Advertisement

ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ್ದು ನಾನೇ: ಯಾರಿದು ನಟ ದೀಪ್ ಸಿಧು, ಸನ್ನಿ ಆಪ್ತ

12:45 PM Jan 27, 2021 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಗಣರಾಜ್ಯೋತ್ಸವ(ಜ.26) ದಿನಾಚರಣೆಯಂದು ರೈತ ಸಂಘಟನೆಗಳು ನಡೆಸಿದ್ದ ಟ್ರ್ಯಾಕ್ಟರ್ ರಾಲಿ ಹಿಂಸಾಚಾರಕ್ಕೆ ತಿರುಗಿತ್ತು. ಅಲ್ಲದೇ ಕೆಂಪು ಕೋಟೆ ಮೇಲೆ ಸಿಖ್ ಮತ್ತು ರೈತರ ಬಾವುಟವನ್ನು ಹಾರಿಸಲಾಗಿತ್ತು. ಏತನ್ಮಧ್ಯೆ ಕೆಂಪುಕೋಟೆ ಬಳಿ ಬಾವುಟ ಹಾರಿಸಿದ ವ್ಯಕ್ತಿ ಯಾರು? ಆ ವ್ಯಕ್ತಿಗೂ ರೈತ ಸಂಘಟನೆಗೂ ಸಂಬಂಧ ಇದೆಯಾ ಎಂಬ ಚರ್ಚೆ ಆರಂಭವಾಗಿದೆ.

Advertisement

ಇದನ್ನೂ ಓದಿ:Flipkart Sale: ಹಲವು ಆಫರ್, ಕೈಗೆಟುಕುವ ದರದಲ್ಲಿ ದುಬಾರಿ ಮೊಬೈಲ್ ಗಳು

ಬಾವುಟ ಹಾರಿಸಿದ್ದು ನಾನೇ; ನಟ ದೀಪ್ ಸಿಧು

ಘಟನೆ ಬಗ್ಗೆ ತೀವ್ರ ಆಕ್ರೋಶವಾಗತೊಡಗುತ್ತಿದ್ದಂತೆಯೇ ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರಾಲಿ ವೇಳೆ ಕೆಂಪು ಕೋಟೆ ಬಳಿ ಸಿಖ್ ಧರ್ಮದ ಬಾವುಟವನ್ನು ಹಾರಿಸಿದ್ದು ನಾನೇ ಎಂಬುದಾಗಿ ಪಂಜಾಬಿ ನಟ ದೀಪ್ ಸಿಧು ಒಪ್ಪಿಕೊಂಡಿದ್ದಾರೆ.

Advertisement

ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಸದಸ್ಯರಾಗಿರುವ ದೀಪ್ ಸಿಧು ಪ್ರಚೋದನಕಾರಿ ಭಾಷಣ ಮಾಡಿ ತಮ್ಮ ಬೆಂಬಲಿಗರನ್ನು ಕೆಂಪುಕೋಟೆಯತ್ತ ಕರೆದೊಯ್ದಿದ್ದರು ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿಧು, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ತಾನು ಮತ್ತು ತಮ್ಮ ಬೆಂಬಲಿಗರು ರಾಷ್ಟ್ರಧ್ವಜವನ್ನು ತೆಗೆದುಹಾಕಿಲ್ಲ. ಆದರೆ ಕೆಂಪುಕೋಟೆ ಮೇಲೆ ಸಾಂಕೇತಿಕ ಪ್ರತಿಭಟನಾರ್ಥವಾಗಿ “ನಿಶಾನ್ ಸಾಹೀಬ್” ಧ್ವಜವನ್ನು ಏರಿಸಿರುವುದಾಗಿ ತಿಳಿಸಿದ್ದಾರೆ. ನಿಶಾನ್ ಸಾಹೀಬ್ ಬಾವುಟ ಸಿಖ್ ಧರ್ಮದ ಗುರುತಾಗಿದೆ. ಇದು ಎಲ್ಲಾ ಗುರುದ್ವಾರದಲ್ಲಿ ಕಂಡು ಬರುತ್ತದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ದೆಹಲಿ ಟ್ರ್ಯಾಕ್ಟರ್ ರಾಲಿ ವೇಳೆ ಹಿಂಸಾಚಾರ; ನ್ಯಾಯಾಂಗ ತನಿಖೆ ನಡೆಸಿ: ಸುಪ್ರೀಂಗೆ ಪಿಐಎಲ್

ಮಂಗಳವಾರ(ಜನವರಿ 26) ಸಂಜೆ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿರುವ ಸಿಧು, ನಮ್ಮದು ಯಾವುದೇ ಪೂರ್ವಯೋಜಿತ ಕೃತ್ಯವಲ್ಲ. ಇದಕ್ಕೆ ಯಾವುದೇ ಕೋಮು ಬಣ್ಣ ಬಳಿಯಬೇಕಾದ ಅಗತ್ಯವಿಲ್ಲ ಮತ್ತು ಮೂಲಭೂತವಾದಿಗಳ ಕೈವಾಡವಿಲ್ಲ. ಕೇವಲ ಕಾಯ್ದೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ನಿಶಾನ್ ಸಾಹೀಬ್ ಮತ್ತು ರೈತರ ಧ್ವಜಗಳನ್ನು ಹಾರಿಸಿರುವುದಾಗಿ ತಿಳಿಸಿದ್ದು, ಕಿಶಾನ್ ಮಜ್ದೂರ್ ಏಕ್ತಾ ಘೋಷಣೆ ಕೂಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ನಟ ಸನ್ನಿ ಡಿಯೋಲ್ ಅವರು 2019ರ ಲೋಕಸಭಾ ಚುನಾವಣೆ ವೇಳೆ ಗುರುದಾಸ್ ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ನಟ ಸಿಧು ನಿಕಟವರ್ತಿಯಾಗಿದ್ದರು. ಸನ್ನಿ ಈಗ ಸಂಸದರಾಗಿದ್ದು, ಕಳೆದ ಡಿಸೆಂಬರ್ ತಿಂಗಳಿನಿಂದ ರೈತರ ಪ್ರತಿಭಟನೆಯಲ್ಲಿ ಸಿಧು ಪಾಲ್ಗೊಂಡ ಬಳಿಕ ಸನ್ನಿ ಅಂತರ ಕಾಯ್ದುಕೊಂಡಿದ್ದಾರೆನ್ನಲಾಗಿದೆ.

ಮತ್ತೊಂದು ವರದಿ ಪ್ರಕಾರ, ಸಿಧು ಸನ್ನಿ ಡಿಯೋಲ್ ಅವರ ನಿಕಟವರ್ತಿಯಾಗಿದ್ದು, ಈ ಹಿಂದೆ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದ ದೀಪ್ ಸಿಧು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿ ತೆಗೆಯಿಸಿಕೊಂಡಿದ್ದ ಫೋಟೋ ಈಗ ವೈರಲ್ ಆಗಿರುವುದಾಗಿ ವಿವರಿಸಿದೆ.

ಸಿಧುವನ್ನು ದೂರ ಇಟ್ಟಿದ್ದ ರೈತ ಸಂಘಟನೆಗಳು:

ದೀಪ್ ಸಿಧು ಆರಂಭದಿಂದಲೂ ನಮ್ಮ ಪ್ರತಿಭಟನೆಯ ದಿಕ್ಕನ್ನು ತಪ್ಪಿಸಲು ಯತ್ನಿಸಿರುವುದಾಗಿ ಸ್ವರಾಜ್ ಅಭಿಯಾನ್ ಮುಖಂಡ ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ. ಶಂಭು ಗಡಿಯಲ್ಲಿ ಸಿಧು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಾಗ ಅವರ ಚಲನವಲನ, ಚಟುವಟಿಕೆ ಗಮನಿಸಿದ ಬಳಿಕ ಈ ವ್ಯಕ್ತಿಯಿಂದ ದೂರ ಉಳಿಯುವಂತೆ ರೈತ ಸಂಘಟನೆಗಳು ನಿರ್ಧರಿಸಿದ್ದವು ಎಂದು ತಿಳಿಸಿದ್ದಾರೆ.

ದೀಪ್ ಸಿಧು ಹಿನ್ನಲೆ:

ದೀಪ್ ಸಿಧು 2015ರಲ್ಲಿ ಪಂಜಾಬಿಯ ರಮ್ತಾ ಜೋಗಿ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಗೆ ಪ್ರವೇಶಿಸಿದ್ದರು. ಈ ಸಿನಿಮಾವನ್ನು ಬಾಲಿವುಡ್ ಖ್ಯಾತ ನಟ ಧರ್ಮೇಂದ್ರ ಅವರ ಬ್ಯಾನರ್ ನಡಿಯಲ್ಲಿ ನಿರ್ಮಿಸಲಾಗಿತ್ತು. ಐದಾರು ಸಿನಿಮಾಗಳಲ್ಲಿ ನಟಿಸಿರುವ ಸಿಧು ಎನ್ ಐಎ (ರಾಷ್ಟ್ರೀಯ ತನಿಖಾ ದಳ) 2021ರ ಜನವರಿ 21ರಂದು ಸಿಖ್ ಫಾರ್ ಜಸ್ಟೀಸ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next