Advertisement
ಮದುವೆ, ಜಾತ್ರೆ, ಉತ್ಸವ, ಹೊಲಗದ್ದೆಗಳಲ್ಲಿ ಕೂಲಿ ಮಾಡುವವರು, ಟೀ ಅಂಗಡಿ, ಹೋಟೆಲ್, ಅರಳಿಕಟ್ಟೆ, ಎಲ್ಲಿ ನೋಡಿದರೂ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಸ್ಥಳೀಯವಾಗಿ ರಾಜಕೀಯ ವಿಶ್ಲೇಷಕರು ಎನಿಸಿಕೊಂಡರಿಗೆ ಈ ಬಾರಿ ಬೇಡಿಕೆ. ಅವರ ಮಾತು ಕೇಳಲು ಎಲೆ ಅಡಿಕೆ, ಟೀ, ಕಾಫಿ ಯಾರಿಗೆ ಎಷ್ಟು ಮತ ಬಂದಿವೆ, ಯಾರೂ ಗೆಲ್ಲಬಹುದು, ಚುನಾವಣೆ ಯಲ್ಲಿ ಎಷ್ಟು ಖರ್ಚು ಮಾಡಿದ್ದಾರೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.
Related Articles
Advertisement
ಟೀ ಅಂಗಡಿ ರಾಜಕೀಯ ಚರ್ಚಾ ಕೇಂದ್ರ: ಸಾಮಾಜಿಕ ಜಾಲತಾಣಗಳಲ್ಲಿನ ಚುನಾವಣೆ ಕುರಿತ ಚರ್ಚೆ ತಣ್ಣಗಾಗಿದೆ. ಆದರೆ, ನಗರ ಹಾಗೂಗ್ರಾಮೀಣ ಭಾಗದ ಟೀ ಅಂಗಡಿ, ಹೋಟೆಲ್‌ಗಳಲ್ಲಿಬೆಳಗ್ಗೆ 6 ಗಂಟೆಗೆ ಪ್ರಾರಂಭ ಆಗುವ ಚರ್ಚೆಗಳುರಾತ್ರಿ ಬಾಗಿಲು ಹಾಕುವ ತನಕ ನಡೆಯುತ್ತವೆ. 10 ರೂ. ಕೊಟ್ಟು ಟೀ, ಕಾಫಿ ಕುಡಿಯುವ ಮಂದಿ ಕನಿಷ್ಠ ಎರಡ್ಮೂರು ತಾಸು ಚರ್ಚೆಯಲ್ಲಿ ತೊಡಗುವ ಮೂಲಕ ಫಲಿತಾಂಶದ ದಿನ ಬೇಗ ಬರಲೆಂದು ಚರ್ಚಿಸುತ್ತಿದ್ದಾರೆ. ಯಾರು ಏನೇ ಲೆಕ್ಕಾಚಾರ ಮಾಡಿ ದರೂ ಡಿ.30ರಂದು ಪ್ರಕಟವಾಗುವ ಫಲಿತಾಂಶದವರೆಗೂ ಕಾಯಲೇಬೇಕು. ಆಗ ಯಾರು ಗೆದ್ದಿದ್ದಾರೆ, ಸೋತಿದ್ದಾರೆ ಎಂಬುದು ತಿಳಿಯುತ್ತದೆ.
ಚುನಾವಣೆ ನಡೆದ ಮೇಲೆ ಸೋಲು ಗೆಲುವಿನ ಲೆಕ್ಕಾಚಾರ ಮಾಡುವುದು ಮಾಮೂಲು, ಲೋಕಸಭೆ,ವಿಧಾನಸಭೆಗೆ ಹೋಲಿಸಿದರೆ ಗ್ರಾಮ ಪಂಚಾಯಿತಿ ಸ್ವಲ್ಪ ವಿಭಿನ್ನವಾಗಿರುತ್ತದೆ. ಅಭ್ಯರ್ಥಿಗಳು ನಮ್ಮ ಕೈಗೆ ಸಿಗುತ್ತಾರೆ. ಹಾಗಾಗಿ ಯಾರು ಗೆದ್ದರೆ ಒಳೆಯದು, ಯಾರಿಗೆ ಎಷ್ಟು ಮತ ಬಂದಿರಬಹುದು ಎಂದು ಚರ್ಚೆಗಳು ನಡೆಯುತ್ತಿವೆ. -ರಾಜಕುಮಾರ್, ಹರಳಹಳ್ಳಿ ಗ್ರಾಮದ ಮುಖಂಡ.
–ಶಾಮಸುಂದರ್ ಕೆ.ಅಣ್ಣೇನಹಳ್ಳಿ