Advertisement

ಬಿಜೆಪಿ ಬೆಂಬಲಿತರಿಗೆ ಅಧಿಕ ಸ್ಥಾನ: ಸಂಪಂಗಿ

06:08 PM Jan 01, 2021 | Team Udayavani |

ಬೇತಮಂಗಲ: ಗ್ರಾಪಂ ಚುನಾವಣೆಯಲ್ಲಿನಡೆದಿರುವ ಮತದಾನದಲ್ಲಿ ಶೇ.70-80 ರಷ್ಟುಮತದಾನ ಬಿಜೆಪಿ ಬೆಂಬಲಿತರ ಪರವಾಗಿ ಮತದಾನ  ಮಾಡಲಾಗಿದೆ ಎಂದು ಕೆಜಿಎಫ್ ಕ್ಷೇತ್ರದ ಮಾಜಿ ಶಾಸಕ ವೈ.ಸಂಪಂಗಿ ಹೇಳಿದರು.

Advertisement

ಗ್ರಾಮದ ಸಮೀಪದ ನಾಗಶೆಟ್ಟಿಹಳ್ಳಿಯ ತಮ್ಮತೋಟದ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿಮಾತನಾಡಿ, ಕೆಜಿಎಫ್ ತಾಲೂಕಿನ 16 ಗ್ರಾಪಂಗಳಲ್ಲಿಯೂ ಬಿಜೆಪಿ ಬೆಂಬಲಿತರೇ ಹೆಚ್ಚಿನಸಂಖ್ಯೆಯಲ್ಲಿ ಆಯ್ಕೆ ಮಾಡುವ ಮೂಲಕ ಜನರುಬಿಜೆಪಿ ಸರ್ಕಾರದ ಸಾಧನೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಆದೇಶದಂತೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿಯೂ ಬಿಜೆಪಿಬೆಂಬಲಿತರ ಪರವಾಗಿ ಚುನಾವಣಾ ಪ್ರಚಾರ ಮಾಡಿದಹಿನ್ನೆಲೆ ಗ್ರಾಮೀಣ ಭಾಗದ ಒಟ್ಟು 293 ಸದಸ್ಯರಿಗೆ ಸುಮಾರು 160ಕ್ಕೂ ಹೆಚ್ಚು ಮಂದಿ ಬಿಜೆಪಿ ಪಕ್ಷದ ಕಾರ್ಯಕರ್ತರೇ ಆಯ್ಕೆಯಾಗಿದ್ದಾರೆ ಎಂದರು.

16 ಗ್ರಾಪಂಗಳಲ್ಲಿ ಸುಮಾರು 10-12 ರಷ್ಟು ಗ್ರಾಪಂಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಬಿಜೆಪಿ ಬೆಂಬಲಿತರೇ ಆಯ್ಕೆಯಾಗಿದ್ದಾರೆ ಎಂದರು. ತಾಪಂ ಮಾಜಿ ಅಧ್ಯಕ್ಷ ಮಮತಾ ರಮೇಶ್‌, ಗ್ರಾಪಂ ಮಾಜಿ ಅಧ್ಯಕ್ಷ ಮುನಿಯಪ್ಪ, ಮುಖಂಡರಾದ ವೆಂಕಟರೆಡ್ಡಿ,ಧರಣಿ, ಲಕ್ಷ್ಮಿಪತಿ, ಮುನಿಸ್ವಾಮಿ ರೆಡ್ಡಿ, ರಾಧಕೃಷ್ಣಪ್ಪ, ಅಪ್ಪಿ, ಮುರಳಿ, ಪುರುಷೋತ್ತಮ್‌ (ಪ್ರಸಾದ್‌),ನಾರಾಯಣಸ್ವಾಮಿ, ಸುನೀಲ್‌, ಪ್ರಸಾದ್‌, ಪುರುಷೋತ್ತಮ್‌ ಸೇರಿದಂತೆ ನೂತನ ಗ್ರಾಪಂ ಸದಸ್ಯರು ಹಾಗೂ ಮುಖಂಡರು ಹಾಜರಿದ್ದರು.

ಮಾಜಿ ಶಾಸಕ ಸುಧಾಕರ್‌ ಬಣ ಮೇಲುಗೈ :

ಚಿಂತಾಮಣಿ: ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ 29 ಗ್ರಾಪಂಗಳ ಪೈಕಿ ಮಾಜಿ ಶಾಸಕ ಸುಧಾಕರ್‌ಬೆಂಬಲಿತರು 17, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರ ಬೆಂಬಲಿಗರು 8 ಗ್ರಾಪಂಗಳಲ್ಲಿ ಮೇಲುಗೈ ಸಾಧಿಸಿದ್ದಾರೆ ಎನ್ನಲಾಗಿದೆ.

Advertisement

ಮಾಜಿ ಶಾಸಕ ಸುಧಾಕರ್‌ ಬೆಂಬಲಿಗರುಇರಗಂಪಲ್ಲಿ, ಎಸ್‌. ರಾಗುಟ್ಟಹಳ್ಳಿ, ಕಡದಲಮರಿ, ಮುರುಗಮಲ್ಲ, ಪೆದ್ದೂರು, ನಂದಿಗಾನಹಳ್ಳಿ, ದೊಡ್ಡಗಂಜೂರು, ಊಲವಾಡಿ, ಮುನುಗನಹಳ್ಳಿ, ಕುರುಬೂರು, ಉಪ್ಪರಪೇಟೆ, ಕತ್ತಿರಗುಪ್ಪೇ, ಶೆಟ್ಟಿಹಳ್ಳಿ,ಕೋಟಗಲ್‌, ಭೂಮಿಶೆಟ್ಟಿಹಳ್ಳಿ ಪಂಚಾಯಿತಿಗಳಲ್ಲಿ ಮೇಲುಗೈ ಸಾಧಿಸಿದ್ದಾರೆ.

ಶಾಸಕ ಕೃಷ್ಣಾರೆಡ್ಡಿ ಬೆಂಬಲಿತರು, ಬಟ್ಲಹಳ್ಳಿ, ಯಗವಕೋಟೆ, ಆನೂರು, ಚಿನ್ನಸಂದ್ರ, ತಳಗವಾರ,ಕಾಗತಿ, ಸಂತೇಕಲ್ಲಹಳ್ಳಿ, ಮಸ್ತೇನಹಳ್ಳಿ ಗ್ರಾಪಂಗಳಲ್ಲಿ ಮೇಲುಗೈ. ಕೋನಪ್ಪಲ್ಲಿ, ಪೆರುಮಾಚನಹಳ್ಳಿ,ಹಿರೇಕಟ್ಟಿಗೇನಹಳ್ಳಿ ಹಾಗೂ ಕೈವಾರ ಗ್ರಾಪಂ ಅತಂತ್ರವಾಗಿದೆ. ಚಿಂತಾಮಣಿ ಕ್ಷೇತ್ರಕ್ಕೆ ಒಳಪಡುವ ಚಿಲಕಲನೇಪುಹೋಬಳಿ, ಚಿಲಕಲನೇರ್ಪು ಕಾಂಗೆಸ್‌ ಬೆಂಬಲಿತರಪಾಲಾಗಿದ್ದು, ಮಿಟ್ಟಹಳ್ಳಿ, ಕೆಂಚಾರ್ಲಹಳ್ಳಿ, ಏನಿಗಿದಲೆ,ಬುರುಡುಗುಂಟೆ, ಕೋರ್ಲಪರ್ತಿ ಗ್ರಾಪಂಗಳುಜೆಡಿಎಸ್‌ ಬೆಂಬಲಿತರ ಪಕ್ಷಗಳ ಪಾಲಾಗಿವೆ. ತಾಲೂಕಿನ 35 ಗ್ರಾಪಂ ಪೈಕಿ 556 ಅಭ್ಯರ್ಥಿಗಳಭವಿಷ್ಯ ಹೊರಬಂದಿದ್ದು, 16 ಸ್ಥಾನ ಅವಿರೋಧ ಆಯ್ಕೆನಡೆದಿತ್ತು. 29 ಗ್ರಾಪಂಗಳ 479 ಸದಸ್ಯರ ಪೈಕಿ 272 ಸುಧಾಕರ್‌ ಬೆಂಬಲಿಗರು ಗೆದ್ದರೆ, 194 ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next