ, ಟೀ ಸೇವನೆ, ತಂಬಾಕಿನಂತಹ ದುಶ್ಚಟಗಳನ್ನು ವರ್ಜಿಸಬೇಕು. ಸ್ವಲ್ಪ ದಿನ ಸ್ಟ್ರಾ ಉಪಯೋಗಿಸಬಾರದು. ಯಾಕೆಂದರೆ ರಕ್ತ ಹೆಪ್ಪುಗಟ್ಟಿದ ಜಾಗದಲ್ಲಿ ಪುನಃ ರಕ್ತಸ್ರಾಮವಾಗುವ ಸಾಧ್ಯತೆ ಇವೆ.

ಹಲ್ಲು ತೆಗೆಸಿದ ದಿನ ಉಪ್ಪು ನೀರಿನಲ್ಲಿ ಬಾಯಿಯನ್ನು ಮುಕ್ಕಳಿಸುಬೇಕು. ನೋವು ಜಾಸ್ತಿ ಆದರೆ ರಕ್ತಸ್ರಾವ ನಿಲ್ಲದಿದ್ದರೆ ಅಥವಾ ಜ್ವರ ಮತ್ತು ಇನ್ನಿತರ ತೊಂದರೆಗಳು ಕಾಣಿಸಿಕೊಂಡಲ್ಲಿ ವೈದ್ಯರ ಭೇಟಿ ಅಗತ್ಯ.

ಕೆಲವರಲ್ಲಿ ಹಲ್ಲು ತೆಗೆಸಿದ 3-4 ದಿನಗಳ ಅನಂತರ ಆ ಜಾಗದಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಡ್ರೈ ಸಾಕೆಟ್‌ ಎಂದು ಕರೆಯಲಾಗುತ್ತದೆ.
“ಡ್ರೈ ಸಾಕೆಟ್‌’ನ ಕಾರಣಗಳು
· ಹಲ್ಲು ತೆಗೆಸಿದ ಅನಂತರ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿದ್ದರೆ
· ತಂಬಾಕು ಮತ್ತು ಮಧ್ಯಪಾನ ಸೇವನೆ
· ಸರಿಯಾದ ಶುಚಿತ್ವ ಇಲ್ಲದಿದ್ದಲ್ಲಿ
· ಇನ್‌ಫೆಕ್ಷನ್‌ಗಳು
ಡ್ರೈ ಸಾಕೆಟ್‌ ಲಕ್ಷಣಗಳು
· ಹಲ್ಲು ತೆಗೆದ ಜಾಗದಲ್ಲಿ ಅತಿಯಾದ ನೋವು
· ನೋವು ಕಿವಿಗೆ ಕೂಡ ಹರಡಬಹುದು
· ಬಾಯಿಯ ದುರ್ವಾಸನೆ
ಹಲ್ಲುಗಳನ್ನು ನಾವು ಯಾವ ರೀತಿಯಿಂದ ಜೋಪಾನವಾಗಿಡಬೇಕೋ ಹಾಗೇ ಹಲ್ಲು ತೆಗೆದ ಮೇಲೂ ವಸಡನ್ನು ವೈದ್ಯರ ಸಲಹೆಯಂತೆ ಪಾಲಿಸಬೇಕು. ನಿರ್ಲಕ್ಷಿಸಿದಲ್ಲಿ ನಾವು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

–    ಡಾ| ರಶ್ಮಿ ಭಟ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next