Advertisement

ಭಾರತದ ನಡುವಿನ ಅಂಚೆ ಸೇವೆಗಳಿಗೆ ಪಾಕಿಸ್ಥಾನ ತಡೆ

09:47 AM Oct 22, 2019 | Hari Prasad |

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ಶಿಬಿರಗಳ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಪಾಕಿಸ್ಥಾನ ಉಭಯ ರಾಷ್ಟ್ರಗಳ ನಡುವಿನ ಅಂಚೆ ಸೇವೆಯನ್ನು  ಏಕಪಕ್ಷೀಯವಾಗಿ ಸ್ಥಗಿತಗೊಳಿಸಿದೆ. ಭಾರತಕ್ಕೆ ಯಾವುದೇ ಮಾಹಿತಿಯನ್ನು ನೀಡದೆ ಪಾಕಿಸ್ಥಾನ ಏಕಾಏಕಿ ಈ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.

Advertisement

ಈ ಹಿಂದೆ ಕಾಶ್ಮೀರ-ಜಮ್ಮು ಪ್ರದೇಶಕ್ಕೆ  ಇದ್ದ ವಿಶೇಷ ಸ್ಥಾನ ಮಾನ ರದ್ದುಗೊಳಿಸಿದ ಕೆಲ ದಿನಗಳ ನಂತರ ಸಂಜೌತಾ ರೈಲು ಅನ್ನು ತಡೆ ಹಿಡಿದಿದ್ದ ಪಾಕ್‌, ಇದೀಗ ಉಭಯ ರಾಷ್ಟ್ರಗಳ ನಡುವಿನ ಅಂಚೆ ಸೇವೆಗಳಿಗೆ ತಡೆ ನೀಡಿದೆ.

ಪಾಕಿಸ್ತಾನದ ಏಕಪಕ್ಷೀಯ ಧೋರಣೆಯನ್ನು ಪ್ರಶ್ನಿಸಿರುವ ಭಾರತ ಈ ಕ್ರಮವನ್ನು ಖಂಡಿಸಿದ್ದು, ಇದು ಅಂತರ್ ರಾಷ್ಟ್ರೀಯ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಅದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next