Advertisement

ರಫೇಲ್‌ ಪ್ರಕಟನೆ ಬಳಿಕ ಅನಿಲ್‌ ಅಂಬಾನಿ ಕಂಪೆನಿಗೆ 143.7 ಮಿ. ಯೂರೋ ತೆರಿಗೆ ಮಾಫಿ ?

09:24 AM Apr 14, 2019 | Team Udayavani |

ಹೊಸದಿಲ್ಲಿ : ಭಾರತ 36 ರಫೇಲ್‌ ಜೆಟ್‌ ವಿಮಾನ ಖರೀದಿ ಪ್ರಕಟನೆ ಮಾಡಿದ ಬಳಿಕ ಅನಿಲ್‌ ಅಂಬಾನಿ ಅವರ ರಿಲಯನ್ಸ್‌ ಕಮ್ಯುನಿಕೇಶನ್‌ ನ ಫ್ರೆಂಚ್‌ ನೋಂದಾಯಿತ ಟೆಲಿಕಾಮ್‌ ಉಪ ಸಂಸ್ಥೆಗೆ ಫ್ರಾನ್ಸ್‌ 143.7 ದಶಲಕ್ಷ ಯೂರೋ ತೆರಿಗೆ ಮೊತ್ತವನ್ನು ಮಾಫಿ ಮಾಡಿತು ಎಂದು ಪ್ರಮುಖ ಫ್ರೆಂಚ್‌ ದೈನಿಕ ಲೀ ಮಾಂಡ್‌ ಇಂದು ಶುಕ್ರವಾರ ವರದಿ ಮಾಡಿದೆ.

Advertisement

ಇದಕ್ಕೆ ಪ್ರತಿಕ್ರಿಯೆಯಾಗಿ ರಿಲಯನ್ಸ್‌ ಕಮ್ಯುನಿಕೇಶನ್‌ “ನಾವೇನೂ ತಪ್ಪು ಮಾಡಿಲ್ಲ; ಕಾನೂನಿನ ಚೌಕಟ್ಟಿನಲ್ಲೇ ನಮ್ಮ ತೆರಿಗೆ ವಿವಾದವನ್ನು ಇತ್ಯರ್ಥ ಪಡಿಸಲಾಗಿದೆ ಮತ್ತು ಫ್ರಾನ್ಸ್‌ನಲ್ಲಿ ಕಾರ್ಯಚರಿಸುತ್ತಿರುವ ಎಲ್ಲ ಕಂಪೆನಿಗಳಿಗೂ ಈ ಸವಲತ್ತು ಸಿಗುತ್ತಿದೆ’ ಎಂದು ಹೇಳಿದೆ.

ಫ್ರೆಂಚ್‌ ವಾರ್ತಾಪತ್ರಿಕೆಯ ವರದಿ ಪ್ರಕಾರ ಫ್ರೆಂಚ್‌ ತೆರಿಗೆ ಸಂಸ್ಥೆ ರಿಲಯನ್ಸ್‌ ಫ್ಲ್ಯಾಗ್‌ ಅಟ್ಲಾಂಟಿಕ್‌ ಫ್ರಾನ್ಸ್‌ ಕಂಪೆನಿಯಿಂದ 151 ದಶಲಕ್ತ ಯೂರೋ ಪಾವತಿಯನ್ನು ಕೇಳಿತ್ತು. ಅಂತಿಮವಾಗಿ ಈ ತೆರಿಗೆ ವಿವಾದ ಇತ್ಯರ್ಥಗೊಳ್ಳುವಲ್ಲಿ ಅದು 7.3 ದಶಲಕ್ಷ ಯೂರೋ ಸ್ವೀಕರಿಸಿತು. ರಿಲಯನ್ಸ್‌ ಫ್ಯಾಗ್‌ ಸಂಸ್ಥೆ ಫ್ರಾನ್ಸ್‌ನಲ್ಲಿ ಟೆರೆಸ್ಟ್ರಿಯಲ್‌ ಕೇಬಲ್‌ ನೆಟ್‌ ವರ್ಕ್‌ ಮತ್ತು ಇತರ ಟೆಲಿಕಾಂ ಮೂಲ ಸೌಕರ್ಯಗಳ ಒಡೆತನವನ್ನು ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಿನ ಫ್ರೆಂಚ್‌ ಅಧ್ಯಕ್ಷ ಫ್ರಾನ್ಸ್‌ವಾ ಹೊಲಾಂಡ್‌ ಅವರೊಂದಿಗೆ 2015ರ ಎಪ್ರಿಲ್‌ 10ರಂದು ಪ್ಯಾರಿಸ್‌ನಲ್ಲಿ ಮಾತುಕತೆ ನಡೆಸಿದ ಬಳಿಕ 36 ರಫೇಲ್‌ ಫೈಟರ್‌ ಜೆಟ್‌ಗಳ ಖರೀದಿ ವ್ಯವಹಾರವನ್ನು ಪ್ರಕಟಿಸಿದ್ದರು. ಈ ವಹಿವಾಟು 2016ರ ಸೆ.23ರಂದು ಅಂತಿಮಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next