Advertisement

Gold ಬಳಿಕ ಬೆಳ್ಳಿಗೂ ಹಾಲ್‌ಮಾರ್ಕ್‌ ಚಿಹ್ನೆ ಕಡ್ಡಾಯ ಚಿಂತನೆ:ಜೋಶಿ

12:18 AM Jan 07, 2025 | Team Udayavani |

ಹೊಸದಿಲ್ಲಿ: ಚಿನ್ನದ ಆಭರಣಗಳಂತೆ ಬೆಳ್ಳಿಯ ಆಭರಣ ಮತ್ತು ಇತರ ಸಾಧನಗಳಿಗೂ ಹಾಲ್‌ಮಾರ್ಕ್‌ ಗುರುತು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಅದರ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಿ ಎಂದು ಬಿಐಎಸ್‌ಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಸೂಚಿಸಿದ್ದಾರೆ. ಬಿಐಎಸ್‌ನ 71ನೇ ಸ್ಥಾಪನಾ ದಿನ ಕಾರ್ಯ­ಕ್ರಮದಲ್ಲಿ ಮಾತನಾಡಿದ ಅವರು, ಹಾಲ್‌ಮಾರ್ಕ್‌ ಬಗ್ಗೆ ಗ್ರಾಹಕರಿಂದ ಬೇಡಿಕೆ ಇದೆ ಎಂದರು. ಸದ್ಯಕ್ಕೆ ಬೆಳ್ಳಿ ಮೇಲಿನ ಹಾಲ್‌ಮಾರ್ಕ್‌ ಸ್ವಇಚ್ಛಾ ವಿಧಾನವಾಗಿದೆ ಕಡ್ಡಾಯವಾದರೆ ಅಕ್ಷರ, ಸಂಖ್ಯೆ­ಯೊ­ಳಗೊಂಡ 6 ಅಂಕಿಗಳನ್ನು ಮುದ್ರಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next