Advertisement

Indian 3: ʼಇಂಡಿಯನ್‌ -2ʼ ನಿಂದ ಅಪಾರ ನಷ್ಟ; ಮೂರನೇ ಭಾಗ ನೇರವಾಗಿ ಓಟಿಟಿಯಲ್ಲಿ ರಿಲೀಸ್?

03:16 PM Oct 03, 2024 | Team Udayavani |

ಚೆನ್ನೈ: ನಟ ಕಮಲ್‌ ಹಾಸನ್‌ (Actor Kamal) ಪ್ರಧಾನ ಭೂಮಿಕೆಯ ಬಹು ನಿರೀಕ್ಷೆ ಹುಟ್ಟಿಸಿದ್ದ ʼಇಂಡಿಯನ್‌ -2ʼ (Indian 2) ಹೀನಾಯವಾಗಿ ಸೋತಿತು. ಆ ಮೂಲಕ ಶಂಕರ್‌ – ಕಮಲ್‌ ʼಇಂಡಿಯನ್‌ʼ ಬಳಿಕ ಮತ್ತೆ ಮೋಡಿ ಮಾಡುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಯಿತು.

Advertisement

ಇದನ್ನೂ ಓದಿ: Tollywood: ಸಮಂತಾ – ನಾಗ ಚೈತನ್ಯ ಬಗ್ಗೆ ಸಚಿವೆ ಸುರೇಖಾ ಹೇಳಿಕೆಗೆ ಇಡೀ ಟಾಲಿವುಡ್‌ ಆಕ್ರೋಶ

ಥಿಯೇಟರ್‌ನಲ್ಲಿ ಮುಗ್ಗರಿಸಿದ ಬಳಿಕ ಓಟಿಟಿಯಲ್ಲಿ ಬಂದಿದ್ದ ಶಂಕರ್‌ (Director Shankar) ನಿರ್ದೇಶನದ ʼಇಂಡಿಯನ್‌ -2ʼ ಅಲ್ಲೂ ಕೂಡ ಅಷ್ಟಾಗಿ ಸದ್ದು ಮಾಡಿಲ್ಲ. ಸದ್ಯ ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ (Thug Life) ಸಿನಿಮಾದತ್ತ ಮುಖ ಮಾಡಿದ್ದಾರೆ. ಆದರೆ ಅವರ ʼಇಂಡಿಯನ್-3‌ʼ (Indian 3)  ಸಿನಿಮಾದ ಬಗ್ಗೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ.

ʼಇಂಡಿಯನ್‌ -2ʼ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಚಿತ್ರತಂಡ ʼಇಂಡಿಯನ್-3‌ʼ ಬಗ್ಗೆ ಎಚ್ಚರಿಕೆ ವಹಿಸಲು ಶುರು ಮಾಡಿದೆ. ʼಇಂಡಿಯನ್‌ -2ʼ ಸಿನಿಮಾದಿಂದ ಉಂಟಾದ ನಷ್ಟವನ್ನು ಪರಿಗಣಿಸಿಕೊಂಡು ನಿರ್ಮಾಪಕರು ʼಇಂಡಿಯನ್‌ -3ʼ ಸಿನಿಮಾವನ್ನು ನೇರವಾಗಿ ಓಟಿಟಿಯಲ್ಲೇ ರಿಲೀಸ್‌ ಮಾಡುವ ಯೋಜನೆಯ ಬಗ್ಗೆ ಆಲೋಚನೆ ಮಾಡಿದ್ದಾರೆ ಎಂದು ʼಡೆಕ್ಕನ್ ಹೆರಾಲ್ಡ್‌ʼ ವರದಿ ಮಾಡಿದೆ.

Advertisement

ಈ ಬಗ್ಗೆ ಚಿತ್ರತಂಡದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ನೆಟ್‌ ಫ್ಲಿಕ್ಸ್‌ ನಲ್ಲಿ ʼಇಂಡಿಯನ್‌ -3 ನೇರವಾಗಿ ಸ್ಟ್ರೀಮಿಂಗ್‌ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಮಲ್‌ ಹಾಸನ್‌ ಮಣಿರತ್ನಂ ಅವರ ʼಥಗ್ ಲೈಫ್ʼ ಮತ್ತು KH 237 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೊಂದೆಡೆ ಶಂಕರ್‌ ರಾಮ್‌ ಚರಣ್‌ ಅವರ ʼಗೇಮ್‌ ಚೇಂಜರ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next