Advertisement

ಎಸ್‌ಎಸ್‌ಎಲ್‌ಸಿ ಬಳಿಕ?

06:00 AM Jun 15, 2018 | Team Udayavani |

ಎಸ್‌ಎಸ್‌ಎಲ್‌ಸಿ ಮುಗಿದಾಯಿತು. ಇನ್ನೇನಿದ್ದರೂ ಕಾಲೇಜು. ಈಗಂತೂ ತಮ್ಮ ಸ್ನೇಹಿತರು ಯಾವ ಕಾಲೇಜಿಗೆ ಸೇರುತ್ತಾರೊ ಅದೇ ಕಾಲೇಜಿಗೆ ಸೇರುವುದು ರೂಢಿಯಾಗಿ ಬಿಟ್ಟಿದೆ. ಆದರೆ, ಯಾವ ವಿಭಾಗಕ್ಕೆ ಹೋಗೋದು ಎಂಬ ಪ್ರಶ್ನೆ ಎಲ್ಲರಲ್ಲಿಯೂ. ವಿಜ್ಞಾನವೇ, ವಾಣಿಜ್ಯವೇ ಅಥವಾ ಕಲಾ ವಿಭಾಗವೇ ಎಂದು. ಪರೀಕ್ಷೆ ಮುಗಿದ ಆ ಎರಡು ತಿಂಗಳನ್ನು “ಕನ್‌ಫ್ಯೂಶನ್‌ ಮಂತ್‌’ ಎಂದೇ ಹೇಳಬಹುದು. ವಿಜ್ಞಾನವನ್ನೇ ಆರಿಸುತ್ತೇನೆ ಎಂದು ನಿರ್ಧರಿಸಿದ್ದ ನನಗೆ ಕೆಲವರು, “”ವಾಣಿಜ್ಯದಲ್ಲಿ ಒಳ್ಳೆ ಸ್ಕೋಪ್‌ ಇದೆ” ಎಂದಾಗ ಮನಸ್ಸು ಬದಲಾಗುತ್ತಿತ್ತು. ಇನ್ನು ಕೆಲವರು ಕಲಾ ವಿಭಾಗದಲ್ಲಿರುವ ಆಯ್ಕೆಗಳ ಬಗ್ಗೆ ವಿವರಿಸಿದಾಗ ಅದರ ಕಡೆಯೂ ಆಸಕ್ತಿ ಮೂಡಿದ್ದುಂಟು.

Advertisement

ಕೆಲವರು ಎಸ್‌ಎಸ್‌ಎಲ್‌ಸಿ ತನಕ ಡಾಕ್ಟರ್‌ ಆಗಬೇಕು ಅನ್ನುತ್ತಿದ್ದವರು ಜೀವಶಾಸ್ತ್ರವೇ ಬೇಡ ಎಂದದ್ದೂ ಇದೆ. ಹಾಗೆಯೇ ಇಂಜಿನಿಯರಿಂಗ್‌ ಕನಸನ್ನು ಬಿಟ್ಟು ಡಾಕ್ಟರ್‌ ಆಗಬೇಕೆಂಬ ಕನಸು ಕಂಡದ್ದೂ ಇದೆ. ಒಂದು ವೇಳೆ ನಿಮ್ಮ ಅಕ್ಕ ಅಧ್ಯಾಪಕರಾದರೆ, “ಟೀಚಿಂಗ್‌ ಪ್ರೊಫೆಶನ್‌ ಬೆಸ್ಟ್‌’ ಎಂದು, ಅಥವಾ ನಿಮ್ಮ ಮಾವ ಸಿ.ಎ. ಆದರೆ  “ಈಗ ಕಾಮರ್ಸ್‌ಗೆ ತುಂಬಾ ಡಿಮ್ಯಾಂಡ್‌ ಇರೋದು’ ಎನ್ನುವರು. ಕೆಲವರು “ನಿಮ್ಮ ಮಗಳನ್ನು ಡಾಕ್ಟರ್‌ ಮಾಡ್ಸಿ’ ಎಂದರೆ, ಕೆಲವರು “ವಿಜ್ಞಾನ ತುಂಬಾ ಕಷ್ಟವಾಗುತ್ತದೆ’ ಎಂದು ನನ್ನ ಅಮ್ಮನ ಬಳಿ ಹೇಳಿದರು. ಹೀಗೆ ಎರಡು ತಿಂಗಳು ಅವರಿವರ ಮಾತು ಕೇಳಿ, ಮನಸ್ಸು ಚಕ್ರದಂತೆ ಒಂದು ಸುತ್ತು ತಿರುಗಿದರೂ ಕೊನೆಗೆ ವಿಜ್ಞಾನವನ್ನೇ ಆರಿಸುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬಂದೆ.

ನಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನೇ ಆರಿಸುವುದು ಸೂಕ್ತ. ಆದರೆ ಒಂದನ್ನು ಆರಿಸಿದ ನಂತರ ಪಶ್ಚಾತ್ತಾಪ ಪಟ್ಟರೆ ಅದರಿಂದ ಯಾವುದೇ ಪ್ರಯೋಜನವಿಲ್ಲ.
 
ಖುಷಿ, ಪ್ರಥಮ ಪಿಯುಸಿ, ಗೋವಿಂದದಾಸ ಪಿಯು ಕಾಲೇಜು, ಸುರತ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next