Advertisement
ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್ ನ ಭಾರತೀಯ ಸೇನಾ ಕ್ಯಾಂಪ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅಸುನೀಗಿದ್ದರು. ಅಗ್ನಿ ಕೆನ್ನಾಲಿಗೆಯಿಂದ ಇತರರನ್ನು ರಕ್ಷಿಸುವ ವೇಳೆ ಅಂಶುಮನ್ ಸಿಂಗ್ ಹುತಾತ್ಮರಾಗಿದ್ದರು. ಕೆಲ ದಿನಗಳ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೀರ್ತಿ ಚಕ್ರ ಪ್ರಶಸ್ತಿ ನೀಡಿ ಮರಣೋತ್ತರ ಗೌರವ ನೀಡಿದ್ದರು.
Related Articles
Advertisement
ಅಂಶುಮಾನ್ ಅವರಿಗೆ ಕೀರ್ತಿ ಚಕ್ರ ನೀಡಿದಾಗ, ಆತನ ತಾಯಿ ಮತ್ತು ಸ್ಮೃತಿ ಗೌರವ ಸ್ವೀಕರಿಸಲು ತೆರಳಿದ್ದರು. ರಾಷ್ಟ್ರಪತಿಗಳು ನನ್ನ ಮಗನ ತ್ಯಾಗಕ್ಕೆ ಕೀರ್ತಿ ಚಕ್ರ ನೀಡಿ ಗೌರವಿಸಿದರು, ಆದರೆ ನನಗೆ ಅದನ್ನು ಒಮ್ಮೆಯೂ ಮುಟ್ಟಲು ಸಾಧ್ಯವಾಗಲಿಲ್ಲ ಎಂದು ರವಿ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ನೆನಪಿಸಿಕೊಂಡ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಾಯಿ ಮಂಜು, “ಜುಲೈ 5 ರಂದು ರಾಷ್ಟ್ರಪತಿ ಭವನದಲ್ಲಿ ಸ್ಮೃತಿ ಅವರೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದೆವು, ನಾವು ಕಾರ್ಯಕ್ರಮದಿಂದ ಹೊರಡುವಾಗ, ಸೇನಾಧಿಕಾರಿಗಳ ಹೇಳಿಕೆಯ ಮೇರೆಗೆ ನಾನು ಫೋಟೋಗಾಗಿ ಕೀರ್ತಿ ಚಕ್ರವನ್ನು ಹಿಡಿದಿದ್ದೇನೆ. ಆದರೆ ಅದರ ನಂತರ, ಸ್ಮೃತಿ ನನ್ನ ಕೈಯಿಂದ ಕೀರ್ತಿ ಚಕ್ರವನ್ನು ತೆಗೆದುಕೊಂಡಳು” ಎಂದು ಆರೋಪಿಸಿದರು.