ಹೊಸದಿಲ್ಲಿ : ಗುರ್ಗಾಂವ್ನ ರಯಾನ್ ಇಂಟರ್ನ್ಯಾಶನಲ್ ಸ್ಕೂಲ್ನ ವಿದ್ಯಾರ್ಥಿಯ ಅಮಾನುಷ ಕೊಲೆ ಪ್ರಕರಣ ಇನ್ನೂ ಜನಮನದಲ್ಲಿ ಭೀತಿಯ ಛಾಯೆಯನ್ನು ಉಳಿಸಿರುವಂತೆಯೇ ಇದೀಗ ರಾಷ್ಟ್ರ ರಾಜಧಾನಿಯ ಇನ್ನೊಂದು ಪಬ್ಲಿಕ್ ಸ್ಕೂಲ್ನಲ್ಲಿ ಶಾಲಾ ಸಿಬಂದಿಯೇ ಒಂದನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ವರದಿಯಾಗಿದೆ.
ದಿಲ್ಲಿಯ ಮಾಳವೀಯ ನಗರದ ಸಂತ ನಿರಂಕಾರಿ ಪಬ್ಲಿಕ್ ಸ್ಕೂಲ್ನ ಹೌಸ್ಕೀಪಿಂಗ್ ಸಿಬಂದಿ, ವಿಕೃತ ಕಾಮಿ ರಾಕೇಶ್ ಎನ್ನುವಾತ ಒಂದನೇ ತರಗತಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ.
ಒಂದನೇ ತರಗತಿಯ ಬಾಲಕಿಯು ಶೌಚಾಲಯಕ್ಕೆ ಹೋಗಿದ್ದಾಗ ನೆರವಿಗಾಗಿ ಮಹಿಳಾ ಸಿಬಂದಿಯನ್ನು ಕೂಗಿಕೊಂಡಿದ್ದಳು. ಆ ಸಮಯದಲ್ಲಿ ಸ್ಥಳದಲ್ಲಿ ಮಹಿಳಾ ಸಿಬಂದಿ ಅಲ್ಲಿ ಇರಲಿಲ್ಲ. ಆದರೆ ಬಾಲಕಿಯ ಕರೆಯನ್ನು ಕೇಳಿಸಿಕೊಂಡ ರಾಕೇಶ್, ಶೌಚಾಲಯದೊಳಗೆ ಹೋಗಿ ಬಾಲಕಿಗೆ ನೆರವಾಗುವ ನೆಪದಲ್ಲಿ ಆಕೆಯ ಗುಪ್ತಾಂಗದ ಮೇಲೆ ಕೈಯಾಡಿಸುವ ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ರಾಕೇಶ್ ಎಸಗಿದ ಲೈಂಗಿಕ ದೌರ್ಜನ್ಯದಿಂದ ಕಂಗೆಟ್ಟಿದ್ದ ಬಾಲಕಿ ಮನೆಗೆ ಮರಳಿದೊಡನೆಯೇ ತನ್ನ ಹೆತ್ತವರಲ್ಲಿ ನಡೆದ ಸಂಗತಿಯನ್ನು ತಿಳಿಸಿದಾಗಲೇ ವಿಷಯ ಬೆಳಕಿಗೆ ಬಂದಿತ್ತು.
ಆರೋಪಿ ವಿಕೃತ ಕಾಮಿ ರಾಕೇಶ್ನನ್ನು ಪೊಲೀಸರು ಬಂಧಿಸಿದ್ದು ಆತನನ್ನು ನ್ಯಾಯಾಲಯವು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.