Advertisement

ಬಾಹ್ಯಾಕಾಶಕ್ಕೆ ನೆಗೆಯಲಿರುವ ಮೊದಲ ಸೌದಿ ಮಹಿಳೆ

08:37 PM Sep 22, 2022 | Team Udayavani |

ರಿಯಾದ್‌: ಕಾರು ಚಾಲನೆಗೆ ಮಹಿಳೆಯರಿಗೆ ಅನುಮತಿ ಕಲ್ಪಿಸಿದ ನಾಲ್ಕು ವರ್ಷಗಳ ನಂತರ ಬಾಹ್ಯಾಕಾಶಕ್ಕೆ ಮೊದಲ ಬಾರಿಗೆ ಮಹಿಳೆಯನ್ನು ಕಳುಹಿಸಲು ಸೌದಿ ಅರೇಬಿಯಾ ಮುಂದಾಗಿದೆ.

Advertisement

ದೀರ್ಘ‌ ಮತ್ತು ಅಲ್ಪಾವಧಿ ಬಾಹ್ಯಾಕಾಶ ಪ್ರಯಾಣಕ್ಕೆ ಗಗನಯಾತ್ರಿಗಳಿಗೆ ತರಬೇತಿ ನೀಡುವ ತನ್ನ ಮೊದಲ ಬಾಹ್ಯಾಕಾಶ ಯೋಜನೆಗೆ ಸೌದಿ ಅರೇಬಿಯಾ ಗುರುವಾರ ಚಾಲನೆ ನೀಡಿತು. ಈ ಯೋಜನೆಯು ಸೌದಿಯ ಮಹಾತ್ವಾಕಾಂಕ್ಷೆಯ “ವಿಷನ್‌ 2030’ರ ಭಾಗವಾಗಿದೆ. ಯೋಜನೆಯ ಅನುಸಾರ ಪುರುಷ ಗಗನಯಾತ್ರಿಯೊಂದಿಗೆ ಒಬ್ಬ ಮಹಿಳಾ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.

“ಈ ಯೋಜನೆಯು ಆರೋಗ್ಯ, ಸುಸ್ಥಿರತೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಆದ್ಯತೆಯ ಕ್ಷೇತ್ರಗಳಲ್ಲಿ ವೈಜ್ಞಾನಿಕ ಸಂಶೋಧನೆಗಳು ಮತ್ತು ಪ್ರಯೋಗಗಳನ್ನು ನಡೆಸಲು ಸೌದಿ ಗಗನಯಾತ್ರಿಗಳಿಗೆ ಅನುವು ಮಾಡಿಕೊಡಲಿದೆ,’ ಎಂದು ಸೌದಿ ಬಾಹ್ಯಾಕಾಶ ಆಯೋಗ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next