Advertisement

ಸುಪಾರಿ ನೀಡಿದವರು ಯಾರು? ಕಾನೂನು ಕ್ರಮ ಜರುಗಿಸೋಣ: ಪ್ರಧಾನಿಗೆ ಸಿಬಲ್ ಒತ್ತಾಯ

02:54 PM Apr 02, 2023 | Vishnudas Patil |

ನವದೆಹಲಿ: ”ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಕೆಲವರು ಸುಪಾರಿ ನೀಡಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಒಂದು ದಿನದ ನಂತರ, ಭಾನುವಾರ ರಾಜ್ಯಸಭಾ ಸಂಸದ, ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ”ಸುಪಾರಿ ನೀಡಿದವರು ಯಾರು, ನಾವು ಅವರನ್ನು ವಿಚಾರಣೆಗೆ ಒಳಪಡಿಸೋಣ” ಎಂದು ಹೇಳಿದ್ದಾರೆ.

Advertisement

ಭೋಪಾಲ್‌ನ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕೆಲವರು ದೇಶದಲ್ಲಿ ಮತ್ತು ದೇಶದ ಹೊರಗೆ ಕುಳಿತು. ತಮ್ಮ ಪ್ರತಿಷ್ಠೆಯನ್ನು ಹಾಳುಮಾಡಲು ಕೆಲವು ಜನರೊಂದಿಗೆ ಶಾಮೀಲಾಗಿ ಸುಪಾರಿ ನೀಡಿದ್ದಾರೆ ಎಂದು ಹೇಳಿದ್ದರು.

“ಮೋದಿ ಜಿಯವರ ಆರೋಪದಂತೆ..  ಅವರ ಸಮಾಧಿಯನ್ನು ಅಗೆಯಲು.. ಜನರು… ಕೆಲವರು ದೇಶದೊಳಗೆ ಮತ್ತು ದೇಶದ ಹೊರಗೆ.. ದಯವಿಟ್ಟು ಇವರುಗಳ ಹೆಸರುಗಳನ್ನು ನಮಗೆ ತಿಳಿಸಿ, ವ್ಯಕ್ತಿಗಳೋ, ಸಂಸ್ಥೆಗಳು ಅಥವಾ ದೇಶಗಳೋ.ಇದು ದೇಶದ ರಹಸ್ಯವಾಗಿರಲು ಸಾಧ್ಯವಿಲ್ಲ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸೋಣ” ಎಂದು ಸಿಬಲ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next