Advertisement

ಮೈಸೂರು ಮೂಲದ ಉದ್ಯಮಿ ಆದಿಲ್‌ ಜೊತೆ ನಟಿ ರಾಖಿ ಸಾವಂತ್‌ ರಹಸ್ಯ ಮದುವೆ? ಫೋಟೋ ವೈರಲ್

04:34 PM Jan 11, 2023 | Team Udayavani |

ಮುಂಬಯಿ: ಬಾಲಿವುಡ್‌ ಹಾಟ್‌ ಬೆಡಗಿ ರಾಖಿ ಸಾವಂತ್‌ ರಹಸ್ಯವಾಗಿ ತನ್ನ ಬಾಯ್‌ ಫ್ರೆಂಡ್‌ ರನ್ನು ಮದುವೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ರಿತೇಶ್ ರಾಜ್ ರೊಂದಿಗೆ ಮೊದಲು ಮದುವೆಯಾಗಿದ್ದ ರಾಖಿ ಸಾವಂತ್‌ ಆ ಬಳಿಕ ಅವರಿಗೆ ಡೈವೋರ್ಸ್‌ ಕೊಟ್ಟು, ಮೈಸೂರು ಮೂಲದ ಉದ್ಯಮಿ ಆದಿಲ್ ದುರಾನಿ ಅವರೊಂದಿಗೆ ಕಾಣಿಸಿಕೊಂಡಿದ್ದರು. ಬಿಗ್‌ ಬಾಸ್‌ ಕಾರ್ಯಕ್ರಮದ ಬಳಿಕ ರಾಖಿ ಸಾವಂತ್‌ ಆದಿಲ್ ದುರಾನಿ ಅವರೊಂದಿಗೆ ಹಲವು ಸಮಯದಿಂದ ಡೇಟಿಂಗ್‌ ನಲ್ಲಿದ್ದರು. ಸಾಮಾಜಿಕ ಜಾಲತಾಣದಲ್ಲಿ ರಾಖಿ ಸಾವಂತ್‌ ಆದಿಲ್ ದುರಾನಿ ಅವರನ್ನು ಮದುವೆಯಾಗಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ರಹಸ್ಯವಾಗಿ ರಿಜಿಸ್ಟರ್‌ ಮ್ಯಾರೇಜ್‌ ಆಗಿರುವ ಫೋಟೋ ಹೊರಬಿದ್ದಿದ್ದು,ಪರಸ್ಪರ ಹೂಮಾಲೆ ಧರಿಸಿಕೊಂಡು ಕೋರ್ಟ್‌ ಮ್ಯಾರೇಜ್‌ ಆಗಿದ್ದಾರೆ. ಫೋಟೋದಲ್ಲಿ ಇಬ್ಬರು ಮದುವೆಗೆ ಒಪ್ಪಿ ಸಹಿ ಮಾಡುತ್ತಿರುವುದನ್ನು ಕೂಡ ಕಾಣಬಹುದು.

ಡಿಸೆಂಬರ್‌ ಕೊನೆಯಲ್ಲಿ ಈ ಮದುವೆ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.

ಫೋಟೋಗಳು ವೈರಲ್‌ ಆದ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಆದಿಲ್ ದುರಾನಿ ಈ ವಿಷಯವನ್ನು ಅಲ್ಲಗೆಳೆದಿದ್ದು, ತಾನೂ ರಾಖಿಯೊಂದಿಗೆ ಮದುವೆಯಾಗಿಲ್ಲ ಎಂದಿದ್ದಾರೆ.

Advertisement

ಇಬ್ಬರಿಂದಲೂ ಅಧಿಕೃತವಾಗಿ ಈ ಬಗ್ಗೆ ಯಾವ ಮಾಹಿತಿಯೂ ತಿಳಿದು ಬಂದಿಲ್ಲ. ಸದ್ಯ ರಾಖಿ ಅವರ ತಾಯಿ ಬ್ರೈನ್‌ ಟ್ಯೂಮರ್‌ ಹಾಗೂ ಕ್ಯಾನ್ಸರ್‌ ನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗಾಗಿ ಪ್ರಾರ್ಥಿಸಿ ಎಂದು ರಾಖಿ ಅಭಿಮಾನಿಗಳಲ್ಲ ಕೇಳಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next