Advertisement

ಹರಿದ್ವಾರದಲ್ಲಿ ಅಟಲ್‌ ಚಿತಾಭಸ್ಮ ವಿಸರ್ಜನೆ

06:00 AM Aug 20, 2018 | |

ಲಖನೌ: ಕಳೆದ ಗುರುವಾರ ನಿಧನರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಚಿತಾಭಸ್ಮವನ್ನು ಉತ್ತರ ಪ್ರದೇಶದ ಹರಿದ್ವಾರದಲ್ಲಿ ಗಂಗಾನದಿಯಲ್ಲಿ ಭಾನುವಾರ ವಿಸರ್ಜಿಸಲಾಯಿತು. ಹರ್‌ ಕಿ ಪೇರಿಯಲ್ಲಿ ಬಿಜೆಪಿ ನಾಯಕರು ಹಾಗೂ ಅಟಲ್‌ ಕುಟುಂಬ ಸದಸ್ಯರು ಚಿತಾಭಸ್ಮ ವಿಸರ್ಜನೆ ಮಾಡಿದರು. ನೂರಾರು ಜನರು ಈ ವೇಳೆ ಸೇರಿದ್ದರು. ಅಟಲ್‌ ಜೀ ಅಮರ್‌ ರಹೇ (ಅಟಲ್‌ ಅಮರರಾಗಲಿ) ಎಂಬ ಉದ್ಘೋಷ ಮೊಳಗಿತು. ಕೇಂದ್ರ ಸಚಿವ ರಾಜನಾಥ್‌ ಸಿಂಗ್‌, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ, ಉ.ಪ್ರ ಸಿಎಂ ಯೋಗಿ ಆದಿತ್ಯನಾಥ, ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ಹಾಜರಿದ್ದರು. ಅಲ್ಲದೆ ಸಾಕುಪುತ್ರಿ ನಮಿತಾ ಕೌಲ್‌ ಭಟ್ಟಾಚಾರ್ಯ ಹಾಗೂ ಇತರ ಕುಟುಂಬ ಸದಸ್ಯರೂ ಹಾಜರಿ ದ್ದರು. ಚಿತಾಭಸ್ಮ ವಿಸರ್ಜನೆಗಾಗಿ ಬ್ರಹ್ಮಕುಂಡ ದಲ್ಲಿ ಎತ್ತರಿಸಿದ ವೇದಿಕೆ ನಿರ್ಮಿಸಲಾಗಿತ್ತು.

Advertisement

ಮಧ್ಯಪ್ರದೇಶದಲ್ಲಿ ಹಲವು ಯೋಜನೆಗಳು: ವಾಜಪೇಯಿ ಸ್ಮರಣಾರ್ಥ ಮಧ್ಯಪ್ರದೇಶ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಘೋಷಿಸಿದೆ. ಪ್ರಶಸ್ತಿ, ಮ್ಯೂಸಿಯಂ ಸ್ಥಾಪನೆ, ಪಾರ್ಕ್‌ ಮತ್ತು ಲೈಬ್ರರಿಗಳನ್ನು ವಾಜಪೇಯಿ ಹೆಸರನಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. ಅಷ್ಟೇ ಅಲ್ಲ, ವಾಜಪೇಯಿ ಕುರಿತ ಅಧ್ಯಾಯವನ್ನು ಮುಂದಿನ ವರ್ಷದಿಂದ ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಲಾಗುತ್ತದೆ.

ಬಕ್ರೀದ್‌ ಸಂಭ್ರಮವಿಲ್ಲ: ವಾಜಪೇಯಿ ಆಪ್ತ ಅಜೀಜ್‌ ರಿಜ್ವಿ ಮನೆಯಲ್ಲಿ ಈ ಬಾರಿಯ ಬಕ್ರೀದ್‌ ಅನ್ನು ಸಂಭ್ರಮದಿಂದ ಆಚರಿಸುತ್ತಿಲ್ಲ. ಉ.ಪ್ರದಲ್ಲಿ ಮಂತ್ರಿಯೂ ಆಗಿದ್ದ ಅಜೀಜ್‌ ರಿಜ್ವಿ ನಿಧನರಾಗಿದ್ದು, ಅವರ ಕುಟುಂಬ ಸದಸ್ಯರು ಈ ನಿರ್ಧಾರ ಮಾಡಿದ್ದಾರೆ. ಅಟಲ್‌ ಹಾಗೂ ಅಜೀಜ್‌ ಆತ್ಮೀಯರಾಗಿದ್ದರು. ಲಖನೌಗೆ ಬಕ್ರೀದ್‌ ವೇಳೆ ವಾಜಪೇಯಿ ಆಗಮಿಸಿದ್ದರೆ, ಇಲ್ಲಿಗೆ ತಪ್ಪದೇ ಬರುತ್ತಿದ್ದರು ಎಂದು ಅಜೀಜ್‌ ರಿಜ್ವಿ ಪತ್ನಿ ಅಸೀಫಾ ಜಮಾನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next